1. ಸುದ್ದಿಗಳು

ಎಲ್‌ಪಿಜಿ ಸ್ಪೋಟಕ ಸಂಭವಿಸಿದರೆ ಸಿಗಲಿದೆ ದೊಡ್ಡ ಮೊತ್ತದ ವಿಮೆ

LPG Cylinder

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಷ್ಟೇ ಅಲ್ಲ ಹಳ್ಳಿಗಳಲ್ಲಿಯೂ ಪ್ರತಿಯೊಬ್ಬರ ಮನೆಯಲ್ಲಿ ಗ್ಯಾಸ್ ಬಳಸುತ್ತಿರುವುದನ್ನು ನಾವು ನೋಡಿದ್ದೇವೆ. ಸರ್ಕಾರಗಳು ಉಚಿತ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಿದ ನಂತರ ಇದರ ಬಳಕೆಯೂ ಹೆಚ್ಚಾಗಿದೆ.

ಗ್ಯಾಸ್ ಬಳಕೆಯಲ್ಲಿ ಸ್ವಲ್ಪ ಯಾಮಾರಿದರೆ ಸಾಕು, ಎಂತಹ ಅವಘಡಗಳು ಸಂಭವಿಸುತ್ತೇವೆಂಬುದನ್ನು ನಾವು ದಿನನಿತ್ಯ ಪತ್ರಿಕೆಯಲ್ಲಿ ನೋಡುತ್ತಿರುತ್ತೇವೆ. ಇಂತಹ ಅವಘಡಗಳಿಂದ ಆಗುವ ಹಾನಿ, ಪ್ರಾಣಹಾನಿ ಸಂಭವಿಸದರೆ ಅವರ ಕುಟುಂಬ್ಕಕೆ ರಕ್ಷಣೆ ಒದಗಿಸುವುದಕ್ಗಾಗಿಯೇ ವಿಮಾ ಸೌಲಭ್ಯ ಒದಗಿಸಲಾಗಿದೆ.

ಹೌದು, ಎಲ್ಪಿಜಿ ಸ್ಫೋಟವಾಗಿ ಪ್ರಾಣಹಾನಿಯಾದರೆ 50 ಲಕ್ಷ ರೂಪಾಯಿಯವರೆಗೆ ಜೀವ ವಿಮೆ ಸಿಗುತ್ತದೆ. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಅದಕ್ಕೆ ಸಂಪೂರ್ಣ ಮಾಹಿತಿ.

 ಎಲ್ ಪಿ ಜಿ ಅವಘಡದಿಂದ ವ್ಯಕ್ತಿ ಸಾವನ್ನು ಹೊಂದಿದ್ದರೆ ಗ್ಯಾಸ್ ಕಂಪನಿಯಿಂದ  ಆರು ಲಕ್ಷ ರೂಪಾಯಿಗಳು ವಿಮೆ ಸಿಗುತ್ತದೆ.. ಪ್ರತಿ ಇಂತಹ ದುರ್ಘಟನೆಗೆ 30 ಲಕ್ಷದವರೆಗೆ ವೈದ್ಯಕೀಯ ವಿಮೆ ಸೌಲಭ್ಯ ನೀಡಲಾಗುತ್ತಿದೆ.  ಪ್ರತಿ ವ್ಯಕ್ತಿಗೆ 200000 ರೂಪಾಯಿಗಳು ಮತ್ತು ತಕ್ಷಣವೇ 25000 ರೂಪಾಯಿಗಳು ವೈದ್ಯಕೀಯ ಪರಿಹಾರ ನೀಡಲಾಗುತ್ತಿದೆ. ಎಲ್ ಪಿ ಜಿ ಇಂದ ಆಸ್ತಿ ಹಾನಿಯಾದರೆ 200000 ಪರಿಹಾರ ಸಿಗಲಿದೆ.

 ಈ ವಿಮೆ ಕ್ಲೈಂ ಮಾಡೋದು ಹೇಗೆ ಅಂತ ನೋಡಿ

 ಇಂಡಿಯನ್ ಗ್ಯಾಸ್ ಕಂಪನಿ ಮತ್ತು ಭಾರತ್ ಗ್ಯಾಸ್ ಕಂಪನಿಗಳು ಸರ್ಕಾರಕ್ಕೆ ಒಳಪಟ್ಟಿರುವುದರಿಂದ, ನಿಮಗೆ ಒಂದು ದೊಡ್ಡ ಮೊತ್ತದ ವಿಮೆ ಸಿಗಲಿದೆ.ಯಾವುದೇ ವಿಮೆಯನ್ನು ನೀವು ಪಾವತಿಸಬೇಕಾಗಿಲ್ಲ,ಬರೀ ನೀವು ಆ ಕಂಪನಿಗಳಲ್ಲಿ ನಿಮ್ಮ ಹೆಸರನ್ನು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದರೆ. ನೀವು ಇದನ್ನು ಕ್ಲೈಂ ಮಾಡಬಹುದು.ನಿಮಗೆ ನೇರವಾಗಿ ವಿಮೆ ಸಿಗುತ್ತದೆ ಯಾವುದೇ ಹಣ ಪಾವತಿಸಬೇಕಾಗಿಲ್ಲ,

ಗ್ಯಾಸ್ ಸ್ಪೋಟವಾಗಿ ಪ್ರಾಣಿಹಾನಿ ಆಸ್ತಿಹಾನಿಯಾದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನೀವು ದೂರ ನೀಡಬೇಕಾಗುತ್ತದೆ. ಒಂದು ಪತ್ರದಲ್ಲಿ ನಿಮಗಾಗಿರುವ ಹಾನಿ ಮತ್ತು ಹೇಗೆ ಆಯಿತು ಎಂದು ಬರೆದು ಕೊಡಬೇಕು. ನಂತರ ಪೊಲೀಸರು ಬಂದು ತನಿಖೆ ನಡೆಸಿ ಅದು ಖಂಡಿತವಾಗಿ ಸ್ಪೋಟದಿಂದ ಆಗಿದೆ, ಎಂದು ಗೊತ್ತಾದರೆ. ನಿಮಗೆ ವಿಮೆಯನ್ನು ಮಾಡಿಕೊಡಲಾಗುತ್ತದೆ.

ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ

Published On: 25 December 2020, 09:53 AM English Summary: lpg cylinders 50 lakh rupees risk cover

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.