1. ಸುದ್ದಿಗಳು

ರೈತ ಸ್ನೇಹಿ ʼಕೃಷಿ ಯಂತ್ರಧಾರೆ ಚಾಲಕʼ ಆಪ್‌ ಬಗ್ಗೆ ನಿಮಗೆಷ್ಟು ಗೊತ್ತು..?

Maltesh
Maltesh
ಸಾಂದರ್ಭಿಕ ಚಿತ್ರ

ಸಾರ್ವಜನಿಕರ ಹಾಗೂ ರೈತರ ಅನಕೂಲಕ್ಕಾಗಿ ರಾಜ್ಯ ಸರ್ಕಾರವು ಸಾಕಷ್ಟು ಅಪ್ಲಿಕೇಶನ್‌ಗಳನ್ನು ಸ್ಥಾಪಿಸಿದೆ. ಇ ಹಲವು ಆಪ್‌ಗಳು ಸಾವರ್ಜನಿಕರಿಗಾಗಿ ಸಾಕಷ್ಟು ರೀತಿಯಲ್ಲಿ ಉಪಯುಕ್ತತೆಯನ್ನು ಹೊಂದಿವೆ. ಅದರಲ್ಲೂ ಕೂಡ ವಿಶೇಷವಾಗು ರೈತಾಪಿ ವರ್ಗಕ್ಕೆ ಈ ಆಪ್‌ಗಳು ಸಾಕಷ್ಟು ಅನೂಕಲಕರವಾಗಿವೆ. ಈ ಆಪ್‌ಗಳ ಮೂಲಕ ತಮ್ಮ ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ರೈತರು ತಿಳಿದುಕೊಳ್ಳಬಹುದಾಗಿದೆ. ಅವುಗಳಲ್ಲಿ ಕೆಲವೊಂದು ಮಹತ್ವದ ಆಪ್‌ಗಳ ಕುರಿತು ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

 

ಕೃಷಿ ಯಂತ್ರಧಾರೆ ಚಾಲಕ (Krishi Yantradhare Driver App)

ಕೃಷಿ ಇಲಾಖೆಯು ಕರ್ನಾಟಕ ಸರ್ಕಾರವು ಹೋಬಳಿ ಮಟ್ಟದಲ್ಲಿ ಕಸ್ಟಮ್ ಬಾಡಿಗೆ ಸೇವಾ ಕೇಂದ್ರವನ್ನು (CHSC) ಸ್ಥಾಪಿಸಲು ನಿರ್ಧರಿಸಿದೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಮನೆ ಬಾಗಿಲಿಗೆ ಯಂತ್ರೋಪಕರಣಗಳನ್ನು ಒದಗಿಸಲು ಸಹಾಯ ಮಾಡುವ ಉದ್ದೇಶದಿಂದ. “ಕೃಷಿ ಯಂತ್ರಧಾರೆ ಡ್ರೈವರ್ ಅಪ್ಲಿಕೇಶನ್” ಅಪ್ಲಿಕೇಶನ್ ಬುಕಿಂಗ್ ಅನ್ನು ಪೂರ್ಣಗೊಳಿಸಲು ಮತ್ತು ಬುಕಿಂಗ್ ಮಾಡಿದ ಅವರ ನಿರ್ದಿಷ್ಟ ಫಾರ್ಮ್‌ಗೆ ತಲುಪಲು ಚಾಲಕನಿಗೆ ಪಾರದರ್ಶಕತೆಯನ್ನು ನೀಡುತ್ತದೆ.

 

ವಿಶೇಷತೆಗಳೇನು..?

ಸೂಕ್ತ ಫಾರ್ಮ್ ಅನ್ನು ತಲುಪಲು ನ್ಯಾವಿಗೇಷನ್.

ಇಂಟರ್ನೆಟ್ ಇಲ್ಲದಿದ್ದಲ್ಲಿ ಆಫ್ಲೈನ್ ವೈಶಿಷ್ಟ್ಯ.

ಸರಿಯಾದ ಯಂತ್ರೋಪಕರಣಗಳ ಮಾಹಿತಿ ಮತ್ತು ವಿತರಣಾ ವಿಳಾಸವನ್ನು ತೋರಿಸುತ್ತದೆ.

ಗುಣಮಟ್ಟದ ಸೇವೆ.

ಆನ್‌ಲೈನ್ ಪಾವತಿ ಮತ್ತು ನಗದು ಪಾವತಿ.

ಬಹು ಭಾಷೆ.

ಉದ್ದೇಶಗಳು:

ಬೆಳೆಗಳ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು.

ಫಾರ್ಮ್ ಗೇಟ್‌ನಲ್ಲಿ ಯಂತ್ರೋಪಕರಣಗಳನ್ನು ಒದಗಿಸುವುದು.

ರೈತರ ಲಾಭದಾಯಕತೆಯನ್ನು ಹೆಚ್ಚಿಸಲು.

ಕಾರ್ಮಿಕರ ಸಮಸ್ಯೆಯನ್ನು ತಗ್ಗಿಸಲು.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಕಾಲದಲ್ಲಿ ಹೈಟೆಕ್ ಯಂತ್ರೋಪಕರಣಗಳ ಸೇವೆಗಳನ್ನು ಒದಗಿಸುವುದು

ಸಮಂಜಸವಾದ ಬಾಡಿಗೆಗಳಲ್ಲಿ ಲಭ್ಯವಿದೆ.

ದಾಮಿನಿ ಆಪ್‌: ಮಿಂಚಿನ ಎಚ್ಚರಿಕೆ

ರೈತರಿಗೆ, ಸಾರ್ವಜನಿಕರಿಗೆ ಸಿಡಿಲಿನ ಕುರಿತು ಮಾಹಿತಿ ನೀಡಲು ಬಂದಿದೆ ದಾಮಿನಿ ಆ್ಯಪ್. ರೈತರಿಗೆ ಆಯಾ ಪ್ರದೇಶದ ಸಿಡಿಲಿನ ಮುನ್ಸೂಚನೆ ಮತ್ತು ಎಚ್ಚರಿಕಯ ಮಾಹಿತಿ ನೀಡುತ್ತದೆ. ಈ ಆ್ಯಪ್ ಪ್ರಸ್ತುತ ಸಿಡಿಲಿನ ಹೊಡೆತಗಳ ನಿಖರ ಸ್ಥಳಗಳನ್ನು ಗುರುತಿಸಿ ನಮ್ಮ ಸುತ್ತಮುತ್ತಲಿನ 20 ರಿಂದ 40 ಚದರ ಕಿ.ಮೀವರೆಗೆ ಸಂಭವನೀಯ ಗುಡುಗು ಸಹಿತ ಸಿಡಲಿನ ಚಲನೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುತ್ತದೆ.

ಮಳೆಗಾಲಕ್ಕಿಂತ ಮುಂಚಿತವಾಗಿ ಅಕಾಲವಾಗಿ ಬರುವ ಮಳೆಯಲ್ಲಿ ಸಿಡಿಲು ಗುಡುಗಿನ ಆರ್ಭಟ ಹೆಚ್ಚಾಗಿರುತ್ತದೆ. ಸಿಡಿಲಿನ ಆರ್ಭಟಕ್ಕೆ ಎಷ್ಟೋ ಜೀವರಾಶಿಗಳು ಪ್ರಾಣ ಕಳೆದುಕೊಳ್ಳುತ್ತವೆ. ವಿಶೇಷವಾಗಿ ರೈತರು ತಮ್ಮ ಜಮೀನುಗಳಲ್ಲಿ ಕೆಲಸ ಮಾಡುವಾಗ, ಕುರಿ ಮೇಕೆಗಳು, ದನಕರುಗಳು ಸಿಡಿಲಿಗೆ ಪ್ರಾಣ ಕಳೆದುಕೊಳ್ಳುತ್ತವೆ.  ಸಿಡಿಲಿನಿಂದ ಪಾರಾಗಲು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ದಾಮಿನಿ ಎಂಬ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ.

Published On: 26 April 2022, 02:47 PM English Summary: Krishi Yantradhare Driver App

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.