ಧಾರವಾಡದ ಕರ್ನಾಟಕ ನೀರಾವರಿ ನಿಗಮ ಕಚೇರಿಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಇದನ್ನೂ ಓದಿರಿ: ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಸೂಚನೆ!
ಕರ್ನಾಟಕ ರಾಜ್ಯದಲ್ಲಿನ 22 ಜಿಲ್ಲೆಗಳಿಗೆ ಸೇರಿದಂತೆ ಪ್ರಮುಖ ಕಚೇರಿಯಾಗಿದ್ದ ಧಾರವಾಡದ ಕರ್ನಾಟಕ ನೀರಾವರಿ ನಿಗಮದಲ್ಲಿ ದೊಡ್ಡಮಟ್ಟದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರೈತ ಮುಖಂಡರು ಆರೋಪ ಮಾಡಿದ್ದರು.
ಈ ಕುರಿತು ನೀರಾವರಿ ನಿಗಮ ಕಚೇರಿಯನ್ನು ಸಿಬಿಐ(CBI) ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ರೈತ ಸೇನಾ ಕರ್ನಾಟಕದ ರೈತ ಮುಖಂಡರು ಧರಣಿಯನ್ನು ನಡೆಸುತ್ತಿದ್ದರು.
ಆದರೆ, ಅವರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಗುಡ್‌ನ್ಯೂಸ್: 5 ಲಕ್ಷ ರೈತರಿಗೆ ₹749 ಕೋಟಿ ಬೆಳೆ ವಿಮೆ ಇತ್ಯರ್ಥ..!
ನಿನ್ನೆ ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರೈತ ಮುಖಂಡರು ಮನವಿ ಮಾಡಿದ್ದು , ಜುಲೈ 6 ರಂದು ಕಾಫಿ ಬೋರ್ಡ್ನಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋಣ ಎಂಬ ಭರವಸೆ ನೀಡಿದ್ದರಿಂದ ರೈತ ಮುಖಂಡರು ಇದೀಗ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಕರ್ನಾಟಕ ನೀರಾವರಿ ನಿಗಮದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು , ಈ ಸಂಬಂಧ ರಾಜ್ಯಪಾಲರನ್ನೂ ಭೇಟಿ ಮಾಡಿ ಅವರ ಗಮನಕ್ಕೆ ತರಲಾಗಿದೆ. ಈ ಸಂಬಂಧ ಮಾತನಾಡುವುದಕ್ಕಾಗಿ ಸಿಎಂ ಸಭೆ ಕರೆದಿದ್ದು , ಈ ಹಿನ್ನೆಲೆಯಲ್ಲಿ ಏಳು ದಿನಗಳಿಂದ ನಡೆಯುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ರೈತರ ಜೀವನಾಡಿ ಎತ್ತುಗಳನ್ನು ಪೂಜಿಸುವ ಹಬ್ಬ “ಮಣ್ಣೆತ್ತಿನ ಅಮವಾಸೆ”; ಏನಿದರ ವಿಶೇಷತೆ ಗೊತ್ತೆ?
Share your comments