ದೇಶದ ಪ್ರಖ್ಯಾತ ವಿದ್ಯಾಸಂಸ್ಥೆಗಳ ಆದ ಐಐಟಿಗಳಿಗೆ ಪ್ರವೇಶ ಪಡೆಯಲು ಜೆಇಇ ನೋಂದಣಿ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದ್ದು, ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕಾಗಿ ವಿನಂತಿ. ಈ ಬಾರಿ ಇನ್ನೊಂದು ವಿಶೇಷತೆ ಏನೆಂದರೆ ಜೆಇಇ 13 ಭಾಷೆಗಳಲ್ಲಿ ನಡೆಯಲಿದ್ದು ಸ್ಥಳೀಯ ಭಾಷೆಗಳಿಗೂ ಈ ಬಾರಿ ಅವಕಾಶ ನೀಡಲಾಗಿದೆ.
ದೇಶಾದ್ಯಂತ ಇಂಗ್ಲಿಷ್ ಹಿಂದಿ ಹಾಗೂ ಉರ್ದು ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ, ಇನ್ನು ಉಳಿದ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲಿಷ್ ಎರಡರಲ್ಲೂ ಕೂಡ ಪರೀಕ್ಷೆ ನಡೆಯಲಿದೆ. ಇಂಗ್ಲಿಷ್ ಭಾಷೆಯು ಎಲ್ಲಾ ಭಾಷೆಗಳೊಂದಿಗೆ ಸಾಮಾನ್ಯವಾಗಿ ಇರುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಇಂಗ್ಲಿಷ್ ನೊಂದಿಗೆ ತೆಲುಗು, ಹೀಗೆ ಆ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಇಂಗ್ಲಿಷ್ ನಂದಿಗೆ ಪರ ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುವುದು.
ಆದರೆ ಈ ಬರಿ ಪರೀಕ್ಷೆಯನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗುವುದು ಎಂದು nta ಧೃಡಪಡಿಸಿದೆ ಹಾಗು ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಯಾವುದೇ ಸಂದರ್ಭದಲ್ಲಿ ಯಾವುದೇ ಹಂತದ ಪರೀಕ್ಷೆ ನಡೆಯುವಾಗ ಅವರಿಗೆ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೂ ಉಳಿದ ಮೂರು ಹಂತದ ಪರೀಕ್ಷೆಗಳನ್ನು ತಾವು ಅತ್ಯುತ್ತಮ ಸಾಧನೆಯನ್ನು ಮಾಡಬಹುದು. ಇದು ಒಂದು ರೀತಿಯಲ್ಲಿ ಸರ್ಕಾರ ಮಾಡಿದರು ಒಂದು ಅತ್ಯುನ್ನತ ನಿರ್ಧಾರ ಎಂದು ಹೇಳಬಹುದು. ಹಾಗೂ ವಿದ್ಯಾರ್ಥಿಗಳ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡುವಾಗ 4ಹಂತದ ಪರೀಕ್ಷೆಗಳನ್ನು ಗಣನೆಗೆ ತೆಗೆದುಕೊಂಡು ಯಾವ ಹಂತದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವುದು ಕೊಂಡಿರುತ್ತಾರೆ ಅದನ್ನು ಆಯ್ಕೆಗೆ ತೆಗೆದುಕೊಂಡು ಅದರ ಮೇಲೆ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
Share your comments