ಟ್ಯಾಕ್ಸಿ ಅಂದ ತಕ್ಷಣ ಆಟೋ, ಕಾರ್ ನೆನಪಿಗೆ ಬರುತ್ತದೆ. ಆದರೆ ಹೇಳುತ್ತಿರುವುದು ಆಟೋ, ಕಾರ್ ಅಲ್ಲ, ವಾಟರ್ ಟ್ಯಾಕ್ಸಿ, ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆ ಇವು ಕಾರ್ಯನಿರ್ವಹಿಸುತ್ತವೆ. ನೀವು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗುತ್ತದೆ. ಹೌದು ಕೇರಳದಲ್ಲಿ ಮೊಟ್ಟ ಮೊದಲ ಬಾರಿಗೆ 'ವಾಟರ್ ಟ್ಯಾಕ್ಸಿ' ಸೇವೆಯನ್ನು ಅಕ್ಟೋಬರ್ 18 ರಿಂದ ಅಧಿಕೃತವಾಗಿ ಆರಂಭಿಸಲಾಗಿದೆ.
ಈ ಟ್ಯಾಕ್ಸಿ ಸೇವೆ ಸ್ಥಳೀಯರ ದೈನಂದಿನ ಸಾರಿಗೆ ಸಂಪರ್ಕ ವ್ಯವಸ್ಥೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸ ಗೊಳಿಸಲಾಗಿದೆ, ರಸ್ತೆಯಲ್ಲಿರುವ ಟ್ಯಾಕ್ಸಿಗಳಂತೆ ವಾಟರ್ ಟ್ಯಾಕ್ಸಿ ಕಾರ್ಯ ನಿರ್ವಹಿಸಲಿದೆ ಆಲಪ್ಪುಳ ಜಿಲ್ಲೆಯಲ್ಲಿರುವ ಹಿನ್ನೀರಿನಲ್ಲಿ ಈ ವಾಟರ್ ಟ್ಯಾಕ್ಸಿಗೆ ಚಾಲನೆ ನೀಡಲಾಗಿದೆ.
ಈ ಟ್ಯಾಕ್ಸಿಯಲ್ಲಿ 10 ಮಂದಿಗೆ ಮಾತ್ರ ಕುಳಿತುಕೊಳ್ಳಲು ಸ್ಥಳವಾಕಾಶ ಇದ್ದು, ಟ್ಯಾಕ್ಸಿಯು ಗಂಟೆಗೆ 15 ಕಿ.ಮೀ ದೂರ ಸಂಚರಿಸಬಲ್ಲದು. ಹೀಗಾಗೀ ಜನರಿಗೆ ಬಹಳ ವೇಗವಾಗಿ ತಾವು ತಲುಪಬೇಕಾದ ಸ್ಥಳಗಳಿಗೆ ಮುಟ್ಟಲು ವಾಟರ್ ಟ್ಯಾಕ್ಸಿ ಸಹಾಯಕವಾಗುತ್ತದೆ.
ಪ್ರತಿ ಗಂಟೆಯ ಲೆಕ್ಕದಲ್ಲಿ ಹಣ ನೀಡಬೇಕು ಹಾಗೆಯೇ ಸಾಮಾನ್ಯ ಜನರು ಪಾವತಿಸಬಹುದಾದ ಬೆಲೆಯನ್ನೇ ಇರಿಸಲಾಗಿದೆ. ಬೋಟ್‌ಗಳನ್ನು ಫೈಬರ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಕಳೆದ ವರ್ಷ ಸಾಕಷ್ಟು ಅಧ್ಯಯನ ಮಾಡಿದ ಬಳಿಕ ಸಾರ್ವಜನಿಕ ಬಳಕೆಗೆ ವಾಟರ್ ಟ್ಯಾಕ್ಸಿಗಳನ್ನು ಖರೀದಿಸಲು ಮುಂದಾಗಿದ್ದ ಸ್ಟೇಟ್ ವಾಟರ್ ಟ್ರಾನ್ಸ್‌ಪೋರ್ಟ್ ಬೋರ್ಡ್ ನಾಲ್ಕು ಬೋಟ್‌ಗಳಿಗೆ ಆರ್ಡರ್ ಮಾಡಿತ್ತು. ಸದ್ಯ 10 ವಾಟರ್ ಟ್ಯಾಕ್ಸಿಯನ್ನು ಆರಂಭಿಸಲಾಗುತ್ತಿದೆ.
ಈ ವಾಟರ್ ಟ್ಯಾಕ್ಸಿಗಳು ಬೀಟ್ ಸ್ಟೇಷನ್‌ಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅಲ್ಲಿಂದ ಬೋಟ್‌ನಲ್ಲಿ ತೆರಳಬಹುದು. ಡೀಸೆಲ್ ಆಧಾರಿತ Catamaran ವಿನ್ಯಾಸಹೊಂದಿರುವ ಬೋಟ್ ಪ್ರತಿ ಗಂಟೆಗೆ 30 ಲೀಟರ್ ಇಂಧನ ಬಳಕೆ ಮಾಡಲಿದೆ.
ಸಾರ್ವಜನಿಕರ ಬಳಕೆಗಾಗಿ ವಿಶೇಷ ಟ್ಯಾಕ್ಸಿ ಖರೀದಿಸಲಾಗುತ್ತಿದೆ. ನಿಗದಿತ ಸಂಖ್ಯೆಗೆ ಕರೆ ಮಾಡಿ ಬುಕ್ ಮಾಡಬಹುದಾಗಿದೆ. ಟ್ಯಾಕ್ಸಿಯು ಹೇಳಿದ ಸ್ಥಳಕ್ಕೆ ಆಗಮಿಸಿ ಪಿಕ್ ಮಾಡಲಿದೆ. ಬಳಿಕ ಮತ್ತೆ ನೀವು ಹೇಳಿದ ಜಾಗಕ್ಕೆ ಕರೆದೊಯ್ಯಲಿದೆ.
Share your comments