Modified Mustard ದೇಶದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕುಲಾಂತರಿ (ಬೆನೆಟಿಕಲಿ ಮಾಡಿಫೈಡ್) ಸಾಸಿವೆ ಬೀಜಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮೋದನೆ ನೀಡಿದೆ. ಇದರಿಂದ ರೈತರಿಗೆ ಆಗುವ ಅನುಕೂಲದ ಮಾಹಿತಿ ಇಲ್ಲಿದೆ.
ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!
Gene Modified Mustard ಕುಲಾಂತರಿ ಸಾಸಿವೆ ಬೀಜವನ್ನು ತಳಿಶಾಸ್ತ್ರಜ್ಞ ಮತ್ತು ದೆಹಲಿಯ ವಿಶ್ವವಿದ್ಯಾಲಯದ ಮಾಜಿ ಉಪ ಕುಲಪತಿ ದೀಪಕ್ ಪೆಂಟಲ್ ಅವರ ತಂಡ ಸತತ ಒಂದು ವರ್ಷ ಶ್ರಮವಹಿಸಿ, ಅಭಿವೃದ್ಧಿಪಡಿಸಿದ್ದಾರೆ.
ಕುಲಾಂತರಿ ಸಾಸಿವೆ ಬೀಜವನ್ನು ದೇಶಿಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಇದು ಹೆಚ್ಚು ಇಳುವರಿ ನೀಡುತ್ತದೆ.
ಮುಂದಿನ ಎರಡು ವರ್ಷಗಳಲ್ಲಿ ಕುಲಾಂತರಿ ಸಾಸಿವೆಯನ್ನು ವಾಣಿಜ್ಯ ಬಳಕೆಗಾಗಿ ಇದನ್ನು ಬೆಳೆಯಲು ರೈತರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಹೈಬ್ರಿಡ್ ಕುಲಾಂತರಿ (ಡಿಎಂಎಚ್–11) ಸಾಸಿವೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅನುಮತಿ ನೀಡಿದ್ದು, ಇದು ವಾಣಿಜ್ಯ ಬಳಕೆಯ ಮೊದಲ ಕುಲಾಂತರಿ ಆಹಾರ ಬೆಳೆಯಾಗಿದೆ.
ಈ ಹಿಂದೆ ಬಿ.ಟಿ ಹತ್ತಿ ಬೆಳೆಯುವುದಕ್ಕೆ ಅನುಮತಿ ನೀಡಲಾಗಿತ್ತು. ಇದಾದ ನಂತರದಲ್ಲಿ ಎರಡನೇ ಬೆಳೆಯಾಗಿ ಕುಲಾಂತರಿ ಸಾಸಿವೆ ಬೀಜಕ್ಕೆ ಪರವಾನಗಿ ಸಿಕ್ಕಂತಾಗಿದೆ.
ಐಎಎಸ್ ಅಧಿಕಾರಿಯಿಂದ ಉದ್ಯೋಗ ಕೊಡಿಸುವ ನೆಪದಲ್ಲಿ 20 ಯುವತಿಯರಿಗೆ ಲೈಂಗಿಕ ಕಿರುಕುಳ!
Gene Modified Mustard ಅನ್ನು ತಜ್ಞರ ಸಮಿತಿ ನಡೆಸಿದ ಬಹುಹಂತದ ತಪಾಸಣೆ ಮತ್ತು ಪರಾಮರ್ಶೆಯ ನಂತರ ಇದನ್ನು ಅಭಿವೃದ್ಧಿಪಡಿಸಿದ ದೆಹಲಿ ವಿಶ್ವವಿದ್ಯಾಲಯ ಅಧೀನದ ಬೆಳೆ ಸಸ್ಯಗಳ ಆನುವಂಶಿಕ ಕುಶಲತೆಯ ಕೇಂದ್ರದ ತಳಿ ವಿಜ್ಞಾನಿಗಳಿಗೆ ವಾಣಿಜ್ಯ ಉದ್ದೇಶಕ್ಕೆ ಬೆಳೆಯಲು ಕೇಂದ್ರ ಪರಿಸರ ಸಚಿವಾಲಯ ಅಧೀನದಲ್ಲಿರುವ ಕುಲಾಂತರಿ ನಿಯಂತ್ರಕ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (ಜಿಇಎಸಿ) ಪರವಾನಗಿ ನೀಡಿದೆ.
ಸದ್ಯ ಕೇಂದ್ರ ಪರಿಸರ ಇಲಾಖೆ ನೀಡಿರುವ ಈ ಪರವಾನಗೆ ನಾಲ್ಕು ವರ್ಷಗಳ ವರೆಗೆ ಮಾನ್ಯವಾಗಿರಲಿದೆ.
ಆದರೆ, ಈ ಕುಲಾಂತರಿ ಬೆಳೆಯು ಜೇನು ಹುಳುಗಳು ಮತ್ತು ಇತರ ಪರಾಗಸ್ಪರ್ಶ ಕೀಟಗಳ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಪರಿಸರವಾದಿಗಳ ಆತಂಕದ ಹಿನ್ನೆಲೆಯಲ್ಲಿ ಬೆಳೆಯ ಕಾರ್ಯಕ್ಷಮತೆ ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಅವಕಾಶ ಇದೆ.
'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು!
ಮುಂದಿನ ಎರಡು ವರ್ಷಗಳ ನಂತರ ಅನುಮತಿಯನ್ನು ಮತ್ತೆ ಪರಾಮರ್ಶೆ ಮಾಡಬಹುದಾಗಿದೆ ಎಂದು ತಳಿವಿಜ್ಞಾನಿ ದೀಪಕ್ ಪೆಂಟಲ್ ನೇತೃತ್ವದ ತಂಡಕ್ಕೆ ನೀಡಿರುವ ಪರವಾನಗಿ ಪತ್ರದಲ್ಲಿ ಷರತ್ತನ್ನೂ ವಿಧಿಸಲಾಗಿದೆ.
2002ರಲ್ಲಿ ಹೈಬ್ರಿಡ್ ಡಿಎಂಎಚ್ -11 ಅಭಿವೃದ್ಧಿಪಡಿಸಲಾಗಿತ್ತು. ಐಸಿಎಆರ್ ನಿಗಾದಲ್ಲಿ ನಡೆಸಿದ ತಾಕುಗಳ ಮಟ್ಟದ ಪ್ರಯೋಗಗಳಲ್ಲಿ ಡಿಎಂಎಚ್ -11, ವರುಣಾ ತಳಿಗಿಂತ ಶೇ 28ರಷ್ಟು ಹೆಚ್ಚು ಮತ್ತು ಪ್ರಾದೇಶಿಕ ತಳಿಗಳಿಗಿಂತ ಶೇ 37ರಷ್ಟು ಹೆಚ್ಚು ಇಳುವರಿ ನೀಡಿದೆ.
ಪೆಂಟಲ್ ಅವರ ತಂಡವು ಕುಲಾಂತರಿ ಸಾಸಿವೆ ಬೀಜಗಳನ್ನು ಹಲವು ವರ್ಷ ಕ್ಷೇತ್ರ ಪ್ರಯೋಗ ಮಾಡಿ, ಬೆಳೆ ದತ್ತಾಂಶಗಳ ವಿಶ್ಲೇಷಣೆಯನ್ನೂ ಮಾಡಲಾಗಿತ್ತು.
ನಮ್ಮ ತಂಡದ ವಿಜ್ಞಾನಿಗಳ ಸತತ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದೆ. ಅಲ್ಲದೇ ನಮ್ಮ ತಂಡದ ವಿಜ್ಞಾನಿಗಳ ಜತೆಗೂಡಿ ಈ ಕುಲಾಂತರಿ ಸಾಸಿವೆ ಬೀಜಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಇದಕ್ಕೆ ಪರಿಸರ ಅನುಮತಿ ಸಿಕ್ಕಿರುವುದು ಒಂದು ಹೆಗ್ಗುರುತಿನ ಬೆಳವಣಿಗೆಯಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ತಳಿವಿಜ್ಞಾನಿ ಮತ್ತು ವಿಶ್ರಾಂತ ಕುಲಪತಿ ದೀಪಕ್ ಪೆಂಟಲ್ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಜೀನೋಮ್ ಸಂಪಾದಿತ ಸಸ್ಯಗಳ ಅಭಿವೃದ್ಧಿಗೆ ನಿಯಮಗಳನ್ನು ಸರಳೀಕರಣ ಮಾಡುತ್ತಿದೆ.
ಇದರಿಂದ ಆರ್ಥಿಕತೆಗೆ ಹಲವು ಅವಕಾಶಗಳೂ ಸಹ ಇರುವುದರಿಂದಾಗಿ ಅಗತ್ಯ ತಂತ್ರಜ್ಞಾನ ಒದಗಿಸಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.
Share your comments