1. ಸುದ್ದಿಗಳು

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ..ಕಾಂಗ್ರೆಸ್‌ ಮಹತ್ವದ ನಿರ್ಧಾರ

Maltesh
Maltesh
Karnataka Speaker Congress important decision

ರಾಜ್ಯ ರಾಜಕಾರಣದಲ್ಲಿ ರಾತ್ರೋ ರಾತ್ರಿ ಮಹತ್ವದ ಬೆಳವಣಿಗೆಯೊಂದು ಆಗಿದ್ದು, ಸ್ಪೀಕರ್‌ ವಿಚಾರದಲ್ಲಿ ಕಾಂಗ್ರೆಸ್‌ ಪಾಳೆಯ ದಿಢೀರ್‌ ಬದಲಾವಣೆಯನ್ನು ಮಾಡಿದೆ. ಹೌದು ಇತ್ತೀಚಿಗೆ ಕಾಂಗ್ರೆಸ್‌ನಲ್ಲಿ ಸ್ಪೀಕರ್‌ ಯಾರು ಎಂಬ ವಿಚಾರಕ್ಕೆ ಸಾಕಷ್ಟು ಹೆಸರುಗಳು ಕೇಳಿ ಬಂದಿದ್ದವು. ಅದರಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರುಗಳಾದ ಆರ್‌, ವಿ, ದೇಶಪಾಂಡೆ, (R V Deshapande) ಟಿ, ಬಿ, ಜಯಚಂದ್ರ (T B Jayachandra) ಹೆಚ್‌,ಕೆ, ಪಾಟೀಲ್‌(H K Patil) ಸೇರಿದಂತೆ ಸಾಕಷ್ಟು ಹೆಸರುಗಳು ಕೇಳಿ ಬಂದಿದ್ದವು. ನಂತರ ಕೊನೆಯದಾಗಿ ಆರ್‌, ವಿ, ದೇಶಪಾಂಡೆ ಹಂಗಾಮಿ ಸ್ಪೀಕರ್‌ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು

ಬಳಿಕೆ ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್‌, ವಿ, ದೇಶಪಾಂಡೆ ʼಸ್ಪೀಕರ್‌ ಹುದ್ದೆ ತುಂಬ ದೊಡ್ಡದಾದ್ದದ್ದು ನನಗೆ ಅದು ಸೂಕ್ತವಾದುದಲ್ಲ ನನಗೆ ಸಚಿವ ಸ್ಥಾನ ನೀಡಬೇಕುʼ ಎಂದು ಹೇಳಿದ್ದರು. ಬಳಿಕ ಹಂಗಾಮಿ ಸ್ಪೀಕರ ಆಗಿ ನಿನ್ನೆ ನಡೆದ ಕಲಾಪದಲ್ಲಿ ನೂನತ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದ್ದರು.

ಇದೀಗ ಲಭ್ಯವಿರುವ ಮಾಹಿತಿಯ ಪ್ರಕಾರ ಮಾಜಿ ಸಚಿವ ಯು, ಟಿ, ಖಾದರ್‌ (U. T. Khader) ಅವರನ್ನ ಸ್ಪೀಕರ್‌ ಆಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಹೌದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯನ್ನು ವಹಿಸಿಕೊಂಡಿರುವ ರಂದೀಪ್‌ ಸುರ್ಜೇವಾಲಾ  ಹಾಗೂ ಕಾಂಗ್ರೆಸ್‌ (Congress) ಮುಖಂಡರು ಖಾದರ್‌ ಅವರ ಜೊತೆ ಚರ್ಚೆ ನಡೆಸಿ ಅವರ ಮನವೊಲಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಖಾದರ್‌ ಅವರು ಕೂಡ ಒಪ್ಪಿಗೆ ನೀಡಿದ್ದು ಸ್ಪೀಕರ್‌ ಆಗಿ ಕಾರ್ಯ ನಿರ್ವಹಿಸಲು ಗ್ರೀನ್‌ಸಿಗ್ನಲ್‌ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಅಲ್ಪಸಂಖ್ಯಾತರೊಬ್ಬರು ಸ್ಪೀಕರ್‌ ಹುದ್ದೆಯನ್ನ ನಿರ್ವಹಿಸಲಿದ್ದಾರೆ. ಈ ಕೀರ್ತಿ ಯು ಟಿ ಖಾದರ್‌(U. T. Khader) ಅವರಿಗೆ ಸಲ್ಲಲಿದೆ.

Weather Report: ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮತ್ತೇ ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಯು.ಟಿ.ಖಾದರ್ ರವರು, ಅವರ ತಂದೆ ಹಾಜಿ ಯು ಟಿ ಫರೀದ್ ಅವರ ನಿಧನದ ನಂತರ 2007 ರಲ್ಲಿ ನಡೆದ ಉಪಚುನಾವಣೆಯಲ್ಲಿ ಖಾದರ್ ರವರು ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಅವರ ತಂದೆ ಹಾಜಿ ಯು ಟಿ ಫರೀದ್ ರವರು 1972 , 1978, 1999 ಮತ್ತು 2004ರಲ್ಲಿ ಚುನಾವಣೆಗಳಲ್ಲಿ ಜಯಗಳಿಸಿದ್ದರು. ಯು.ಟಿ.ಖಾದರ್ ರವರು ಮಾಜಿ ಸಿಎಂ ಸಿದ್ದರಾಮಯ್ಯರವರ ಸಂಪುಟದದಲ್ಲಿ ಮೇ 20 2013 ರಿಂದ ಜೂನ್ 20 2016 ರವರೆಗೆ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

ಖಾದರ್ ರವರು ಕರ್ನಾಟಕ ವಿಧಾನಸಭೆಯ ಮಂಗಳೂರು ಕ್ಷೇತ್ರವನ್ನು (ಹಿಂದೆ ಉಳ್ಳಾಲ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು) ಪ್ರತಿನಿಧಿಸುತ್ತಿದ್ದಾರೆ. ಅವರು 2018 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2018 ರಲ್ಲಿ ಅವರು ಬಿಜೆಪಿಯ ಸಂತೋಷ್ ಕುಮಾರ್ ರವರನ್ನು 1̧9763 ಮತಗಳ ಅಂತರದಿಂದ ಸೋಲಿಸಿದ್ದರು. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಅವರು ಬಿಜೆಪಿಯ ಅಭ್ಯರ್ಥಿ ಸತೀಶ್‌ ಕುಂಪಲ ಅವರನ್ನು ಬೃಹತ್ ಮತಗಳಿಂದ ಮಣಿಸಿದ್ದು ಈ ಮೂಲಕ ಉಳ್ಳಾಲ ಪ್ರತಿನಿಧಿಸುವ ಐದನೇ ಅವಧಿಯ ಶಾಸಕರಾಗಿ ಆಯ್ಕೆಯಾಗಿದ್ದಾರೆ.

Published On: 23 May 2023, 10:43 AM English Summary: Karnataka Speaker Congress important decision

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.