1. ಸುದ್ದಿಗಳು

ಜುಲೈ 19-22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ, ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಜುಲೈ ಎರಡನೇ ವಾರ: ಸುರೇಶ್ ಕುಮಾರ್

suresh kumar

ಕೊರೋನಾ ಡೆಲ್ಟಾ ಪ್ಲಸ್ ವೈರಸ್ ಆಂತಕದ ನಡುವೆ ರಾಜ್ಯ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ನಿಗದಿ ಮಾಡಿದೆ. ಕೊರೋನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷವಾದ ಪರೀಕ್ಷಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

 ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸುರೇಶ ಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಲೈ 19 ರಂದು ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ 8.76 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 7306 ಪರೀಕ್ಷಾ ಕೇಂದ್ರಗಳನ್ನೂ 6 ಸ್ಥಾಪಿಸಲಾಗಿದೆ. ಪರೀಕ್ಷೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿ‌ ಹಿರಿಯ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಚರ್ಚಿಸಲಾಗಿದೆ ಎಂದರು.

ಕಳೆದ ಬಾರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಬಾರಿ ವಿಶೇಷ ಪರಿಸ್ಥಿತಿ ಮಧ್ಯೆ ಪರೀಕ್ಷೆ ನಡೆಸಲಾಗುತ್ತಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕಿದೆ. ಆರೋಗ್ಯ ಇಲಾಖೆಯ ಆಧಿಕಾರಿಗಳ ಸಲಹೆ ಪಡೆಯಲಾಗಿದೆ.‌ ವಿದ್ಯಾರ್ಥಿಗಳು ಪರೀಕ್ಷೆಗೆ ಸಕಲ‌ ಸಿದ್ದತೆ ಮಾಡಿಕೊಂಡಿದ್ದಾರೆ. ಸಮಾಜವಿಜ್ಞಾನ, ವಿಜ್ಞಾನ ಹಾಗೂ ಗಣಿತದ ಒಂದು ಪತ್ರಿಕೆ ಹಾಗೂ ಕನ್ನಡ ಹಿಂದಿ‌‌ ಇಂಗ್ಲೀಷ್ ಸೇರಿ‌ ಒಂದು ಪರೀಕ್ಷೆ ನಡೆಯಲಿದೆ" ಎಂದರು.

ಪ್ರಶ್ನೆ ಪತ್ರಿಕೆಯಲ್ಲಿ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳು ಇರಲಿದ್ದು, ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳಾಗಿರಲಿವೆ. ಉತ್ತರಗಳನ್ನು ಬರೆಯಲು ಪ್ರತ್ಯೇಕವಾದ ಓ ಎಂ ಆರ್ ಶೀಟನ್ನು ನೀಡಲಾಗುವುದು. ಪರೀಕ್ಷೆಗಳು ಅತ್ಯಂತ ಸರಳವಾಗಿರಲಿದೆ. ಪರೀಕ್ಷಾ ಕೇಂದ್ರಗಳ‌ ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಬೇರೆ ಊರುಗಳಿಗೆ ಹೋಗಿರುವ ವಿದ್ಯಾರ್ಥಿಗಳು ತಮ್ಮ ಸಮೀಪದ ಕೇಂದ್ರಗಳಲ್ಲಿ ‌ಪರೀಕ್ಷೆ ಬರೆಯಲು ಅವಕಾಶ‌ ನೀಡಲಾಗಿದ್ದು, 10 ಸಾವಿರ ವಿದ್ಯಾರ್ಥಿಗಳು ‌ಇದರ ಪ್ರಯೋಜನ ಪಡೆಯಲಿದ್ದಾರೆ. ಜೂನ್ 30 ರಂದು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಶಾಲೆಗಳಿಗೆ ಕಳುಹಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಎಸ್ ಎಸ್ ಎಲ್ ಸಿ ಪರೀಕ್ಷೆ ಕೇಂದ್ರದ 200 ಮೀ ಸುತ್ತಳತೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗುವುದು. ಈ ಬಾರಿ  ಜುಲೈ 19-22 ರಂದು ಬೆಳಗ್ಗೆ 10.30 ರಿಂದ 1.30 ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕಾರ್ಯದಲ್ಲಿ ಬಾಗಿಯಾಗುವ ಎಲ್ಲ ಅಧಿಕಾರಿಗಳು ಮತ್ತು ಶಿಕ್ಷಕರು ಕಡ್ಡಾಯವಾಗಿ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

ಕೊರೊನಾ ಸೋಂಕಿಗೊಳಾಗಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಯಸಿದರೆ ಪ್ರತ್ಯೇಕ ‌ಕೊಠಡಿಯಲ್ಲಿ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.ವಿದ್ಯಾರ್ಥಿಗಳಿಗೆ ಸರ್ಜಿಕಲ್ ಮಾಸ್ಕ್ ಒದಗಿಸಲು ಸಲಹೆ ನೀಡಲಾಗಿದೆ. ಪರೀಕ್ಷಾ ಸಿಬ್ಬಂದಿಗೆ ಎನ್ 95 ಮಾಸ್ಕ್‌ ಕಡ್ಡಾಯ.ಪರೀಕ್ಷಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿ‌‌ ನಿಯೋಜಿಸಲಾಗುವುದು.ಪರೀಕ್ಷೆ ‌ಮಾರ್ಗಸೂಚಿಗಳನ್ನು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.

ರಾಜ್ಯದಲ್ಲಿ ಶಾಲೆಗಳ‌ ಆರಂಭದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದೆ. ಡಾ.ದೇವಿಶೆಟ್ಟಿ ವರದಿಯನ್ನು ಅವಲೋಕಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ‌ಕಲಿಕೆಯಿಂದ ವಂಚಿತರಾಗಬಾರದು ಎಂಬುದು ‌ನಮ್ಮ‌ ಇಚ್ಚೆ ಯಾಗಿದೆ. ವಿಷಯ ಪರಿಣಿತರು,‌ ಸರ್ಕಾರದ ತಾಂತ್ರಿಕ ಸಲಹೆಗಾರ ರು ಹಾಗೂ ಮಕ್ಕಳ ತಜ್ಞರನ್ನೊಳ ಗೊಂಡ ಟಾಸ್ಕ್ ಪೋರ್ಸ್ ರಚಿಸಲಾಗುವುದು. ಜುಲೈ 1 ರಿಂದ ಚಂದನ ವಾಹಿನಿ‌ ಮೂಲಕ ಎಲ್ಲ ತರಗತಿಗಳಿಗೆ ಪಾಠ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 8,9,10 ನೇ ತರಗತಿಗಳ‌ ಪಾಠ ಆರಂಭಿಸಲಾಗುವುದು ಎಂದರು.

Published On: 29 June 2021, 10:14 AM English Summary: Karnataka sslc time table 2021 exams on july 19th and 22nd

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.