1. ಸುದ್ದಿಗಳು

ಸಾಹಸ ಕ್ರೀಡೆಗಾಗಿ ಜೀವದ ಹಂಗು ತೊರೆದ ಜ್ಯೋತಿರಾಜ್!

Hitesh
Hitesh
JyotJyothiraj left his life for adventure sports!

ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿರುವ ಜ್ಯೋತಿರಾಜ್ (ಕೋತಿರಾಜ್) ಅವರು ಈಚೆಗೆ ಮತ್ತೊಂದು ಸಾಧನೆ ಮಾಡಿದ್ದಾರೆ.

25 ಅಂತಸ್ತುಗಳ ವಸತಿ ಸಮುಚ್ಛಯವನ್ನು ಏರಿರುವ ಸಾಹಸವದು. ಅದರ ಹಿನ್ನೆಲೆ ನೀವು ತಿಳಿದುಕೊಳ್ಳಲೇಬೇಕು.

ಜ್ಯೋತಿರಾಜ್‌ ಅವರು 25 ಅಂತಸ್ತಿನ ವಸತಿ ಸಮುಚ್ಛಯ ಏರಿರುವುದು ಅಕಾಡೆಮಿ ಸ್ಥಾಪನೆಗೆ ಹಣ ಸಂಗ್ರಹಿಸಲು.

ಅಷ್ಟಕ್ಕೂ ಯಾವ ಅಕಾಡೆಮಿ, ಈ ರೀತಿ ಜೀವದ ಹಂಗು ತೊರೆದು ಅವರು ಯಾವ ಅಕಾಡೆಮಿ ಸ್ಥಾಪಿಸಲು ಹೊರಟ್ಟಿದ್ದಾರೆ ಇನ್ನುವ ವಿವರ ಇಲ್ಲಿದೆ.

Bank 5 ದಿನ ಮಾತ್ರ ಇನ್ಮುಂದೆ ಬ್ಯಾಂಕ್‌ ಉದ್ಯೋಗಿಗಳಿಗೆ ಕೆಲಸ ?

ಜ್ಯೋತಿರಾಜ್‌ ಅವರು ಕಟ್ಟಡ ಏರುತ್ತಿರುವುದು

ರಾಕ್ ಕ್ಲೈಮಿಂಗ್ ಮತ್ತು ವಾಲ್ ಕ್ಲೈಮಿಂಗ್‍ ಮೂಲಕ ವಿಶ್ವವೇ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಜ್ಯೋತಿರಾಜ್‌ ಅವರು ಮಾಡಿದ್ದಾರೆ. 

ಜ್ಯೋತಿರಾಜ್ ಅವರು ಉಡುಪಿಯ ಬ್ರಹ್ಮಗಿರಿಯಲ್ಲಿರುವ 25 ಅಂತಸ್ತಿನ ವುಡ್ಸ್‌ವಿಲ್ ಬಹುಮಹಡಿ ಕಟ್ಟಡವನ್ನು ಗುರುವಾರ ಬರಿಗೈಲಿ ಯಶಸ್ವಿಯಾಗಿ ಹತ್ತಿ, ಸಾಹಸ ಪ್ರದರ್ಶಿಸಿದ್ದಾರೆ.

ಗುರುವಾರ ಬೆಳಿಗ್ಗೆ 10.20ಕ್ಕೆ ಕಟ್ಟಡ ಹತ್ತಲು ಪ್ರಾರಂಭಿಸಿದ್ದ ಜ್ಯೋತಿರಾಜ್‌ 20 ನಿಮಿಷಗಳಲ್ಲಿ 25 ಅಂತಸ್ತಿನ ಕಟ್ಟಡವನ್ನು ಸರಸರನೆ ಹತ್ತಿದ್ದಾರೆ. 

ಸಮುಚ್ಛಯದ ತುದಿಯಲ್ಲಿ ನಿಂತು ಕನ್ನಡದ ಬಾವುಟ ಹಾರಿಸುವ ಮೂಲಕ ಸಂಭ್ರಮಿಸಿದ್ದಾರೆ. ಇವರ ಸಾಹಸಕ್ಕೆ ಜನ ಚಪ್ಪಾಳೆ, ಹರ್ಷೋದ್ಘಾರದ ಮೂಲಕ  ಮೆಚ್ಚುಗೆ ಸೂಚಿಸಿದ್ದಾರೆ. 

ಅಡ್ವೆಂಚರ್ ಮಂಕಿ ಕ್ಲಬ್ ಸ್ಥಾಪಿಸಲು ಹಣ ಸಂಗ್ರಹಿಸುವ ಉದ್ದೇಶದಿಂದ ಜ್ಯೋತಿರಾಜ್ ಅವರು ಈ ರೀತಿ ಸಾಹಸ ಪ್ರದರ್ಶಿಸುತ್ತಿದ್ದಾರೆ.  

ಈ ಪುಣ್ಯಾತ್ಮ 60 ವರ್ಷಗಳಿಂದ ನಿದ್ದೆಯನ್ನೇ ಮಾಡಿಲ್ಲವಂತೆ! 

ಉಡ್ಸ್‌ ವಿವಲ್ಲಾ ರೋಹಣ ಪ್ರಕರಣವು ಎನ್ನುವ ಶೀರ್ಷಿಕೆಯಡಿ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು, ಫೇಸ್‌ಬುಕ್‌ನಲ್ಲಿ ಇಡೀ ಚಿತ್ರಣವನ್ನು ಕಟ್ಟಿಕೊಡುವುದರೊಂದಿಗೆ, ಸರ್ಕಾರ ಇವರ ಸಹಾಸಕ್ಕೆ ನೆರವಾಗದೆ ಇರುವುದಕ್ಕೆ ತಾತ್ವಿಕ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಅವರ ಬರಹ ಈ ರೀತಿ ಇದೆ, “ ಇಂದು (ಗುರುವಾರ) ಬೆಳಗ್ಗೆ 10.17ಕ್ಕೆ ಆರಂಭಗೊಂಡ ಬ್ರಹ್ಮಗಿರಿಯ ಉಡ್ಸ್‌ವಿಲ್ಲ ವಸತಿ ಸಮುಚ್ಚಯದ 25 ಅಂತಸ್ತುಗಳನ್ನು ಮಾನವ ಶ್ರಮದಿಂದಲೇ ಏರುವ ಚಿತ್ರದುರ್ಗದ ಜ್ಯೋತಿರಾಜ್ (ಕೋತಿರಾಜ್ ಎಂದು ಪ್ರಸಿದ್ಧರು!) ಅವರ ಸಾಹಸವು 10.44ಕ್ಕೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ಆರೇಳು ಜನರ ಪುಟ್ಟ ತಂಡದೊಂದಿಗೆ ಸುರಕ್ಷತಾ ಹಗ್ಗದ ಸಹಿತ ಪೂರ್ಣ ತಯಾರಿಯೊಂದಿಗೆ ಬಂದಿದ್ದ ಜ್ಯೋತಿರಾಜ್ ಕಟ್ಟಡ ಏರಿ ಕೆಳಗಿಳಿದ ಬಳಿಕ ಸಂಕೋಚವೇ ಮೈವೆತ್ತು ಬಂದಂತೆ ಸೇರಿದವರ ಜೊತೆ ಬೆರೆತರು.

ಅವರ ದೈಹಿಕ ಶ್ರಮವನ್ನು ಅಲ್ಲಿ ನೆರೆದವರೊಬ್ಬರ ಮಾತುಗಳಲ್ಲಿ ವಿವರಿಸಬೇಕೆಂದರೆ, "ನಮಗೆ ಕತ್ತು ಎತ್ತಿ ನೋಡಿಯೇ ಕುತ್ತಿಗೆ ನೋವು ಬಂತು ಮಾರಾಯ್ರೆ!"

ಈ ರೀತಿಯ ಏರುವಿಕೆಗೆ ಅಕಾಡೆಮಿ ಒಂದನ್ನು ಸ್ಥಾಪಿಸಿ, ಅಲ್ಲಿ ಅದರ ತರಬೇತಿಗೆ ಅಗತ್ಯ ಇರುವ ಗೋಡೆ ನಿರ್ಮಿಸಲು ಹಣ ಸಂಗ್ರಹಕ್ಕಾಗಿ ಇಂತಹ ಸಾಹಸಕ್ಕಿಳಿದಿರುವ ಜ್ಯೋತಿರಾಜ್ ತಂಡಕ್ಕೆ

ಸೂಕ್ತ ದಿಕ್ಕು ತೋರಿಸುವ, ನೆರವು ಒದಗಿಸುವ ಮತ್ತು ವೃತ್ತಿಪರವಾಗಿ ಅಕಾಡೆಮಿಯನ್ನು ಮುನ್ನೆಡೆಸುವ ವ್ಯವಸ್ಥೆಗಳನ್ನು ರಾಜ್ಯದ

ಯುವಜನ - ಕ್ರೀಡಾ ಇಲಾಖೆಗಳಂತಹ ಸರ್ಕಾರಿ ಸಂಸ್ಥೆಗಳು ಪ್ರೋಆಕ್ಟಿವ್ ಆಗಿ ಮಾಡದಿದ್ದರೆ ಅವು ಇದ್ದು ಪ್ರಯೋಜನ ಏನು?!

ಈ ತಂಡ ಹೀಗೆ ಜನರಲ್ಲಿ ಬೇಡಿ "ಸಾಹಸ ಕ್ರೀಡೆಗೆ" ಹಣ ಸಂಗ್ರಹಿಸಬೇಕೇ?!! ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರು: ಬಸವರಾಜ ಬೊಮ್ಮಾಯಿ

ಜ್ಯೋತಿರಾಜ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವ ಪೊಲೀಸರು

ಜ್ಯೋತಿರಾಜ್ ಅವರು ಜೀವದ ಹಂಗು ತೊರೆದು ಸಾಹಸ ಮಾಡಿರುವುದಷ್ಟೇ ಅಲ್ಲ, ಜೀವ ರಕ್ಷಕರೂ ಹೌದು. ಇಂತಹ ಸಾಹಸವನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಲು ಸರ್ಕಾರ ಮುಂದಾಗಿಲ್ಲ.

ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವರಕ್ಷಣೆ ಮಾಡುವ, ಜ್ಯೋತಿರಾಜ್‍ಗೆ ಕರ್ನಾಟಕ ಸರ್ಕಾರ ಮನೆ ಭಾಗ್ಯ ಕರುಣಿಸಿಲ್ಲ ಎನ್ನುವುದು ಈ ಹಿಂದೆ ವರದಿ ಆಗಿತ್ತು.  

ಜ್ಯೋತಿರಾಜ್‌ ಅವರ ಪೂರ್ವಜರು ತಮಿಳುನಾಡಿನವರು.

ತಮಿಳುನಾಡಿನ ಸರ್ಕಾರ ಜ್ಯೋತಿರಾಜ್‌ ಅವರಿಗೆ ರಾಜಾತಿಥ್ಯ ನೀಡಲು ಮುಂದಾಗಿತ್ತು.

ಇವರ ಸಾಧನೆ, ಚತುರತೆ ಗಮನಿಸಿದ್ದ ತಮಿಳುನಾಡು ಸರ್ಕಾರ ನಮ್ಮಲ್ಲಿ ಬನ್ನಿ, ಮುಂದಿನ  ಒಲಂಪಿಕ್ಸ್‌ನಲ್ಲಿ ತಮಿಳುನಾಡಿನಿಂದ ಸ್ಪರ್ಧಿಸಿ ಎಂದು ಮನವಿಯನ್ನೂ ಮಾಡಿತ್ತು.

ನನ್ನೂರು ತಮಿಳುನಾಡಾಗಿರಬಹುದು. ನನಗೆ ಆಶ್ರಯ, ಅನ್ನ ಮತ್ತು ಪ್ರೋತ್ಸಾಹ ನೀಡಿದ್ದು, ಕರ್ನಾಟಕ.

ಒಲಂಪಿಕ್ಸ್‌ಗೆ ಸ್ಪರ್ಧಿಸುವುದಾದರೆ, ಕರ್ನಾಟಕದಿಂದಲೇ ಸ್ಪರ್ಧಿಸುವೆ ಎಂದು ವಿನಮ್ರತೆಯಿಂದ ಅವಕಾಶವನ್ನು ನಿರಾಕರಿಸಿದ್ದರು.

ಇಂತಹ ಮನಸ್ಸಿನಿಂದ ಕನ್ನಡಿಗನ ಆಸೆಗಳಿಗೆ ಸರ್ಕಾರದ ಇನ್ನಾದರೂ ಪ್ರೋತ್ಸಾಹ ನೀಡಲಿ.

ಏರುವಿಕೆಗೆ ಅಕಾಡೆಮಿ ಒಂದನ್ನು ಸ್ಥಾಪಿಸಿ, ಅಲ್ಲಿ ಅದರ ತರಬೇತಿಗೆ ಅಗತ್ಯ ಇರುವ ಗೋಡೆ ನಿರ್ಮಿಸಲು ಹಣ ಸಂಗ್ರಹಕ್ಕಾಗಿ

ಇಂತಹ ಸಾಹಸಕ್ಕಿಳಿದಿರುವ ಜ್ಯೋತಿರಾಜ್ ತಂಡಕ್ಕೆ ಸರ್ಕಾರ ಸ್ಪಂದಿಸಲಿ ಎನ್ನುವುದು ಎಲ್ಲ ಕನ್ನಡಿಗರ ನಿರೀಕ್ಷೆ. 

ಕೆಲಸದ ಅವಧಿ 9 ಗಂಟೆಯಿಂದ 12ಕ್ಕೆ: ಹೊಸ ಕಾಯ್ದೆಗೆ ರಾಜ್ಯ ಸರ್ಕಾರ ಅಸ್ತು! 

Published On: 04 March 2023, 05:01 PM English Summary: JyotJyothiraj left his life for adventure sports!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.