1. ಸುದ್ದಿಗಳು

Kashi Yatra: ಕಾಶಿ ಯಾತ್ರೆಗೆ ಸಬ್ಸಿಡಿ ಪಡೆಯುವುದು ಹೇಗೆ..? ಇಲ್ಲಿದೆ ಮಾಹಿತಿ

Maltesh
Maltesh
karnatakl kashi yatra subsidy

2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿತ ಕಾಶಿಯಾತ್ರೆ ಪ್ರವಾಸ ಯೋಜನೆ, ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಲು ಅವಕಾಶವಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ 5 ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ಮುಜರಾಯಿ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ.

ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ತಿಳಿಸಿದಂತೆ ಶ್ರೀ ಕ್ಷೇತ್ರ ಕಾಶಿ ಯಾತ್ರೆಗೆ ರೂಪಾಯಿಗಳ 5000 ಸಹಾಯಧನ ನೀಡುವುದಾಗಿ ಘೋಷಿಸಿದೆ. 2022-23ರ ಬಜೆಟ್‌ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಈ ಘೋಷಣೆ ಮಾಡಿದ್ದರು. ಆ ಘೋಷಣೆಯನ್ನು ಅನುಷ್ಠಾನ(Kashi Yatra subsidy) ಕೈಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ 5000 ರೂಪಾಯಿ ಸಹಾಯಧನ ನೀಡಲು ತಾತ್ವಿಕ ಅನುಮೋದನೆಯ ಪ್ರಕಾರ ಆದೇಶ ಹೊರಡಿಸಿದೆ.

ಈ ರಾಜ್ಯದಲ್ಲಿ 4.3 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಿದ ಸರ್ಕಾರಿ ಸಂಸ್ಥೆಗಳು..!

“ಸಾವಯವ ಆಹಾರ ರಫ್ತು ಭಾರತದ ಆರ್ಥಿಕತೆ ಬದಲಾಯಿಸಬಹುದು”- ಅಮಿತ್ ಶಾ

ಕಾಶಿ ಯಾತ್ರೆಗೆ ಹೋಗುವುದು ಅಂದರೆ ಸಕಲ ಹಿಂದೂ ಜನರಿಗೆ ಜೀವಮಾನದ ಕನಸು ಆಗಿರುತ್ತದೆ. ಹೀಗಾಗಿ ಜೀಬಮಾನದಲ್ಲೊಮ್ಮೆ ಕಾಶಿ ಯಾತ್ರೆಗೆ ಹೋಗಲು ಬಹುತೇಕ ಭಕ್ತರು ಇಚ್ಛೆ ಹೊಂದಿರುತ್ತಾರೆ. ಸರ್ಕಾರಗಳು ಹಜ್ ಯಾತ್ರೆಗೆ ಹೋಗಲು ಮುಸ್ಲಿಂ ಸಮುದಾಯಕ್ಕೆ ನೆರವು ನೀಡುವ ಸಂಪ್ರದಾಯವಿದೆ. ಅದೇ ರೀತಿ ಕರ್ನಾಟಕ ಸರ್ಕಾರವು ಉತ್ತರ ಪ್ರದೇಶದ ಕಾಶಿ ಅಥವಾ ಆಧುನಿಕ ವಾರಣಾಸಿಯಯ ದರ್ಶನ ಪಡೆಯಲು ಬಯಸುವ ಯಾತ್ರಾರ್ಥಿಗಳಿಗೆ ಎಂದೇ ಹೊಸ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿತ್ತು.

ಕಾಶಿಗೆ ಅಪಾರ ಸಂಖ್ಯೆಯ ಭಕ್ತರು (Tour to Kashi) ಭೇಟಿ ನೀಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕಾಶಿ ಯಾತ್ರೆಯನ್ನು ಆರ್ಥಿಕ ದುರ್ಬಲ ವರ್ಗದ ಜನರಿಗೆ ಎಂದೇ ರೂಪಿಸಲಾಗಿದೆ ಯೋಜನೆ 2022 ರ ಪ್ರಯೋಜನಗಳನ್ನು ಕಾಶಿ ಯಾತ್ರೆಗೆ ಖರ್ಚು ಮಾಡಲು ಸರ್ಕಾರ 5000 ರೂಪಾಯಿ ನಿಗದಿಪಡಿಸಿದೆ.

ಆದ್ದರಿಂದ ಕಾಶಿ ಯಾತ್ರೆ ಕೈಗೊಳ್ಳುವವರು ತಮ್ಮ ಕಾಶಿ ಯಾತ್ರೆಯನ್ನು ಪೂರ್ಣಗೊಳಿಸಲು ಈ ಮೊತ್ತವನ್ನು ಬಳಸಬಹುದಾಗಿದೆ. ಮಾಹಿತಿಯ ಪ್ರಕಾರ ಪ್ರತಿ ವರ್ಷ 30,000 ಯಾತ್ರಾರ್ಥಿಗಳು ಮುಜರಾಯಿ, ಹಜ್ ಮತ್ತು ವಕ್ಫ್ ಸಬ್ಸಿಡಿ ಪಡೆಯುತ್ತಾರೆ.

TCS ನೇಮಕಾತಿ.. ಪದವಿ ಹೊಂದಿದ Freshersಗೆ ಇಲ್ಲಿದೆ ಸುವರ್ಣಾವಕಾಶ

NDDB ನೇಮಕಾತಿ: ಮಾ. 1,82,200 ಸಂಬಳ!

ಕಾಶಿ ಯಾತ್ರಾ ಸಬ್ಸಿಡಿ ಯೋಜನೆಗೆ ಅರ್ಹತೆಯ ಮಾನದಂಡಗಳು
ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
ಅರ್ಹ ಭಕ್ತರಿಗೆ ಕಾಶಿ ಯಾತ್ರೆಗೆ 5000 ರೂ.
ಈ ಮೊತ್ತವನ್ನು ಕಾಶಿ ಯಾತ್ರೆಯ ವೆಚ್ಚವಾಗಿ ಬಳಸಬಹುದು.
ಪ್ರಯೋಜನಗಳನ್ನು ಪಡೆಯಲು ಅಧಿಕೃತ ಪ್ರಕಟಣೆಯ ನಂತರ ನೀವು ಎಲ್ಲಾ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು.

ಅಗತ್ಯವಿರುವ ದಾಖಲೆಗಳು
ಕಾಶಿ ಯಾತ್ರಾ ಸಬ್ಸಿಡಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೆಲವು ದಾಖಲೆಗಳು ಬೇಕಾಗುತ್ತವೆ.
ಮೊಬೈಲ್ ನಂಬರ್
ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಮತದಾರರ ಗುರುತಿನ ಚೀಟಿ
ಶಾಶ್ವತ ನಿವಾಸ ಪುರಾವೆ
ಆಧಾರ್ ಕಾರ್ಡ್

ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ನೋಂದಣಿಗೆ ಹೇಗೆ ಅರ್ಜಿ ಸಲ್ಲಿಸಬೇಕು?
ಕಾಶಿ ಯಾತ್ರೆಯ ಸಬ್ಸಿಡಿ ಯೋಜನೆಗಾಗಿ ತಮ್ಮ ನೋಂದಣಿಯನ್ನು ಮಾಡಿಕೊಳ್ಳಲು ಹಲವರು ಈಗಾಗಲೇ ಬಯಸಿದ್ದಾರೆ. ಆದರೆ ಇದೀಗ ಸರ್ಕಾರ ಕಾಶಿ ಯಾತ್ರೆಯ ಸಹಾಯಧನದ ಆದೇಶ ಹೊರಡಿಸಿದ್ದು ಮುಂದಿನ ದಿನಗಳಲ್ಲಿ ಅಧಿಕೃತ ಅರ್ಜಿ ನಮೂನೆ ಬಿಡುಗಡೆಯಾಗಲಿದೆ. ಕಾಶಿ ಯಾತ್ರೆ ಸಹಾಯಧನದ ಅರ್ಜಿ ಬಿಡುಗಡೆಯ ಕುರಿತು ಮುಜರಾಯಿ ಇಲಾಖೆಯ ಅಧಿಕೃತ ವೆಬ್ಸೈಟ್ ಗಮನಿಸುತ್ತಿರಬೇಕು..

Published On: 26 April 2022, 01:45 PM English Summary: karnatakl kashi yatra subsidy

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.