1. ಸುದ್ದಿಗಳು

PM Kisan 14ನೇ ಕಂತಿನ ಹಣ ಪಡೆಯಲು ತಪ್ಪದೇ ಈ 3 ಕೆಲಸ ಮಾಡಲು ಸೂಚನೆ! ಇಲ್ಲಾಂದ್ರೆ ಬರಲ್ಲ ಹಣ

Hitesh
Hitesh
Make sure to do this for PM Kisan 14th installment money!

ರೈತರಿಗಾಗಿ ಕೇಂದ್ರ ಸರ್ಕಾರವು ಪರಿಚಯಿಸಿರುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನ ಮಂತ್ರಿ ಕಿಸಾನ್‌ (PM-Kisan Scheme)ಯೋಜನೆಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಅಪ್ಡೇಟ್‌ ಬಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan Samman Nidhi)  ಯೋಜನೆಯ 14ನೇ ಕಂತಿನ ಪ್ರಯೋಜನಗಳನ್ನು ಪಡೆಯಲು,

ಕಿಸಾನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಕೆಲವು ನಿರ್ದಿಷ್ಟ   ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸೂಚಿಸಿದೆ.

ಇಲಾಖೆ ನೀಡಿದ ಸೂಚನೆ ಪ್ರಕಾರ, ಕಿಸಾನ್‌ ವೆಬ್‌ಸೈಟ್‌ನಲ್ಲಿ ರೈತರು ತಮ್ಮ ಭೂ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.

ನಂತರ ಆಧಾರ್ (aadhar card) ಅನ್ನು ಸಕ್ರಿಯ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕು ಹಾಗೂ ತಮ್ಮ ತಮ್ಮ EKYCಯನ್ನು ಪೂರ್ಣಗೊಳಿಸಿರಬೇಕು ಎಂದು ತಿಳಿಸಿದೆ.

ಪಿ.ಎಂ ಕಿಸಾನ್‌ ಯೋಜನೆಯ ಲಾಭ ಪಡೆಯಲು ಎಲ್ಲ ರೈತರು ಇದನ್ನು ಕಡ್ಡಾಯವಾಗಿ ಮಾಡಬೇಕು ನಿರ್ದೇಶನ ನೀಡಲಾಗಿದೆ.

ಇನ್ನು ರಾಜ್ಯದಲ್ಲಿಯೂ ಪಿಎಂ ಕಿಸಾನ್‌ ಕುರಿತು ಕೆಲವು ನಿರ್ದಿಷ್ಟ (Aadhar Card) ನಿರ್ದೇಶನಗಳನ್ನು ನೀಡಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದ 6 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದ

4 ಸಾವಿರ ರೂಪಾಯಿ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ, ಇ-ಕೆವೈಸಿ (E-kyc) ಕಡ್ಡಾಯವಾಗಿರುತ್ತದೆ

ಎಂದು ಚಾಮರಾಜನಗರ ಕೃಷಿ ಇಲಾಖೆ ತಿಳಿಸಿದೆ.

ಇ-ಕೆವೈಸಿ ನೋಂದಾಯಿಸಿದ ರೈತರಿಗೆ ಮಾತ್ರ ಇದೇ ಮಾಹೆಯಲ್ಲಿ ಬಿಡುಗಡೆಯಾಗುವ ಮುಂದಿನ ಕಂತಿನ ಆರ್ಥಿಕ ನೆರವು ದೊರೆಯುತ್ತದೆ.

ಜಿಲ್ಲೆಯ ಎಲ್ಲಾ ಅರ್ಹ ರೈತ ಫಲಾನುಭವಿಗಳು ಆರ್ಥಿಕ ನೆರವು ಪಡೆಯಲು ಕಡ್ಡಾಯವಾಗಿ ತುರ್ತಾಗಿ ಇ-ಕೆವೈಸಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗಿರುತ್ತದೆ. 

ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಸಾಮಾನ್ಯ ಸೇವಾ ಕೇಂದ್ರ

ಅಥವಾ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು.

ಇದಲ್ಲದೇ ಪಿ.ಎಂ ಕಿಸಾನ್ ಮೊಬೈಲ್ ಆಪ್ ಬಳಿಸಿ ಮುಖ ಚಹರೆ ಮೂಲಕವು ಸಹ ಇ-ಕೆವೈಸಿ ಮಾಡಿಸಿಕೊಂಡು ಯೋಜನೆಯ

ಸದುಪಯೋಗ ಪಡಿಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಮಧುಸೂದನ್ ಕೋರಿದ್ದಾರೆ.

Published On: 14 June 2023, 12:31 PM English Summary: Make sure to do this for PM Kisan 14th installment money!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.