1. ಸುದ್ದಿಗಳು

35 ಕೋಟಿ ಲಂಚ ಪ್ರಕರಣ: ಆರೋಪ ಮುಕ್ತರಾಗುವವರೆಗೆ ಹಸಿರು ಶಾಲು ಹಾಕದಂತೆ ಕೋಡಿಹಳ್ಳಿ ಚಂದ್ರಶೇಖರಗೆ ರೈತ ಸಂಘದ ಎಚ್ಚರಿಕೆ!

Kalmesh T
Kalmesh T
Kodihalli Chandrashekhar Farmers' Union warned not to wear green shawl!

ಕೋಡಿಹಳ್ಳಿ ಚಂದ್ರಶೇಖರ ಅವರು ಆರೋಪ ಮುಕ್ತ ಆಗುವವರೆಗೂ ಹಸಿರು ಶಾಲು ಹಾಕುವಂತಿಲ್ಲ,  ಹಾಕಿದರೆ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿರಿಳ: ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ಸಾರಿಗೆ ನೌಕರರ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್‌ 35 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೋಡಿಹಳ್ಳಿ ವಿರುದ್ಧ ರೈತ ಮುಖಂಡರು ಕಿಡಿ ಕಾರಿದ್ದಾರೆ.

ಈ ಹಿನ್ನೆಲೆ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಸಂಘದ ಮುಖಂಡರು, ಆರೋಪ ಮುಕ್ತ ಆಗುವವರೆಗೂ ಹಸಿರು ಶಾಲು ಹಾಕುವಂತಿಲ್ಲ. ಹಾಕಿದರೆ ಕಾರ್ಯಕ್ರಮಕಗಳಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಹುಕೋಟಿ ಲಂಚದ ಆರೋಪ ಮುಕ್ತವಾಗುವವರೆಗೆ ರೈತ ಸಂಘದ ನಾಯಕ ಎಂದು ಹೇಳಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್‌ ಹಸಿರು ಶಾಲು ಹಾಕದೇ ರೈತ ಸಂಘಕ್ಕೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ಹೊರ ಹೋಗಬೇಕು.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ಇಲ್ಲದಿದ್ದರೆ ಅವರ ಎಲ್ಲ ಕಾರ್ಯಕ್ರಮಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ ನಡೆದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯುವ ಸಲುವಾಗಿ 35 ಕೋಟಿ ರೂ. ಲಂಚ ಪಡೆದು ನೌಕರರಿಗೆ ಮತ್ತು ರೈತ ಸಮುದಾಯಕ್ಕೆ ವಂಚನೆ ಮಾಡಿದ್ದಾರೆ.

ಅದೇ ರೀತಿ ಬೆಂಗಳೂರು ಸಿಟಿ ಮಾರುಕಟ್ಟೆಯ ಸೊಪ್ಪಿನ ಹೋರಾಟದಿಂದ ತಿಂಗಳಿಗೆ 60 ಸಾವಿರ ರೂ. ಪಡೆಯುತ್ತಿದ್ದು, ದಾಖಲೆ ಸಮೇತ ರೈತರು ಬಹಿರಂಗಪಡಿಸಿದ್ದಾರೆ. ಹೀಗಾಗಿ ಇಂಥವರು ರೈತರ ಹೆಸರು ಹೇಳುವುದಕ್ಕೂ ಯೋಗ್ಯರಲ್ಲ ಎಂದು ಕಿಡಿಕಾರಿದರು.

ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?

ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…

ಕೇವಲ ಲಂಚಕ್ಕಾಗಿ ಮಾತ್ರ ಹೋರಾಟಗಳನ್ನು ಮಾಡುವ ಕೋಡಿಹಳ್ಳಿ ಚಂದ್ರಶೇಖರ್‌ ಸಾವಿರಾರು ಸಾರಿಗೆ ನೌಕರರು ಬೀದಿಗೆ ಬೀಳುವಂತೆ ಮಾಡಿದ್ದಲ್ಲದೆ ಓರ್ವ ನೌಕರನನ್ನು ಅಮಾನುಷವಾಗಿ ಬಲಿಪಡೆದುಕೊಂಡಿದ್ದಾರೆ.

ನಾಲ್ಕು ನಿಗಮದಲ್ಲಿ ಸುಮಾರು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಹೊಣೆಗಾರರಾಗಿದ್ದಾರೆ ಎಂದು ಆರೋಪಿಸಿದರು.

ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

ಕೋಡಿಹಳ್ಳಿ ಚಂದ್ರಶೇಖರ್‌ ಮೇಲಿರುವ ಆರೋಪವೇನು?

ಕಳೆದ 2021ರ ಏಪ್ರಿಲ್‌ನಲ್ಲಿ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆ ಈಡೇರಿಕೆಗಾಗಿ ಮುಷ್ಕರ ಹೂಡಿದ್ದರು. ಇದರ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿಕೊಂಡಿದ್ದರು.

ಆದರೆ, ಈಗ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್‌ ಅವರಿಗೆ 35 ಕೋಟಿ ರೂ. ಕಿಕ್‌ ಬ್ಯಾಕ್‌ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾರಿಗೆ ಇಲಾಖೆಯ ನೌಕರರು ಈ ವಿಚಾರವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.

Published On: 28 May 2022, 12:46 PM English Summary: Kodihalli Chandrashekhar Farmers' Union warned not to wear green shawl!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.