ಕಲಬುರಗಿ ನಗರದ ಆಳಂದ ರಸ್ತೆಯ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ 2020 ನೇ ಸಾಲಿನ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ ನೀಡಲಾಗಿದೆ.
ಕೃಷಿಯಲ್ಲಿ ತಂತ್ರಜ್ಞಾನಾಧಾರಿತ ಅಧಿಕ ಹಾಗೂ ಗುಣಮಟ್ಟದ ಇಳುವರಿ ಮತ್ತು ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕೃಷಿ ವಿಜ್ಞಾನ ಕೇಂದ್ರಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುವುದು. ಈ ಅತ್ಯುನ್ನತವಾದ ಪ್ರಶಸ್ತಿಯು ಟ್ರೋಫಿ, ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ರೂ. 8 ಲಕ್ಷ ನಗದನ್ನು ಒಳಗೊಂಡಿದೆ. ಶುಕ್ರವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ವರ್ಚುವಲ್ ವೇದಿಕೆಯ ಮೂಲಕ ಪ್ರಶಸ್ತಿಯನ್ನು ಘೋಷಿಸಿದರು. ದೇಶದಲ್ಲಿರುವ ಒಟ್ಟು 722 ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರಗಳ ಪೈಕಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿವೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕಲಬುರಗಿ ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತೊಗರಿ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ನೆಟೆ ಮತ್ತು ಗೊಡ್ಡುರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ, ಪಲ್ಸ್ ಮ್ಯಾಜಿಕ್ ಸೇರಿದಂತೆ ತಂತ್ರಜ್ಞಾನ ಬಳಕೆ ಹಾಗೂ ತೊಗರಿ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ನೆಟೆ ಮತ್ತು ಗೊಡ್ಡು ರೋಗ ನಿರೋಧಕ ತಳಿಗಳನ್ನು ಅಧಿಕ ಕ್ಷೇತ್ರಗಳಿಗೆ ವಿಸ್ತರಿಸಿ, ಸಮಗ್ರ ಕೀಟ ಮತ್ತು ರೋಗ ನಿರ್ವಹಣಾ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸಿದ್ದರು. ಇದರಿಂದ ಹೆಚ್ಚಿನ ಹಾಗೂ ಗುಣಮಟ್ಟದ ತೊಗರಿ ಇಳುವರಿ ಪಡೆದು ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಹವಾಮಾನ ಮುನ್ಸೂಚನೆ, ಬೀಜೋಪಚಾರ ಆಂದೋಲನಾ, ಸಿರಿಧಾನ್ಯಗಳ ಮೌಲ್ಯವರ್ಧನೆ, ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣು ಮತ್ತು ನೀರಿನಪರೀಕ್ಷೆಯ ಆರೋಗ್ಯ ಚೀಟಿ, ವೈಜ್ಞಾನಿಕ ಹೈನುಗಾರಿಕೆ ಕೊಟ್ಟಿಗೆ ಪದ್ಧತಿಯಲ್ಲಿ ಆಡು ಸಾಕಾಣಿಕೆ, ಸಿರೋಹಿ ಹೋತದಿಂದ ಸ್ಥಳೀಯ ಆಡುಗಳ ಉನ್ನತಿಕರಣ, ಆಧುನಿಕ ತೋಟಗಾರಿಕೆ, ಪುಷ್ಪಕೃಷಿ, ಹಣ್ಣು ಮತ್ತು ತರಕಾರಿ ಮಾಲ್ಯವರ್ಧನೆ, ತಾರಸಿ ಕೈತೋಟ, ಸಸ್ಯ ಅಭಿವೃದ್ದಿ ತಾಂತ್ರಿಕತೆ, ಒಣ ಬೇಸಾಯ ತೋಟಗಾರಿಕೆ, ಅರಣ್ಯ ಕೃಷಿ ಎರೆಹುಳು ಗೊಬ್ಬರ ಘಟಕ, ಅಜೋಲ್ಲಾ ಘಟಕ, ಜಲಕೃಷಿ ಘಟಕ ಹಾಗೂ ಇ-ಸ್ಯಾಪ್ ತಂತ್ರಜ್ಞಾನಗಳ ಮಾಹಿತಿಯನ್ನು ರೈತರೊಂದಿಗೆ ಹಂಚಿಕೊಳ್ಳುತ್ತಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳಾದ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಸರಕಾರೇತರ ಸಂಸ್ಥೆಗಳೊಂದಿಗೆ ಅನೇಕ ರೈತಪರ ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೆ ತಂದ ಹೆಗ್ಗಳಿಕೆ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ್ದಾಗಿದೆ. ಇದಲ್ಲದೆ ಕೃಷಿ ಸಂವಹನಗಳಾದ ರೇಡಿಯೋ, ದೂರದರ್ಶನ, ವಾಟ್ಸ್ಆಪ್, ವಿಡಿಯೋ ಕ್ಲಿಪಿಂಗ್ಸ್, ಸಂದೇಶಗಳು, ಯುಟ್ಯೂಬ್, ಕೆವಿಕೆ ಆ್ಯಪ್, ಟ್ವೀಟರ್ ಮತ್ತು ಫೇಸ್ಬುಕ್ಗಳ ಮೂಲಕ ರೈತರಿಗೆ ಮಾಹಿತಿಯನ್ನು ನೀಡುತ್ತಾ ಹಾಗೂ ದೇಶ-ವಿಧೇಶ ವಿನೂತನ ಕೃಷಿ ಪದ್ದತಿಯನ್ನು ರೈತರಿಗೆ ತಲುಪಿಸಿ ರೈತರ ಆದಾಯ ಹೆಚ್ಚಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರವು ಸದಾ ಮುಂಚೂಣಿಯಲ್ಲಿದೆ.
ಈ ಎಲ್ಲಾ ತಂತ್ರಜ್ಞಾನಗಳನ್ನು ಮುಂಚೂಣಿ ಪ್ರಾತ್ಯಕ್ಷಿಕೆ,ರೈತರ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಪರಿಶೀಲಿನೆ, ತರಬೇತಿ ಮತ್ತು ಪದ್ದತಿ ಪ್ರಾತ್ಯಕ್ಷಿಗಳ ಮೂಲಕ ಜಿಲ್ಲೆಯಲ್ಲಿ ಹಲವಾರುಕೃಷಿ ತಂತ್ರಜ್ಞಾನರನ್ನು ಹುಟ್ಟು ಹಾಕಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪುರಸ್ಕಾರ ರೈತರ ಮೂಡಗೆರಿಸುವಲ್ಲಿ ಕಲಬುರಗಿ ಕೃಷಿ ವಿಜ್ಞಾನ ಕೇಂದ್ರವು ಮಹತ್ತರವಾದ ಪಾತ್ರ ವಹಿಸಿದೆ. ಇದರೊಂದಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕಲಬುರಗಿ ಜಿಲ್ಲೆಗೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ.
ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಪ್ರೋತ್ಸಾಹಿತ,ಪ್ರಗತಿಪರ ಹಾಗೂ ಕ್ರಿಯಾಶೀಲ ಕೃಷಿಕರಾದ ಶರಣಬಸಪ್ಪಾ ಪಾಟೀಲ, ಹಾಲಸುಲ್ತಾನಪೂರ ರವರಿಗೆ ರಾಷ್ಟ್ರ ಮಟ್ಟದಐಸಿಎಆರ್-ಜಗಜೀವನ್ರಾಮ್ ಅವಿಷ್ಕಾರ ಕೃಷಿಕ ಪುರಸ್ಕಾರ ಪ್ರಶಸ್ತಿ-2020′ ಲಭಿಸಿದೆ. ಈ ಪುರಸ್ಕಾರವು ಕೃಷಿ ಕ್ಷೇತ್ರದಲ್ಲಿ ಅವರು ಅಳವಡಿಸಿರುವ ಹಲವಾರು ತಂತ್ರಜ್ಞಾನಗಳು ಮತ್ತು
ಅವಿಷ್ಕಾರಗಳಾದ ತೋಗರಿ ಕುಟಿ ಚಿವುಟುವ ಯಂತ್ರ, ಸೌರಬೇಲಿ,ನಳ ನೀರಾವರಿ, ಕಡಿಮೆ ವೆಚ್ಚದಹೈಡ್ರೋಪೊನಿಕ್ಸ್, ಲಿಂಬೆ ಶ್ರೇಣಿಕರಣ ಉಪಕರಣ ಮತ್ತು ಸೌರಶಕ್ತಿ ವಿದ್ಯುತ್ ದೀಪ ಬಲೆಗಳನ್ನು ಪರಿಗಣಿಸಿ ಈಪ್ರಶಸ್ತಿಯನ್ನು ನೀಡಲಾಗಿದೆ.ಈ ಪ್ರಶಸ್ತಿಯನ್ನು ಕೋವಿಡ್-19 ಕಾರಣದಿಂದ ಯಾವುದೇಸಭೆ, ಸಮಾರಂಭಗಳನ್ನು ಮಾಡದಿರುವುದರಿಂದ ಆನ್ಲೈನ್ ಮುಖಾಂತರ ನೀಡಲಾಯಿತು.
Share your comments