1. ಸುದ್ದಿಗಳು

ಕೃಷಿ ಜಾಗರಣ 26ನೇ ವಾರ್ಷಿಕೋತ್ಸವ ಸಂಭ್ರಮ

Maltesh
Maltesh
Krishi Jagran 26th Anniversary Celebration At Silver Oak Dehi

ಕೃಷಿ ಜಾಗರಣ ಮಾಧ್ಯಮ ಸಂಸ್ಥೆ  ನಿನ್ನೆ ತನ್ನ 26 ನೇ  ಸಂಸ್ಥಾಪನಾ ದಿನವನ್ನು ರಾಜಧಾನಿ ದೆಹಲಿಯಲ್ಲಿ ವರ್ಣರಂಜಿತ  ಕಾರ್ಯಕ್ರಮದೊಂದಿಗೆ  ಆಚರಿಸಲಾಯಿತು .   ದೆಹಲಿಯ  ಸಿಲ್ವರ್ ಓಕ್ ನಲ್ಲಿ ಭವ್ಯ ಸಮಾರಂಭವನ್ನು ಆಯೋಜಿಸಲಾಗಿತ್ತು.   ಈ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ನಿವೃತ್ತ IAS ಅಧಿಕಾರಿ ಅಲ್ಫೋನ್ಸ್ ಕಣ್ಣಂತನಮ್ ಮತ್ತು ಇತರ  ಹಲವಾರು ಗಣ್ಯರು ಭಾಗವಹಿಸಿದ್ದರು.

7ನೇ ವೇತನ ಆಯೋಗ: ಸೆಪ್ಟೆಂಬರ್ 28ಕ್ಕೆ ಸಂತಸದ ಸುದ್ದಿ..ಸಂಭಾವನೆಯಲ್ಲಿ ಭಾರೀ ಏರಿಕೆ!

ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ಸಿಬ್ಬಂದಿಯ ಸಾಂಸ್ಕೃತಿಕ ನೃತ್ಯ ಮತ್ತು ಸಂಗೀತವು  ಈ ಕಾರ್ಯಕ್ರಮವನ್ನು ಇನ್ನಷ್ಟು ವರ್ಣರಂಜಿತವಾಗಿಸಿತು .  ವಿವಿಧ ಭಾಷೆಗಳ ಸಿಬ್ಬಂದಿ  ಈ ಕಾರ್ಯಕ್ರಮದಲ್ಲಿ  ಪ್ರದರ್ಶನ ನೀಡಿದರು.

ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್‌: 7 ನೇ ವೇತನ ಆಯೋಗ ರಚಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ

ಕೃಷಿ ಜಾಗರಣ ಸ್ಥಾಪಕರಾದ ಎಂ.ಸಿ.ಡೊಮಿನಿಕ್ ಅವರು ಸ್ವಾಗತ ಭಾಷಣ ಮಾಡಿದರು. ಈ ವೇಳೇ ಕಳೆದ  25 ವರ್ಷಗಳಲ್ಲಿ  ರೈತರ  ಹಿತದೃಷ್ಟಿಯಿಂದ    ಮಾಧ್ಯಮ ಸಂಸ್ಥೆ ಹೇಗೆ ಕ್ರಾಂತಿಕಾರಕವಾಗಿ  ಕೆಲಸ  ಮಾಡಿದೆ ಎಂಬುದನ್ನು ಮೆಲುಕು ಹಾಕಿದರು.  ಕೃಷಿ ಜಾಗರಣ ನಿರ್ದೇಶಕಿ  ಶೈನಿ ಡೊಮಿನಿಕ್ ಕೂಡ  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಳೆದ 25 ವರ್ಷಗಳಿಂದ,  ಕೃಷಿ ಜಾಗರಣ  ರೈತರಿಗೆ ವಿವರಗಳು, ಜ್ಞಾನ, ಮಾಹಿತಿಯನ್ನು   ತಲುಪಿಸಲು  ನಿರಂತರವಾಗಿ ರೈತರೊಂದಿಗೆ  ಸಂಪರ್ಕ ಸಾಧಿಸುತ್ತಿದೆ.  ನಿಯತಕಾಲಿಕೆಗಳು, ಸುದ್ದಿ ಪೋರ್ಟಲ್ ಗಳು,  ಯೂಟ್ಯೂಬ್  ಚಾನೆಲ್ ಗಳು  ಮತ್ತು ಸಾಮಾಜಿಕ   ಮಾಧ್ಯಮಗಳಂತಹ ಅನೇಕ  ಸಂವಹನ   ಮಾಧ್ಯಮಗಳ ಮೂಲಕ ಕೃಷಿ ವಲಯಕ್ಕೆ ಸಂಬಂಧಿಸಿದ ಓದುಗರು ಮತ್ತು  ವೀಕ್ಷಕರನ್ನು ತಲುಪುತ್ತಿದೆ..

ಪಿಎಂ ಕಿಸಾನ್‌: ರೈತರ ಖಾತೆಗಳಿಗೆ 2 ಲಕ್ಷ ಕೋಟಿ ರೂಪಾಯಿಯನ್ನು ವರ್ಗಾಯಿಸಲಾಗಿದೆ-ಪಿಎಂ ಮೋದಿ

25 ವರ್ಷಗಳನ್ನು ಯಶಸ್ವಿಯಾಗಿ  ಪೂರೈಸಿದೆ. ಕೃಷಿ ಜಾಗರಣ  ಯಾವಾಗಲೂ  ಕೃಷಿ ಮತ್ತು ರೈತರನ್ನು ಮುಂದೆ ಕೊಂಡೊಯ್ಯಲು ಶ್ರಮಿಸಿದೆ.   ಕೃಷಿ ಪತ್ರಿಕೋದ್ಯಮದ ವಿಸ್ತರಣೆಗಾಗಿ , ಇತ್ತೀಚಿನ ತಂತ್ರಜ್ಞಾನಗಳು ಮತ್ತು ನವೀನ ಆಲೋಚನೆಗಳೊಂದಿಗೆ   ಮುಂದುವರಿಯಲು ನಿರಂತರ  ಪ್ರಯತ್ನಗಳನ್ನು  ಮಾಡಲಾಗುತ್ತಿದೆ.

Published On: 11 September 2022, 02:46 PM English Summary: Krishi Jagran 26th Anniversary Celebration At Silver Oak Delhi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.