1. ಸುದ್ದಿಗಳು

karnataka Election ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ಗೆ: ರಾಜಕೀಯ ಲೆಕ್ಕಾಚಾರವೇನು?

Hitesh
Hitesh
karnataka Election 2023 Former Chief Minister Jagdish Shettar to Congress: What is the political calculation?

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆ ಆಗಿದ್ದು, ಅವರಿಗೆ ಬಿ- ಫಾರಂ ಸಹ ಸಿಕ್ಕಿದೆ. ಇದೀಗ ಹೊಸ ರಾಜಕೀಯ ಲೆಕ್ಕಾಚಾರ ಪ್ರಾರಂಭವಾಗಿದೆ. 

ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಮಾತನಾಡಿದ ಶೆಟ್ಟರ್, ನಿನ್ನೆ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದಿದ್ದಾರೆ.   

ಬಿಜೆಪಿ ಬೆಳವಣಿಗೆಗೆ ಸಂಘಟಿತರಾಗಿ ಶ್ರಮಿಸಿದವರಲ್ಲಿ ನಾನೂ ಇದ್ದೆ. ಹೌದು ಬಿಜೆಪಿ ನನಗೆ ಗೌರವ ಮತ್ತು ಸ್ಥಾನ ನೀಡಿತ್ತು.

ನಾನು ಆರು ಬಾರಿ ಶಾಸಕನಾಗಿ ಗೆದ್ದಿದ್ದೇನೆ ಮತ್ತು ನಾನು ಸ್ವಾಭಾವಿಕವಾಗಿ ಏಳನೇ ಬಾರಿಗೆ ಸ್ಪರ್ಧಿಸುತ್ತೇನೆ ಎಂದು ಭಾವಿಸಿದ್ದೇನೆ ಎಂದರು.

ಹಿರಿಯ ನಾಯಕನಾಗಿದ್ದ ನನಗೆ ಟಿಕೆಟ್ ಸಿಗುತ್ತದೆ ಎಂದು ಅಂದುಕೊಂಡಿದ್ದೆ ಆದರೆ ಸಿಗುತ್ತಿಲ್ಲ ಎಂದು ತಿಳಿದಾಗ ಬೆಚ್ಚಿಬಿದ್ದಿದ್ದೇನೆ.

ಯಾರೂ ನನ್ನ ಬಳಿ ಮಾತನಾಡಿಲ್ಲ, ಮನವೊಲಿಸುವ ಪ್ರಯತ್ನ ಮಾಡಿಲ್ಲ, ಯಾವ ಸ್ಥಾನ ಸಿಗಲಿದೆ ಎಂಬ ಭರವಸೆಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.  

Karnataka Election 2023 ಕರ್ನಾಟಕ ಚುನಾವಣೆ: ಪ್ರಚಾರಕ್ಕೆ ತೆಲಂಗಾಣದಿಂದ ಬರ್ತಿದ್ದಾರೆ ಐವರು ನಾಯಕರು!

ಏಪ್ರಿಲ್ 11 ರಂದು ಪಕ್ಷದ ಉಸ್ತುವಾರಿ ನನಗೆ ಟಿಕೆಟ್ ನೀಡಿಲ್ಲ ಎಂದು ಹೇಳಿದರು. ಅವರು ನನ್ನೊಂದಿಗೆ ಮಗುವಿನೊಂದಿಗೆ ಮಾತನಾಡುವಂತೆ ಮಾತನಾಡಿದರು.

ನಾನು ಏನು ಮಾಡಬೇಕು? ಎಂದು ಶೆಟ್ಟರ್ ಹೇಳಿದರು.

ನನ್ನನ್ನು ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲಾ ಮತ್ತು ಎಂ.ಬಿ.ಪಾಟೀಲ್ ಸಂಪರ್ಕಿಸಿದ್ದಾರೆ.

ಅವರು ನನ್ನನ್ನು ಆಹ್ವಾನಿಸಿದಾಗ ನಾನು ಬೇರೆ ದಾರಿಯಿಲ್ಲದೆ ಬಂದಿದ್ದೇನೆ. ನಾನು ಪೂರ್ಣ ಹೃದಯದಿಂದ ಕಾಂಗ್ರೆಸ್ ಸೇರುತ್ತಿದ್ದೇನೆ ಎಂದರು.

ಬಿಜೆಪಿಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯುವ ಪೀಳಿಗೆಗೆ ಅವಕಾಶ ನೀಡಲಾಗುತ್ತಿರುವ

ಕಾರಣ ಕೆಲವು ಅಭ್ಯರ್ಥಿಗಳಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ಹೇಳಿದರು. 

Karnataka Election 2023 ಬಿಜೆಪಿಗೆ ಹಿರಿಯ ನಾಯಕರ ಗುಡ್‌ ಬೈ: ಫಲಿತಾಂಶದ ಮೇಲೆ ಪರಿಣಾಮ ?!

ಬಿಜೆಪಿಗೆ ಲಿಂಗಾಯತರ ಮತ ತಪ್ಪುವ ಸಾಧ್ಯತೆ

ಈ ಬಾರಿ ಬಿಜೆಪಿಯ ಹಿರಿಯ ನಾಯಕರಾಗಿದ್ದ ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರ್‌ ಅವರನ್ನು ಕಡೆಗಣಿಸಿರುವುದು

ಲಿಂಗಾಯತರ ಮತಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜಗದೀಶ ಶೆಟ್ಟರ್‌ ಅವರು ಬಿಜೆಪಿಯಲ್ಲಿ ವ್ಯವಸ್ಥಿತವಾಗಿ

ಲಿಂಗಾಯಿತರನ್ನು ತುಳಿಯುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಈ ಹೇಳಿಕೆಯಿಂದ ಬಿಜೆಪಿಗೆ ಡ್ಯಾಮೇಜ್‌ ಆಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಲೆಕ್ಕಾಚಾರವೇನು

ಉತ್ತರ ಕರ್ನಾಟಕ ಹಾಗೂ ಹುಬ್ಬಳ್ಳಿ- ಧಾರವಾಡ, ಗದಗ, ಹಾವೇರಿ ಸೇರಿದಂತೆ ಈ ಭಾಗದಲ್ಲಿ ಜಗದೀಶ ಶೆಟ್ಟರ್‌ ಅವರ ಮೂಲಕ ಪ್ರಚಾರ ನಡೆಸಲು

ಕಾಂಗ್ರೆಸ್‌ ಯೋಜನೆ ರೂಪಿಸಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್‌ಗೆ ಈ ಭಾಗದಲ್ಲಿ ಲಾಭವಾಗುವ ಸಾಧ್ಯತೆ ಹೆಚ್ಚಾಗಿದೆ.

ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿರುವುದು ರಾಜ್ಯದ ಉತ್ತರ ಕರ್ನಾಟಕದಲ್ಲಿ 20 ರಿಂದ 25 ವಿಧಾನಸಭಾ ಸ್ಥಾನಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

bjp

ಬಿಜೆಪಿ ಅವರು ಅವರ ನಾಯಕರನ್ನೇ ಉತ್ತಮವಾಗಿ ನಡೆಸಿಕೊಳ್ಳುತ್ತಿಲ್ಲ.

ಇನ್ನು ಬೇರೆಯವರನ್ನು ಹೇಗೆ ನಡೆಸಿಕೊಳ್ಳಲಿದೆ ಎಂದು ಕಾಂಗ್ರೆಸ್‌ನ ಪ್ರಮುಖ ಮತ್ತು ಹುಬ್ಬಳ್ಳಿ- ಧಾರವಾಡದ ಸ್ಥಳೀಯ ಮಟ್ಟದ ನಾಯಕರು ಪ್ರಚಾರ ಮಾಡುತ್ತಿದ್ದು,

ಇದರಿಂದ ಬಿಜೆಪಿ ಕಾರ್ಯಕರ್ತರು ಸಹ ಎದೆಗುಂದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ನಾಯಕರನ್ನು ನೋಡಬೇಡಿ 

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಶ್ರಮಿಸಿ, ಬಿಜೆಪಿ ಅಧಿಕಾರಕ್ಕೆ ಬರುವುದು ಗುರಿಯಾಗಿರಲಿ ಎಂದಿದ್ದಾರೆ.

ಆದರೆ, ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎನ್ನುವುದು ಇನ್ನಷ್ಟೇ ತಿಳಿಯಲಿದೆ. 

ಮೇ 10 ರಂದು ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Published On: 17 April 2023, 02:01 PM English Summary: karnataka Election 2023 Former Chief Minister Jagdish Shettar to Congress: What is the political calculation?

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.