ಕುರಿ, ಮೇಕೆ ಸಾಕಾಣಿಕೆ ಅಥವಾ ಹೈನುಗಾರಿಕೆ ಮಾಡುಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಕುರಿ ಖರೀದಿಸಲು ಹಣವಿಲ್ಲವೆಂದು ಚಿಂತೆ ಮಾಡಬೇಡಿ. ಸರ್ಕಾರ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುವರಿಗೆ ಸಾಲ ಸೌಲಭ್ಯ ಸಹ ಒದಗಿಸಿಕೊಡುತ್ತದೆ.
ಹೌದು ಕುರಿ ಸಾಕಾಣಿಕೆಗೆ ಈಗ ಮನೆಯಲ್ಲಿಯೇ ಕುಳಿತು ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ನಿಮ್ಮ ಜಿಲ್ಲೆಯ, ತಾಲೂಕಿನ ಪಶು ಇಲಾಖೆಯ ಸಿಬ್ಬಂದಿಯೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ನಂತರ ಕುರಿ, ಮೇಕೆ, ಹೈನುಗಾರಿಕೆ ಕುರಿತು ಮಾಹಿತಿ ಮತ್ತು ಸಾಲಸೌಲಭ್ಯ ಒದಗಿಸಲಾಗುವುದು.ಇದಕ್ಕಾಗಿ ನೀವು ಯಾವ ಕಚೇರಿಗಳಿಗೆ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿಯೇ ಕುಳಿತು ರೈತರಿಗಾಗಿ ಸ್ಥಾಪಿಸಲಾದ ಉಚಿತ ದೂರವಾಣಿ ಸಂಖ್ಯೆ ಕರೆ ಮಾಡಬಹುದು.
ಇದನ್ನೂ ಓದಿ: ಆಡು ಸಾಕಾಣಿಕೆ ಮಾಡಿದರೆ ಕೈಯಲ್ಲಿ ಡೆಬಿಟ್ ಕಾರ್ಡ್ ಇದ್ದಂತೆ
ರಾಜ್ಯದ ಪಶುಸಂಗೋಪನಾ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರು ದೂರವಾಣಿ ಸಂಖ್ಯೆ 1800 425 0012 (ಉಚಿತ) ಅಥವಾ 080-23417100 ಕ್ಕೆ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ಕರೆ ಮಾಡಬೇಕು. ಪಶುವೈದ್ಯರು ಮತ್ತು ಇತರೆ ವಿಷಯ ತಜ್ಞರಿಂದ ಅಗತ್ಯ ಮಾಹಿತಿ ಪಡೆಯಬಹುದು. ವಾಟ್ಸ್ ಅ್ಯಪ್ ನಂಬರ್ ದಿಂದಲೂ ಮಾಹಿತಿ ಪಡಯಲಿಚ್ಚಿಸುವವರು ಮೊ.948 391 4000 ಗೆ ಕರೆ ಮಾಡಬೇಕು.
ಪಶುಸಾಕಾಣಿಕೆ, ಪಶುಗಳಿಗೆ ಬರುವ ರೋಗ, ತರಬೇತಿ, ಲಸಿಕೆ, ತಳಿಗಳು ಸೇರಿದಂತೆ ಇತರ ಎಲ್ಲಾ ಮಾಹಿತಿಯೂ ಸಿಗುತ್ತದೆ. ಪಶುಪಾಲನಾ ಇಲಾಖೆಯು, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ 'ಪ್ರಾಣಿ ರೋಗ ಕಣ್ಗಾವಲು ಜಾಲದ ಬಲವರ್ಧನೆ' ಕಾರ್ಯಕ್ರಮದ ಅಡಿಯಲ್ಲಿ ಪಶುಪಾಲಕರಿಗಾಗಿ 'ಸಹಾಯವಾಣಿ' ಯನ್ನು ಆರಂಭಿಸಲಾಗಿದೆ. ಬೆಂಗಳೂರಿನ ಜಂಟಿ ನಿರ್ದೇಶಕರು (ಪಶು ಆರೋಗ್ಯ) ಕಛೇರಿಯಲ್ಲಿ ಈ ಸಹಾಯವಾಣಿ ಆರಂಭಿಸಲಾಗಿದೆ.
ಸಹಾಯವಾಣಿಯ ಮೂಲಕ ಲಭ್ಯವಿರುವ ಮಾಹಿತಿಗಳು:
ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ, ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಕುರಿತಂತೆ ಇಲಾಖೆಯ ತರಬೇತಿ ಕೇಂದ್ರಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ.
ಪಶುಸಂಗೋಪನಾ ಚಟುವಟಿಕೆಗಳಿಗೆ ವಿವಿಧ ಬ್ಯಾಂಕುಗಳಿಂದ ದೊರೆಯಬಹುದಾದ ಸಾಲ ಸೌಲಭ್ಯ ಕುರಿತು ಮಾಹಿತಿ.
ಯಶಸ್ವಿ ಹೈನುಗಾರಿಕೆಗೆ ಅಗತ್ಯವಿರುವ ಮೇವಿನ ಬೆಳೆಗಳ ಬಗ್ಗೆ ಮಾಹಿತಿ.
ತುರ್ತು ಪಶುವೈದ್ಯ ಸೇವೆಗಾಗಿ ಒಳಬರುವ ಕರೆಗಳನ್ನು ಹತ್ತಿರದ ಇಲಾಖಾ ತಾಂತ್ರಿಕ ಸಿಬ್ಬಂದಿ/ಅಧಿಕಾರಿಗೆ ವರ್ಗಾಯಿಸಿ, ಅಗತ್ಯ ಸೇವೆ ದೊರೆಯುವಂತೆ ಸಹಕರಿಸುವುದು.
Share your comments