1. ಸುದ್ದಿಗಳು

MFOI 2023 Day 02: ದೆಹಲಿಯಲ್ಲಿ ಕನ್ನಡಿಗರ ಮನದ ಮಾತು!

Hitesh
Hitesh
ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಯಲ್ಲಿ ಕರ್ನಾಟಕದ ರೈತರು

ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ನ ಎರಡನೇ ದಿನದಲ್ಲಿ ಕರ್ನಾಟಕದ ಹಲವು ರೈತರು ತಮ್ಮ ಅನುಭವದ ಮಾತನ್ನು ಹಂಚಿಕೊಂಡಿದ್ದಾರೆ.

ಮಿಲಿನಿಯೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023 ಮಹೀಂದ್ರ ಟ್ರಾಕ್ಟರ್ಸ್‌ ಪ್ರಯೋಜಕತ್ವಕ್ಕೆ ಕರ್ನಾಟಕದ ಪ್ರಗತಿಪರ

ರೈತ ಮಹಿಳೆ ಕವಿತಾ ಮಿಶ್ರಾ ಅವರು ಆಗಮಿಸಿದ್ದು, ಅವರೊಂದಿಗೆ ಹಲವು ರೈತರು ಆಗಮಿಸಿದ್ದಾರೆ.

ಕರ್ನಾಟಕದ ರೈತರು ಕೃಷಿ ಜಾಗರಣದ ಮಿಲಿನೇಯರ್‌ ಫಾರ್ಮರ್‌ ಅವಾರ್ಡ್‌ 2023 ಹಾಗೂ ಅವರ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.

ಕೃಷಿಜಾಗರಣವು ರೈತರು ಸಹ ಶ್ರೀಮಂತರಾಗಬಹುದು. ಕೋಟಿಗಳಲ್ಲಿ ಮಾತನಾಡಬಹುದು ಎನ್ನುವುದನ್ನು ನಂಬುತ್ತದೆ. ದೇಶಕ್ಕೆ ಅನ್ನ ನೀಡುವ ಕೈಗಳನ್ನು ಗುರುತಿಸುವ ಪ್ರಯತ್ನ ನಮ್ಮದಾಗಿದೆ. ಇದೇ ಕಾರಣಕ್ಕಾಗಿ ಮಿಲಿಯೇನರ್‌ ಫಾರ್ಮರ್‌ ಆಫ್‌ ಇಂಡಿಯಾ 2023ಅನ್ನು ಆಯೋಜಿಸಲಾಗಿದೆ. ಇದಕ್ಕೆ ಮಹೀಂದ್ರ ಟ್ರಾಕ್ಟರ್ಸ್‌ ಮುಖ್ಯ ಪ್ರಾಯೋಜಿಕತ್ವ ವಹಿಸಿದ್ದು, ಹಲವು ಸಂಸ್ಥೆಗಳು ಸಹಕಾರ ನೀಡಿವೆ. RFOI ಅಂದರೆ ರಿಚೆಸ್ಟ್‌ ಫಾರ್ಮರ್‌ ಆಫ್‌ ಇಂಡಿಯಾ ಹಾಗೂ ಮಿಲಿಯನೇರ್‌ ಫಾರ್ಮರ್‌ ಆಫ್‌ ಇಂಡಿಯಾ 2023ರನ್ನು ನಾವು ಪರಿಚಯಿಸಿದ್ದೇವೆ. ರೈತರಿಗೆ ಪ್ರಶಸ್ತಿ ನೀಡುವ ಕೃಷಿ ಜಾಗರಣದ ಈ ಪ್ರಯತ್ನ ದೇಶದಲ್ಲೇ ಮೊದಲು ಎನ್ನುವುದು ನಮ್ಮ ಹೆಮ್ಮೆ.

ಎಂ.ಸಿ ಡೊಮಿನಿಕ್‌ ಕೃಷಿ ಜಾಗರಣದ ಸಂಸ್ಥಾಪಕ ಹಾಗೂ ಮುಖ್ಯ ಸಂಪಾದಕ ಹಾಗೂ ಕೃಷಿ ಜಾಗರಣದ ಮ್ಯಾನೇಜಿಂಗ್‌ ಡೈರೆಕ್ಟರ್‌ ಶೈನಿ ಡೊಮಿನಿಕ್‌. 

ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರ ಮಾತು

ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಅವರು ಯಶೋಗಾಥೆಯನ್ನು ಹಂಚಿಕೊಂಡರು. ರೈತರು ಸಹ ಸಾವಿರಾರು ಕೋಟಿ ರೂಪಾಯಿಯನ್ನು ಗಳಿಸಬಹುದು.

ಅದಕ್ಕೆ ದೀರ್ಘ ಅವಧಿ ಹಾಗೂ ತಾತ್ಕಾಲಿಕ ಅವಧಿ ಎಂದು ಎರಡು ಮಾದರಿಯ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಜಾಗರಣದ ಕಾರ್ಯಕ್ಕೆ ಮೆಚ್ಚುಗೆ

ಕೃಷಿ ಜಾಗರಣದ ಕಾರ್ಯಕ್ಕೆ ಪ್ರಗತಿಪರ ರೈತ ಮಹಿಳೆ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರನ್ನು ಗುರುತಿಸಿ ಸನ್ಮಾನ ಮಾಡುವುದು ಒಳ್ಳೆಯ

ಬೆಳವಣಿಗೆ ಇದರಿಂದ ಇನ್ನಷ್ಟು ರೈತರು ಪ್ರೇರಣೆ ಪಡೆಯಲಿದ್ದಾರೆ ಎಂದು ಹೇಳಿದರು.

ಮಧುಕೇಶ್ವರ ಹೆಗಡೆ: ಕರ್ನಾಟಕದ ಕಾರವಾರದ ಶಿರಸಿ ತಾಲ್ಲೂಕಿನ ಪ್ರಗತಿಪರ ರೈತ ಹಾಗೂ ಜೇನು ಕೃಷಿಯಲ್ಲಿ ಯಶಸ್ಸು ಸಾಧಿಸಿರುವ ಮಧುಕೇಶ್ವರ

ಹೆಗಡೆ ಅವರು ಸಹ ಅವರ ಅನುಭವವನ್ನು ಹಂಚಿಕೊಂಡರು. ಕೃಷಿ ಜಾಗರಣ ಈ ರೀತಿ ರೈತರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಯೋಗಾನಂದ ಮೂರ್ತಿ: ಕರ್ನಾಟಕದ ಮತ್ತೊಬ್ಬ ಪ್ರಗತಿಪರ ರೈತರಾದ ಯೋಗಾನಂದ ಮೂರ್ತಿ ಅವರು ಸಹ ಸಂತೋಷ ಹಂಚಿಕೊಂಡರು.

ಯೋಗಾನಂದ ಅವರು ಕೃಷಿಯಲ್ಲಿ ಬಹಳಷ್ಟು ಸಾಧನೆಯನ್ನು ಮಾಡಿದ್ದಾರೆ.

ಮಿಶ್ರ ಬೆಳೆಯನ್ನು ಬೆಳೆಯುತ್ತಿರುವ ಅವರು ತೆಂಗು, ಅಡಿಕೆ, ಪಪ್ಪಾಯಿ, ನೆರಳೆ, ಸಪೋಟ ಸೇರಿದಂತೆ ಹಲವು ಮಿಶ್ರ ಬೆಳೆಗಳನ್ನು ಬೆಳೆದಿದ್ದಾರೆ.

ಅವರು ಸಹ ಕೃಷಿ ಜಾಗರಣದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಅನಿಲ್‌ಕುಮಾರ್‌: ಇನ್ನು ಕರ್ನಾಟಕದ ಕೊಪ್ಪಳದ ಅನಿಲ್‌ಕುಮಾರ್‌ ಅವರು ಸಹ ಅವರ ಅನುಭವವನ್ನು ಹಂಚಿಕೊಂಡಿದ್ದಾರೆ.

ಇವರು ಹೈನುಗಾರಿಕೆ, ಮೇಕೆ ಸಾಕುವುದು ಸೇರಿದಂತೆ ಮಿಶ್ರ ಹಾಗೂ ಸಾವಯವ ಕೃಷಿ ಮೂಲಕ ಗುರುತಿಸಿಕೊಂಡಿದ್ದಾರೆ.  

Published On: 07 December 2023, 12:55 PM English Summary: MFOI 2023 Day 02: Kannadigas speak their minds in Delhi!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.