1. ಸುದ್ದಿಗಳು

ಸರ್ಕಾರಿ ನೌಕರರಿಗೆ 2021ರ ವರ್ಷದ ರಜೆಗಳ ಪಟ್ಟಿ

ರಾಜ್ಯ ಸರ್ಕಾರ 2021ರ ಕ್ಯಾಲೆಂಡರ್ ವರ್ಷದ ಸಾರ್ವತ್ರಿಕ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದೆ. ಆ ಪ್ರಕಾರ 2021ನೇ ಸಾಲಿಗೆ 20 ಸಾರ್ವತ್ರಿಕ ರಜಾದಿನಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ

 ಒಟ್ಟು 20 ರಜೆಗಳ ಪೈಕಿ 9 ರಜೆಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲೇ ಇವೆ. ಪ್ರವಾಸ ಹೋಗುವವರಾದರೆ ಈಗಲೇ ಟ್ರಿಪ್ ಪ್ಲಾನ್ ಮಾಡಬಹುದು.

ಅಕ್ಟೋಬರ್​ನಲ್ಲಿ 5 ರಜೆ ಇದ್ದರೆ, ನವೆಂಬರ್​​ನಲ್ಲಿ 4 ರಜೆಗಳಿವೆ. ಅಕ್ಟೋಬರ್ 14 ಮತ್ತು 15ರಂದು ಆಯುಧ ಪೂಜೆ, ವಿಜಯದಶಮಿ ಪ್ರಯುಕ್ತ ರಜೆ ನೀಡಲಾಗಿದೆ. ಇದು ಗುರುವಾರ ಮತ್ತು ಶುಕ್ರವಾರ ಬೀಳುತ್ತದೆ. ಶನಿವಾರ ಒಂದು ದಿನ ರಜೆ ಹಾಕಿದಲ್ಲಿ ಒಟ್ಟು 4 ದಿನಗಳ ಕಾಲ ರಜಾ ಭಾಗ್ಯ ಪಡೆಯುವ ಅವಕಾಶ ಇದೆ. ಅದೇ ರೀತಿ ಏಪ್ರಿಲ್ 13 ಮತ್ತು 14ರಂದು ಯುಗಾದಿ, ಅಂಬೇಡ್ಕರ್ ಜಯಂತಿ ಪ್ರಯುಕ್ತ ರಜೆ ಇದೆ. ಇದು ಮಂಗಳವಾರ ಮತ್ತು ಬುಧವಾರ ಇದೆ. ಇಲ್ಲಿಯೂ ಕೂಡ ಸೋಮವಾರ ಒಂದು ದಿನ ರಜೆ ಹಾಕಿದರೆ ಒಟ್ಟು ನಾಲ್ಕು ದಿನಗಳ ಕಾಲ ರಜೆಯಲ್ಲಿರುವ ಅವಕಾಶ ಇದೆ.

2021ರ ಕ್ಯಾಲೆಂಡರ್ ವರ್ಷದಲ್ಲಿ ಸಾರ್ವತ್ರಿಕ ರಜಾದಿನಗಳ ಪಟ್ಟಿ ಜನವರಿ 14ರ ಮಕರ ಸಂಕ್ರಾಂತಿಯಿಂದ ಆರಂಭವಾಗಿ ನವೆಂಬರ್ 22ರ ಕನಕದಾಸ ಜಯಂತಿಯಂದು ಮುಕ್ತಾಯಗೊಳ್ಳುತ್ತದೆ.

ಗಣರಾಜ್ಯೋತ್ಸವ, ಮಹಾಶಿವರಾತ್ರಿ, ಗುಡ್​ ಫ್ರೈಡೇ, ಯುಗಾದಿ, ಅಂಬೇಡ್ಕರ್ ಜಯಂತಿ, ಕಾರ್ಮಿಕರ ದಿನಾಚರಣೆ, ಬಸವ ಜಯಂತಿ, ಅಕ್ಷಯ ತೃತೀಯ, ರಮ್ಜಾನ್​, ಬಕ್ರೀದ್, ಮೊಹರಂ, ವರಸಿದ್ಧಿ ವಿನಾಯಕ ವ್ರತ, ಗಾಂಧಿ ಜಯಂತಿ, ಮಹಾಲಯ ಅಮಾವಾಸ್ಯೆ, ಆಯುಧಪೂಜೆ, ವಿಜಯದಶಮಿ, ವಾಲ್ಮೀಕಿ ಜಯಂತಿ, ಈದ್​ ಮಿಲಾದ್​, ಕರ್ನಾಟಕ ರಾಜ್ಯೋತ್ಸವ, ನರಕ ಚತುರ್ದಶಿ, ಬಲಿಪಾಡ್ಯಮಿ, ದೀಪಾವಳಿ ರಜೆಗಳು ಈ ಪಟ್ಟಿಯಲ್ಲಿವೆ.

ಆದರೆ ಮಹಾವೀರ ಜಯಂತಿ, ಸ್ವಾತಂತ್ರ್ಯೋತ್ಸವ, ಕ್ರಿಸ್​ಮಸ್ ರಜೆಗಳು ಪಟ್ಟಿಯಲ್ಲಿಲ್ಲ. ಈ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನೂ ನೀಡಿದೆ. ಮಹಾವೀರ ಜಯಂತಿ( ಏಪ್ರಿಲ್​ 25) ಹಾಗೂ ಸ್ವಾತಂತ್ರ್ಯೋತ್ಸವ (ಆಗಸ್ಟ್​ 15) ಎರಡೂ ಭಾನುವಾರದಂದು ಮತ್ತು ಕ್ರಿಸ್​ಮಸ್​ ರಜಾದಿನವಾದ ನಾಲ್ಕನೇ ಶನಿವಾರದಂದು ಇರುವುದರಿಂದ ಅವುಗಳನ್ನು ಸಾರ್ವತ್ರಿಕ ರಜಾದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ

2021ರ ವರ್ಷದಲ್ಲಿ ಕರ್ನಾಟಕ ಸರ್ಕಾರಿ ನೌಕರರ ರಜಾ ದಿನಗಳ ಪಟ್ಟಿ:

ಜನವರಿ 14, ಗುರುವಾರ – ಮಕರ ಸಂಕ್ರಾಂತಿ
ಜನವರಿ 26, ಮಂಗಳವಾರ – ಗಣರಾಜ್ಯೋತ್ಸವಮಾರ್ಚ್ 11, ಗುರುವಾರ – ಮಹಾ ಶಿವರಾತ್ರಿ
ಏಪ್ರಿಲ್ 2, ಶುಕ್ರವಾರ – ಗುಡ್ ಫ್ರೈಡೇ
ಏಪ್ರಿಲ್ 13, ಮಂಗಳವಾರ – ಯುಗಾದಿ
ಏಪ್ರಿಲ್ 14, ಬುಧವಾರ – ಅಂಬೇಡ್ಕರ್ ಜಯಂತಿ
ಮೇ 1, ಶನಿವಾರ – ಕಾರ್ಮಿಕ ದಿನಾಚರಣೆ
ಮೇ 14, ಶುಕ್ರವಾರ – ರಂಜಾನ್ / ಅಕ್ಷಯ ತೃತೀಯ / ಬಸವ ಜಯಂತಿ
ಜುಲೈ 21, ಬುಧವಾರ – ಬಕ್ರೀದ್
ಆಗಸ್ಟ್ 20, ಶುಕ್ರವಾರ – ಮೊಹರಂ ಕೊನೆ ದಿನ
ಸೆಪ್ಟೆಂಬರ್ 10, ಶುಕ್ರವಾರ – ವಿನಾಯಕ ವ್ರತ
ಅಕ್ಟೋಬರ್ 2, ಶನಿವಾರ – ಗಾಂಧಿ ಜಯಂತಿ
ಅಕ್ಟೋಬರ್ 6, ಬುಧವಾರ – ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 14, ಗುರುವಾರ – ಮಹಾನವಮಿ, ಆಯುಧ ಪೂಜೆ
ಅಕ್ಟೋಬರ್ 15, ಶುಕ್ರವಾರ – ವಿಜಯದಶಮಿ
ಅಕ್ಟೋಬರ್ 20, ಬುಧವಾರ – ವಾಲ್ಮೀಕಿ ಜಯಂತಿ, ಈದ್ ಮಿಲಾದ್
ನವೆಂಬರ್ 1, ಸೋಮವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 3, ಬುಧವಾರ – ನರಕ ಚತುರ್ದಶಿ
ನವೆಂಬರ್ 5, ಶುಕ್ರವಾರ – ಬಲಿಪಾಡ್ಯಮಿ, ದೀಪಾವಳಿ
ನವೆಂಬರ್ 22, ಸೋಮವಾರ – ಕನಕದಾಸ ಜಯಂತಿ

Published On: 28 December 2020, 12:18 PM English Summary: Karnataka holiday list for the year 2021

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.