ಮಾವಿನ ಬೆಳೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಮುಖ್ಯ ಕೀಟ ಹಾಗೂ ರೋಗಗಳ ನಿರ್ವಹಣೆಗಾಗಿ ರೈತರು ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾವಿನ ಬೆಳೆಯಲ್ಲಿ ಎರಡನೇ ಸಿಂಪರಣೆಯನ್ನು ಕಾಯಿ ಕಚ್ಚಿದ ಕೂಡಲೇ ಲ್ಯಾಮಡಾ ಸೆಹೆಲೋತ್ರಿನ್ 5 ಇ.ಸಿ. (ಕರಾಟೆ/ಟಾಟಾರೇವಾ) 0.5 ಮಿ.ಲೀ./ಲೀ. ಮತ್ತು ಡೈನೋಕ್ಯಾಪ್ 1 ಮಿ.ಲೀ./ಲೀ (ಕ್ಯಾರಾಥೇನ್) ಅಥವಾ ಮೈಕ್ಲೋಬ್ಯುಟಾನಿಲ್ (ಇಂಡಕ್ಸ್/ಸಿಸ್ಥೇನ್/ಬೂನ್) 1 ಗ್ರಾಂ 1 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಹೂವಿನ ಹಂತದಲ್ಲಿ ಗಂಧಕ ಅಥವಾ ತಾಮ್ರ ಮೂಲದ ಔಷಧಿಗಳನ್ನು ಬಳಸಬಾರದು. ಅದರ ಬದಲಿಗೆ ನೀರಿನಲ್ಲಿ ಕರಗುವ ಗಂಧಕ (ಸಲ್ಫಾಟ್, ಸಲ್ಪೇಕ್ಸ್, ಥೈಯೋಮಿನಿಲ್) 3 ಗ್ರಾಂ. 1 ಲೀ. ನೀರಿಗೆ ಡೈನೋಕ್ಯಾಪ್ (1 ಮಿಲೀ.ಲೀ.) ಅಥವಾ ಟ್ರೈ ಆಡೆಮೆಪಾನ್ (ಬೆಲಿಟಾನ್) ವನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದರಿಂದ ಬೂದಿರೋಗ, ಹೂ ಗೊಂಚಲು ಒಣಗುವಿಕೆ ಮತ್ತು ಚಿಬ್ಬು ರೋಗವನ್ನು ಕೂಡ ಹತೋಟಿ ಮಾಡಬಹುದಾಗಿದೆ.
ಹೂ ಒಣಗುವ ರೋಗ (Blossom Blight) ಹತೋಟಿಗೆ ಹೆಕ್ಸಾಕೊನಝೋಲ್ (ಕಾಂಟಾಫ್)-10 ಗ್ರಾಂ./10 ಲೀ. ಅಥವಾ ಅವತಾರ್ 10 ಗ್ರಾಂ./10 ಲೀ. ಅಥವಾ ನೇಟಿವೊ 10 ಮಿ.ಲೀ./10 ಲೀ. ಅಥವಾ ಸಾಫ್ 20 ಗ್ರಾಂ./10 ಲೀ. ದ್ರಾವಣವನ್ನು ಸಿಂಪರಣೆ ಮಾಡಬೇಕು. ಸಾವಯವ ಕೃಷಿ ಪದ್ದತಿಯಡಿ ಬೇವಿನ ಸೋಪು (10 ಗ್ರಾಂ./ಲೀ) ಹಾಗೂ Beaveriabassiana (5 ಮಿ.ಲೀ./ಲೀ.) ದ್ರಾವಣವನ್ನು ಉಪಯೋಗಿಸಬಹುದಾಗಿದೆ. ಕಾಯಿ ನಿಂಬೆ ಹಣ್ಣಿನ ಗಾತ್ರವಾದಾಗ ಮರಗಳಿಗೆ ನೀರು ಕೊಡುವುದು ಹಾಗೂ ಎರಡನೇ ಬಾರಿಯ ಮಾವು ಸ್ಪೆಷಲ್ ಮಿಶ್ರಣವನ್ನು ಸಿಂಪರಣೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ (ಹಾರ್ಟಿ ಕ್ಲಿನಿಕ್) ವಿಷಯ ತಜ್ಞರಾದ ಮಂಜುನಾಥ ಪಾಟೀಲ ಇವರ ಮೊಬೈಲ್ ನಂಖ್ಯೆ 7090832016ಗೆ ಸಂಪರ್ಕಿಸಲು ಕೋರಲಾಗಿದೆ.
Share your comments