ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ತಂದೆ ಕೇಶವರೆಡ್ಡಿ ಅವರಿಗೆ ಕೊರೋನಾ ಸೋಂಕು ಇರುವುದನ್ನು ಸ್ವತಃ ಸುಧಾಕರ್ ಅವರೇ ನಿನ್ನೆ ಟ್ವಿಟರ್ ತಿಳಿಸಿದ್ದರು. ಇದೀಗ ಕುಟುಂಬದ ಮತ್ತಿಬ್ಬರಿಗೆ ಕರೊನಾ ಸೋಂಕು ವಕ್ಕರಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈಗ ಅವರ ಪತ್ನಿ ಹಾಗೂ ಮಗಳಿಗೂ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಕುರಿತು ಸಚಿವರೇ ಟ್ವಿಟನಲ್ಲಿ ಮಾಹಿತಿ ಖಚಿಪಡಿಸಿದ್ದಾರೆ.
ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ
ಇನ್ನು ಸುಧಾಕರ್ ಅವರ ತಂದೆ ಕೇಶವರೆಡ್ಡಿ ಅವರು ಚಿಕ್ಕಬಳ್ಳಾಪುರದ ಜಿಲ್ಲಾ ಪಂಚಾಯ್ತಿಯ ಹಾಲಿ ಸದಸ್ಯರು. ಕಳೆದ ಜೂನ್ 19ರಂದು ಜಿಲ್ಲಾಧಿಕಾರಿ ಆರ್. ಲತಾ ಅವರ ಹುಟ್ಟುಹಬ್ಬಕ್ಕೆ ಕೇಶವರೆಡ್ಡಿ ಅವರೇ ಸ್ವತಃ ಹೋಗಿ, ನೇರವಾಗಿ ಶುಭಾಶಯ ಕೋರಿದ್ದರು. ಚಿಕ್ಕಬಳ್ಳಾಪುರದಲ್ಲಿನ ಸಚಿವರ ಕಚೇರಿಯಲ್ಲಿಯೂ ಕೇಶವರೆಡ್ಡಿ ಅವರು ಸ್ಥಳೀಯ ಮುಖಂಡರಗಳೊಂದಿಗೆ ಸಭೆ ನಡೆಸಿದ್ದರು. ಇದರಿಂದಾಗಿ ಆತಂಕ ಇನ್ನೂ ಹೆಚ್ಚಾಗಿದೆ.
Share your comments