ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (Karnatak Vikas Gramin Bank), ಧಾರವಾಡ ಮೂಲದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, 1,111 ದಿನಗಳ ಠೇವಣಿ ಯೋಜನೆಯನ್ನು ಪ್ರಾರಂಭಿಸಿದೆ .
Pig Farming:ಹಂದಿ ಸಾಕಾಣಿಕೆದಾರರಿಗೆ ಬಂಪರ್.. ಶೇ 98 ರಷ್ಟು ಸಬ್ಸಿಡಿ ಸಿಗುತ್ತೆ!
ಶುಕ್ರವಾರ ಧಾರವಾಡದಲ್ಲಿ 'ವಿಕಾಸ ಸಿರಿ ಸಂಪತ್-1111' ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅಧ್ಯಕ್ಷ ಪಿ.ಗೋಪಿ ಕೃಷ್ಣ, (Gopi Krsishna) 1,111 ದಿನದ ಠೇವಣಿಗೆ ಸಾಮಾನ್ಯ ಜನರಿಗೆ ಶೇ.5.70 ಮತ್ತು ಹಿರಿಯರಿಗೆ ಶೇ.6.20 ಬಡ್ಡಿ ನೀಡಲಾಗುತ್ತದೆ. ಕನಿಷ್ಠ ಹತ್ತು ಸಾವಿರ ರೂಪಾಯಿ ಮತ್ತು ಗರಿಷ್ಠ ಎರಡು ಕೋಟಿ ರೂಪಾಯಿಗಳನ್ನು ಯೋಜನೆಯಡಿ ಇರಿಸಬಹುದು ಎಂದು ಮಾಹಿತಿ ನೀಡಿದರು.
TOMATO FARMING AT HOME! ಮನೆಯಲ್ಲಿ ಟೊಮೇಟೊ ಬೆಳೆಯುವುದು?
GOAT FARMING IN KARNATAKA 2022! ಮೇಕೆ ಸಾಕಾಣಿಕೆ! ಹೇಗೆ?
ಸುಧಾರಿತ ಬಡ್ಡಿ ದರ ಅಲ್ಪಾವಧಿಗೆ ಮಾತ್ರ ಲಭ್ಯವಿರುವುದರಿಂದ ಗ್ರಾಹಕರು ಇದರ ಲಾಭ ಪಡೆದುಕೊಳ್ಳುವಂತೆ ಗೋಪಿ ಕೃಷ್ಣ ಸಲಹೆ ನೀಡಿದರು. ಬ್ಯಾಂಕ್ನ(Bank) ಗುರಿಯು ಜನರು ಹಣವನ್ನು ಉಳಿಸಲು ಉತ್ತೇಜಿಸುವುದು ಎಂದು ತಿಳಿಸಿದರು. ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಬ್ಯಾಂಕ್ 629 ಶಾಖೆಗಳನ್ನು ಹೊಂದಿದೆ.
2021-22ರಲ್ಲಿ ಬ್ಯಾಂಕ್ನ ಒಟ್ಟಾರೆ ವ್ಯವಹಾರವು 30,750 ಕೋಟಿ ರೂ. ಠೇವಣಿಗಳ ಒಟ್ಟು ಮೊತ್ತ 17,647 ಕೋಟಿ, ಮುಂಗಡಗಳು ಒಟ್ಟು 13,103 ಕೋಟಿ.
ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಈ ಹಿಂದೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (KVGB) ಸಹ ರೈತರಿಗೆ ಓವರ್ಡ್ರಾಫ್ಟ್ (OD) ಸೌಲಭ್ಯವನ್ನು ಆರಂಭಿಸಿತ್ತು. ಜಮೀನಿನ ಅಂದಾಜು ಮೌಲ್ಯದ ಆಧಾರದ ಮೇಲೆ ರೈತರಿಗೆ ಒಡಿ ಯೋಜನೆ ನೀಡಲಾಗಿದೆ. ಪ್ರತಿ ಎಕರೆ ಕೃಷಿ ಭೂಮಿಗೆ ಗರಿಷ್ಠ 1.5 ಲಕ್ಷ ಮತ್ತು ಪ್ರತಿ ಎಕರೆ ಒಣ ಭೂಮಿಗೆ 1 ಲಕ್ಷ ಮಿತಿಯನ್ನು ನಿಗದಿಪಡಿಸಲಾಗಿದೆ.
ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ (KVGB) ಬಗ್ಗೆ
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕೆನರಾ ಬ್ಯಾಂಕ್ ಪ್ರಾಯೋಜಿಸಿದ ಭಾರತೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್. ಇದು ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಮಾಲೀಕತ್ವದಲ್ಲಿದೆ. ಬ್ಯಾಂಕ್ ಗ್ರಾಮೀಣ ಬಳಕೆದಾರರಿಗೆ ಚಿಲ್ಲರೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತದೆ ಮತ್ತು ಕರ್ನಾಟಕದ ಉತ್ತರ ಮತ್ತು ಪಶ್ಚಿಮ ಕರ್ನಾಟಕದ ಪ್ರದೇಶಗಳಲ್ಲಿ 628 ಶಾಖೆಗಳನ್ನು ಹೊಂದಿದೆ.
Share your comments