ಹೊರ ರಾಜ್ಯ ಮಹಾರಾಷ್ಟ್ರಕ್ಕೆ ಬಸ್ ಸಂಚಾರವು ಸೆಪ್ಟೆಂಬರ್ 19ರಿಂದ ಪುನರಾರಂಭವಾಗಲಿದೆ.
ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಎಸ್’ಆರ್’ಟಿಸಿ ಬಸ್ ಸೇವೆ ಸ್ಥಗಿತವಾಗಿತ್ತು. ಸೆಪ್ಟೆಂಬರ್ 22 ರಿಂದ ಬೆಂಗಳೂರು, ದಾವಣಗೆರೆ, ಮಂಗಳೂರು, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳಿಂದ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಬಸ್ ಸಂಚರಿಸಲಿದೆ.
ಈ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಸಾಂಗ್ಲಿ ಹಾಗೂ ಕೋಲ್ಲಾಪೂರ ವಲಯಗಳಲ್ಲಿ ಸೆಪ್ಟೆಂಬರ್ 21 ರವರೆಗೆ ಕಪ್ರ್ಯೂ ಜಾರಿಯಲ್ಲಿರುವುದರಿಂದ ಮಹಾರಾಷ್ಟ್ರ ರಾಜ್ಯದ ಎಲ್ಲಾ ಸಾರಿಗೆ ಸಂಚಾರವನ್ನು ಸೆಪ್ಟೆಂಬರ್ 22 ರಿಂದ ಪೂರ್ಣ ಆಸನಗಳೊಂದಿಗೆ ಪ್ರಯಾಣಿಸಲು ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು.
ಸಾರ್ವಜನಿಕ ಪ್ರಯಾಣಿಕರು ಮುಂಗಡ ಆಸನಗಳನ್ನು ಕೆ.ಎಸ್.ಆರ್.ಟಿ.ಸಿ.ಯ www.ksrtc.in ವೆಬ್ಸೈಟ್ದಲ್ಲಿ ಹಾಗೂ ಸಂಸ್ಥೆಯ / ಪ್ರಾಂಚೈಸಿ ಕೌಂಟರ್ಗಳಲ್ಲೂ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಮೇಲ್ಕಂಡ ಸಾರಿಗೆ ಬಸ್ ಸೌಲಭ್ಯದ ಸದುಪಯೋಗಪಡೆದುಕೊಳ್ಳಬೇಕೆಂದು ಕೆಎಸ್ಆರ್ಟಿಸಿ ನಿಗಮ ತಿಳಿಸಿದೆ.
Share your comments