1. ಸುದ್ದಿಗಳು

Lokayukta Raid ರಾಜ್ಯದಲ್ಲಿ ಸಂಚಲ ಮೂಡಿಸಿದ ಬಿಜೆಪಿ ಪುತ್ರನ ಲಂಚ ಪ್ರಕರಣ: 14ದಿನ ನ್ಯಾಯಾಂಗ ಬಂಧನ!

Hitesh
Hitesh
Lokayukta Raid: BJP son's bribery case that created a stir in the state: 14 days judicial custody!

ಬಿಡ್ಲ್ಯೂಎಸ್‌ಎಸ್‌ಬಿ ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್‌ ಅವರ ವಿರುದ್ಧ ಲಂಚ ಪ್ರಕರಣ ಆರೋಪ ಕೇಳಿಬಂದಿದ್ದು, ಕೋಟ್ಯಾಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಇದೀಗ ನ್ಯಾಯಾಂಗ ಬಂಧನವೂ ಆಗಿದೆ. 

Lokayukta Raid ಬಿಜೆಪಿ ಶಾಸಕ ಪುತ್ರನ ಕಚೇರಿಯಲ್ಲಿ ಲೋಕಾಯುಕ್ತ ದಾಳಿ: 6 ಕೋಟಿ ನಗದು ವಶ!

ಈ ಪ್ರಕರಣ ಇದೀಗ ರಾಜಕೀಯ ಹಗ್ಗಜಿಗ್ಗಾಟಕ್ಕೆ ಕಾರಣವಾಗಿದೆ. ಚುನಾವಣೆ ಹೊಸ್ತಿನಲ್ಲಿರುವ ರಾಜಕೀಯ ಪಕ್ಷಗಳು ಈ ಅಸ್ತ್ರವನ್ನು ಬಳಸಿಕೊಳ್ಳಲು ಮುಂದಾಗಿದೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದಲೂ ಶೇ 40 ಕಮೀಷನ್‌ ಹೆಚ್ಚು ಚರ್ಚೆಯಲ್ಲಿದೆ.

ಕಾಂಗ್ರೆಸ್‌ ಪಕ್ಷವು ಶೇ 40 ಪರ್ಸೆಂಟ್‌ ಕಮೀಷನ್‌ ಎನ್ನುವುದನ್ನು ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು,

ಕರ್ನಾಟಕದ ಶೇ 40ರಷ್ಟು ಕಮೀಷನ್‌ ವಿಚಾರವು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಬಂದಿದೆ.

Gold Rate Today ಶುಕ್ರವಾರವೂ ಚಿನ್ನ ಖರೀದಿದಾರರಿಗೆ ನಿರಾಸೆ, ಚಿನ್ನದ ಬೆಲೆ ಹೆಚ್ಚಳ!

ಕಳೆದ ಎರಡು ವರ್ಷಗಳ ಹಿಂದೆಯೇ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದರು.

ಈ ದೂರು ನೀಡಿದ ಮೇಲೆ 40% ಕಮೀಷನ್‌ ವಿಚಾರವೂ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.

ಗುತ್ತಿಗೆದಾರರು ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದ್ದರು.

Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ ಸರ್ಕಾರ! 

ಇದೀಗ ಚುನಾವಣಾ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸುವ ಸಂದರ್ಭದಲ್ಲಿಯೂ 40 ಲಕ್ಷ ಲಂಚವನ್ನು ವಶಕ್ಕೆ ಪಡೆಯಲಾಗಿದೆ.  

ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಬಿಜೆಪಿ ಶಾಸಕರೊಬ್ಬರ ಲಂಚದ ಪ್ರಕರಣ

ಇದೀಗ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಹಗ್ಗಜಿಗ್ಗಾಟಕ್ಕೆ ಕಾರಣವಾಗಿದೆ.  

ಮಾಡಾಳ್ ಪ್ರಶಾಂತ್‌ ಕಚೇರಿಯಲ್ಲಿ ಲೋಕಾಯುಕ್ತ ತಂಡವು ಗುರುವಾರ ಸಂಜೆ ದಾಳಿ ಮಾಡಿದೆ.

ಈ ವೇಳೆ 40 ಲಕ್ಷ ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರವನ್ನು ಉಂಟು ಮಾಡಿದ್ದರೆ,

ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಪ್ರಮುಖ ಅಸ್ತ್ರವಾಗಿದೆ.   

ಟ್ವೀಟ್‌ ಮಾಡಿ ಕಾಂಗ್ರೆಸ್‌ ವ್ಯಂಗ್ಯ!

ಚುನಾವಣೆಯ ಸಂದರ್ಭದಲ್ಲೇ ಅದೂ ಬಿಜೆಪಿ ಶಾಸಕರ ಪುತ್ರನ ಮೇಲೆ ಆರೋಪ ಬಂದಿರುವುದು ಬಿಜೆಪಿಯನ್ನು ತೀವ್ರ

ಮುಜುಗುರಕ್ಕೆ ಸಿಲುಕಿಸಿದ್ದರೆ, ಕಾಂಗ್ರೆಸ್‌ ಇದನ್ನು ಅಸ್ತ್ರವಾಗಿ ಬಳಸಿಕೊಂಡಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಶೇ 40 ಪರ್ಸೆಂಟ್‌ ಕಮೀಷನ್‌ ಎಂಬ ವಿಷಯವೂ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ.   

ಈ ಸಂಬಂಧ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, “40 ಪ್ರಸೆಂಟ್‌ ಕಮೀಷನ್‌ಗೆ ದಾಖಲೆ ಕೊಡಿ ಎನ್ನುತ್ತಿದ್ದ ಬಸವರಾಜ ಬೊಮ್ಮಾಯಿ ಅವರೇ

ಇಂದು ಲೋಕಾಯುಕ್ತ ದಾಳಿಯಲ್ಲಿ ಕಮೀಷನ್‌ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ ?

ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ ? ಈಗ ಭ್ರಷ್ಟಾಚಾರಕ್ಕೆ ಹೊಣೆ ಹೊತ್ತು ರಾಜೀನಾಮೆ ಕೊಡುವಿರಾ ?

ನಿಮ್ಮದು 40% ಸರ್ಕಾರ ಎನ್ನಲು ಇನ್ನೇನು ಬೇಕು” ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.  

14ದಿನ ನ್ಯಾಯಾಂಗ ಬಂಧನ

ಆರೋಪಕ್ಕೆ ಸಂಬಂಧಿಸಿದಂತೆ ಮಾಡಾಳ್ ಪ್ರಶಾಂತ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಲೋಕಾಯುಕ್ತ ನ್ಯಾಯಾಲಯದ ಮುಂದೆ ಶುಕ್ರವಾರ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

ಈ ವೇಳೆ ಇನ್ನಷ್ಟು ವಿಚಾರಣೆ ನಡೆಸುವ ಉದ್ದೇಶದಿಂದಾಗಿ ಮಾಡಲ್‌ ಪ್ರಶಾಂತ್‌ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.   

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ?

Published On: 03 March 2023, 11:35 AM English Summary: Lokayukta Raid: BJP son's bribery case that created a stir in the state: 14 days judicial custody!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.