ಕರ್ನಾಟಕ ಲೋಕಸೇವಾ ಆಯೋಗವು(KPSC) ಕರ್ನಾಟಕ ನಾಗರೀಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ನಿಯಮಗಳನ್ವಯ ಈ ಸಹಾಯಕ ನಗರ ಯೋಜಕರು(ಗ್ರೂಪ್ 'ಸಿ') ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ On-line ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮೇ 30, 2022 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ಕೆಪಿಎಸ್‌ಸಿ ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು:
ಕರ್ನಾಟಕ ಲೋಕಸೇವಾ ಆಯೋಗ (KPSC) ಹುದ್ದೆಗಳ ಸಂಖ್ಯೆ: 60
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಯ ಹೆಸರು: ಸಹಾಯಕ ಟೌನ್ ಪ್ಲಾನರ್
ವೇತನ: 33450ರಿಂದ 62600 ರೂ. (ಪ್ರತಿ ತಿಂಗಳು)
Air India ನೇಮಕಾತಿ: ಈಗಲೇ ಅರ್ಜಿ ಸಲ್ಲಿಸಿ!
ಕೆಪಿಎಸ್‌ಸಿ ನೇಮಕಾತಿ 2022ರ ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ: ಕೆಪಿಎಸ್‌ಸಿ ಅಧಿಕೃತ ಅಧಿಸೂಚನೆಯ ಪ್ರಕಾರ ಸಹಾಯಕ ಟೌನ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್ ಇಂಜಿನಿಯರಿಂಗ್ (ಸಿವಿಲ್ ಡ್ರಾಟ್ಸ್‌ಮನ್‌ಶಿಪ್) ನಲ್ಲಿ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮೇ 30, 2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ವಯಸ್ಸಿನ ಸಡಿಲಿಕೆ: SC/ST/Cat-I ಅಭ್ಯರ್ಥಿಗಳು: 05 ವರ್ಷಗಳು Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
ಅರ್ಜಿ ಶುಲ್ಕದ ವಿವರ: ಎಲ್ಲಾ ಅಭ್ಯರ್ಥಿಗಳಿಗೆ ಸಂಸ್ಕರಣಾ ಶುಲ್ಕ: 35 ರೂ. ಅರ್ಜಿ ಶುಲ್ಕ SC/ST/Cat-I & PH ಅಭ್ಯರ್ಥಿಗಳು: ಇಲ್ಲ ಮಾಜಿ ಸೈನಿಕ ಅಭ್ಯರ್ಥಿಗಳು: 50 ರೂ. ಕ್ಯಾಟ್-2ಎ/2ಬಿ/3ಎ ಮತ್ತು 3ಬಿ ಅಭ್ಯರ್ಥಿಗಳು: 300 ರೂ. ಸಾಮಾನ್ಯ ಅಭ್ಯರ್ಥಿಗಳು: 600 ರೂ.
TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ
NDDB ನೇಮಕಾತಿ: ಮಾ. 1,82,200 ಸಂಬಳ!
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ: ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021ರ ಉಪನಿಯಮ 6(2)(ಬಿ) ರನ್ವಯ ಡಿಪ್ಲೊಮಾ , ಪಿಯುಸಿ, ಎಸ್‌ಎಸ್‌ಎಲ್‌ಸಿ ಮತ್ತು ತತ್ಸಮಾನ ವಿದ್ಯಾರ್ಹತ ಅಥವಾ ಪದವಿ ದರ್ಜೆಗಿಂತ ಕಡಿಮೆ ಇರುವ ಇನ್ಯಾವುದೇ ವಿದ್ಯಾರ್ಹತೆಗಳು ಅಗತ್ಯವಿರುವ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯು ಗರಿಷ್ಟ 100 ಅಂಕಗಳೊಂದಿಗೆ ಲಿಖಿತ ಪ್ರಶ್ನೆಗಳನ್ನು ಒಳಗೊಂಡಿದ್ದು, ವಸ್ತುನಿಷ, ಬಹುಆಯ್ಕೆ ಮಾದರಿಯಲ್ಲಿರುತ್ತವೆ. ಈ ಎರಡು ಪತ್ರಿಕೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ (Negative) ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯು ಗಳಿಸುವ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅಂದರೆ ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (114) ಅಂಕಗಳನ್ನು ಕಡಿತಗೊಳಿಸಲಾಗುವುದು, ಅಭ್ಯರ್ಥಿಗಳು ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಹಾಜರಾಗುವುದು ಕಡ್ಡಾಯವಾಗಿರುತ್ತದೆ. ಪತ್ರಿಕೆ 1ರ ಪಠ್ಯಕ್ರಮವು ಈ ಕೆಳಗೆ ನಿರ್ದಿಷ್ಟಪಡಿಸಿದಂತೆ ಇರುತ್ತದೆ, ಪತ್ರಿಕೆ 2 ಅನ್ನು ಈ ಕೆಳಗೆ ನಿರ್ದಿಷ್ಟಪಡಿಸಲಾದಂತೆ ಮೂರು ಭಾಗಗಳಾಗಿ ವಿಭಾಗಿಸಲಾಗಿರುತ್ತದೆ.
ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ:
ಏಪ್ರಿಲ್ 30, 2022 ಆನ್‌ಲೈನ್‌ನಲ್ಲಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 30, 2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಮೇ 31, 2022
ಅಧಿಕೃತ ವೆಬ್‌ಸೈಟ್: kpsc.kar.nic.in
MNCFC ಇಂಟರ್ನ್‌ಶಿಪ್: ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಅಡಿಯಲ್ಲಿ ತರಬೇತಿ ಅವಕಾಶ
Share your comments