1. ಸುದ್ದಿಗಳು

ಜನಸಾಮಾನ್ಯರಿಗೆ ಬಿಗ್‌ ಶಾಕ್‌: LPG ಸಿಲಿಂಡರ್‌ ಬೆಲೆಯಲ್ಲಿ ಭಾರೀ ಏರಿಕೆ

Maltesh
Maltesh
Massive hike in LPG cylinder prices

1..

ರಾಜ್ಯದಲ್ಲಿ ಅಡಿಕೆ ಬೆಳೆಯಲ್ಲಿ ಹಳದಿ ಎಲೆ ರೋಗವನ್ನು ಸಂಶೋಧಿಸಲು ಮತ್ತು ನಿಯಂತ್ರಿಸಲು 197 ಕೋಟಿ ರೂ.ಗಳನ್ನು ಮಂಜೂರು ಮಾಡುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿದೆ. ಇತ್ತೀಚೆಗೆ ರಾಜ್ಯದಲ್ಲಿ ಹಳದಿ ರೋಗ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಕೃಷಿ ಸಚಿವಾಲಯದ ತಜ್ಞರ ಸಮಿತಿಯು ರೋಗವನ್ನು ನಿಯಂತ್ರಿಸಲು ಆಳವಾದ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದೆ. ಈ ರೋಗವು ಗಾಳಿಯಲ್ಲಿ ಹರಡುವುದರಿಂದ ಮುಂದಿನ ದಿನಗಳಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶಗಳಿಗೆ ರೋಗ ಹರಡುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಅಡಿಕೆ ಬೆಳೆಗಳ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಸಮಿತಿಯು ತಿಳಿಸಿದೆ. ಸದ್ಯ ಈ ರೋಗದ ಆಳವಾದ ಸಂಶೋಧನೆಗೆ ಅಗತ್ಯವಾದ 197 ಕೋಟಿಯನ್ನು ಮಂಜೂರು ಮಾಡುವಂತೆ ಸರ್ಕಾ ಕೇಂದ್ರದತ್ತ ಮುಖ ಮಾಡಿದೆ.

2..

ತಿಂಗಳ ಆರಂಭದಲ್ಲೆ ಮತ್ತೇ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಹೌದು ಗೃಹ ಬಳಕೆಯ ಅಡುಗೆ ಸಿಲಿಂಡರ್‌ ಬೆಲೆಯಲ್ಲಿ ಮತ್ತೇ ಹೆಚ್ಚಳವಾಗಿದೆ. ಕಳೆದ ಕೆಲ ತಿಂಗಳಿನಿಂದ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದು ಇದೀಗ 50 ರೂನಷ್ಟು ಹೆಚ್ಚಳ ಕಂಡಿದೆ. 14 ಕೆಜಿಯ ಗೃಹ ಬಳಕೆಯ LPG ಸಿಲಿಂಡರ್‌ ಬೆಲೆಯಲ್ಲಿ 50 ರೂ ಹೆಚ್ಚಳವಾದರೆ 19 ಕೆಜಿಯ ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ 350 ರೂ ಹೆಚ್ಚಳವಾಗಿದೆ. ಇನ್ನು ಈ ಹೊಸ ಬೆಲೆಯು ಇಂದಿನಿಂದಲೇ ಅನ್ವಯವಾಗಲಿದೆ. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗೃಹ ಬಳಕೆಯ LPG ಸಿಲಿಂಡರ್‌ ಬೆಲೆ 1103 ಇದ್ದರೆ ವಾಣಿಜ್ಯ ಸಿಲಿಂಡರ್‌ ಬೆಲೆ 2120 ರೂಗಳನ್ನು ತಲುಪಿದೆ.

3..

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೊಸ ಹೊಸ ಭರವಸೆಗಳನ್ನು ನೀಡುವುದು ತರಾವರಿ ಆಶ್ವಾಸನೆಗಳನ್ನು ನೀಡುವುದು ಮಾಮೂಲಿ. ಇದೀಗ ಮಾಜಿ ಸಚಿವ ಹಾಗೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಇಂತಹದ್ದೇ ಒಂದು ಆಶ್ವಾಸನೆಯನ್ನು ನೀಡಿದ್ದಾರೆ. ಹಾಗೂ ಈ ಭರವಸೆಗಳನ್ನು ಹಾಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆಗದಿದ್ದರೆ, ನಾದ್ದರೆ, ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಹೌದು ಹೆಚ್ಚು ನೆಗೆಟಿವ್‌ ವಿಚಾರಗಳಿಂದಲೇ ಖ್ಯಾತಿಯಲ್ಲಿರುವ ಜನಾರ್ದನ ರೆಡ್ಡಿ ಅವರು ಇತ್ತೀಚಿಗೆ ಹೊಸ ಪಕ್ಷವನ್ನು ಪ್ರಾರಂಭಿಸಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ದಿನದಿಂದ ದಿನಕ್ಕೆ ಚುನಾವಣಾಯ ಆರ್ಕಷಣೆಯ ಕೇಂದ್ರಬಿಂದುವಾಗುವತ್ತ ಸಾಗಿದೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ವರ್ಷ ರೈತನ ಅಕೌಂಟ್‌ಗೆ ರೂ.15,000 ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ರೈತರ ಮನೆ ಬಾಗಿಲಿಗೆ ಅಧಿಕಾರಿಗಳು ಆಗಮಿಸಿ ಸಮಸ್ಯೆ ಆಲಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದಾರೆ.

4..

ರೈತರು ತಮ್ಮ ಕೃಷಿ ಉತ್ಪನ್ನಗಳೊಂದಿಗೆ ಆಹಾರ ಭದ್ರತೆಗೆ ಅನುಕರಣೀಯ ಕೊಡುಗೆ ನೀಡುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಬಿಹಾರದ ಸಮಸ್ತಿಪುರದಲ್ಲಿರುವ ಡಾ.ರಾಜೇಂದ್ರ ಪ್ರಸಾದ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ರೈತರು ಹೊಲದಲ್ಲಿ ಕೆಲಸ ಮಾಡದಿದ್ದರೆ ಹಣವಿದ್ದರೂ ಹೊಟ್ಟೆ ತುಂಬಲು ಆಹಾರ ಧಾನ್ಯಗಳು ಸಿಗುವುದಿಲ್ಲ.  ನಮ್ಮ ಕೃಷಿ ಕ್ಷೇತ್ರವು 140 ಕೋಟಿ ಭಾರತೀಯರಿಗೆ ಬಹಳ ಮುಖ್ಯವಾಗಿದೆ, ರೈತರನ್ನು ಗೌರವದಿಂದ ಕಾಣಬೇಕು" ಎಂದು ಅವರು ಹೇಳಿದರು.  ದೇಶದಲ್ಲಿ ಕೃಷಿಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಈ ಕ್ಷೇತ್ರಕ್ಕೆ ಆದ್ಯತೆ ನೀಡಿದೆ.  2014ರ ಮೊದಲು ಕೃಷಿ ಕ್ಷೇತ್ರದ ಬಜೆಟ್ ಸುಮಾರು 25,000 ಕೋಟಿ ರೂ.ಗಳಷ್ಟಿದ್ದರೆ ಇಂದು 1,25,000 ಕೋಟಿ ರೂ. ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು.

5..

ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಪ್ರಾರಂಭವಾಗಬೇಕಿದ್ದ ಟೋಲ್ ಶುಲ್ಕ ಸಂಗ್ರಹವನ್ನು ಮಾರ್ಚ್‌ಗೆ ಮುಂದೂಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಸೂಚನೆಯ ಪ್ರಕಾರ ಸದ್ಯ ಈ ಎಕ್ಸ್‌ಪ್ರೆಸ್‌ವೇನಲ್ಲಿ ಟೋಲ್‌ ಸಂಗ್ರಹವನ್ನು ಮುಂದೂಡಲಾಗಿದೆ. ಸರ್ವಿಸ್‌ ರಸ್ತೆ ಕಾಮಗಾರಿ ಪೂರ್ತಿಯಾಗದೆ ಹಾಗೇ ಇದ್ದರು ಶುಲ್ಕ ವಸೂಲಾತಿ ಮಾಡಲು ನಿರ್ಧಾರ ಕೈಗೊಂಡಿದ್ದಕ್ಕೆ ಜನಸಾಮಾನ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟೋಲ್ ಸಂಗ್ರಹವನ್ನು 2023 ರ ಮಾರ್ಚ್ 14 ರವರೆಗೆ ಮುಂದೂಡಲಾಗಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 11ರಂದು ಈ ಹೆದ್ದಾರಿಯನ್ನು ಉದ್ಘಾಟನೆ ಮಾಡಲಿದ್ದಾರೆ.

Published On: 01 March 2023, 12:37 PM English Summary: Massive hike in LPG cylinder prices

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.