1. ಸುದ್ದಿಗಳು

ಜಲಜೀವನ್ ಮಿಷನ್ ಯೋಜನೆ: 11 ಕೋಟಿ ವೆಚ್ಚದ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ

Hitesh
Hitesh
Jaljeevan Mission Scheme: Administrative approval for implementation at a cost of 11 crores
  1. ರೈತರಿಗೆ ಸಿಹಿಸುದ್ದಿ: ಖಾಸಗಿ ಜಮೀನಿನಲ್ಲಿ ಶ್ರೀಗಂಧದ ಬೆಳೆಯಲು ಸಚಿವ ಸಂಪುಟ ಒಪ್ಪಿಗೆ!

ಹೌದು, ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧ ಬೆಳೆಸಿ, ಮಾರಾಟ ಮಾಡಲು ಅವಕಾಶ ನೀಡುವ

“ಕರ್ನಾಟಕ ರಾಜ್ಯ ಶ್ರೀಗಂಧ ನೀತಿಗೆ” ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಗಂಧಕ್ಕೆ ಬೇಡಿಕೆ ಇದೆ.

ಶ್ರೀಗಂಧವನ್ನು ಬೆಳೆಸುವ ರೈತರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಲಾಗುವುದು.

ಅಲ್ಲದೇ ಶ್ರೀಗಂಧದ ಮರವನ್ನ ಕಳ್ಳತನದಿಂದ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಲಿದೆ.

ಈ ಕ್ರಮದಿಂದಾಗಿ ರೈತರ ಆದಾಯವೂ ಕೂಡ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.

ಟ್ವಿಟರ್‌ ಪ್ರಮುಖ ಕಚೇರಿಗಳು ತಾತ್ಕಾಲಿಕ ಬಂದ್‌: ಎಲಾನ್‌ ಮಸ್ಕ್‌ ಹೇಳಿದ್ದೇನು ?

  1. ನವೆಂಬರ್‌ 26ರಂದು ದೇಶಾದ್ಯಂತ “ರಾಜಭವನ ಚಲೋ” ನಡೆಸುವುದಾಗಿ ಎಸ್‌ಕೆಎಂ ಖಡಕ್‌ ಎಚ್ಚರಿಕೆ

ರೈತವಿರೋಧಿ 3 ವಿವಾದಾತ್ಮಕ ಕಾನೂನುಗಳನ್ನ ವಿರೋಧಿಸಿ, ಕಳೆದ ವರ್ಷ ದೆಹಲಿಯಲ್ಲಿ ನಡೆಸಿದ್ದ ಪ್ರತಿಭಟನೆಯನ್ನು ಕೆಲವು ಭರವಸೆ ನೀಡಿ ನಿಲ್ಲಿಸಲಾಗಿತ್ತು.

ಆದರೆ, ಇದುವರೆಗೂ ಕೇಂದ್ರ ಸರ್ಕಾರ ರೈತರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ.

ಆದ್ದರಿಂದ ನವೆಂಬರ್‌ 26ರಂದು “ರಾಜಭವನ ಚಲೋ” ಕೈಗೊಳ್ಳುತ್ತೇವೆ.

ಅಲ್ಲದೇ “ನವೆಂಬರ್ 19 ರಂದು 'ವಿಜಯ ದಿನವನ್ನಾಗಿ ಆಚರಿಸಲು ಎಸ್‌ಕೆಎಂ ನಿರ್ಧಾರ ಮಾಡಿದೆ.

ಡಿಸೆಂಬರ್‌ 1ರಿಂದ 11ರವರೆಗೆ  ಎಲ್ಲಾ ಪಕ್ಷಗಳ ರಾಜ್ಯಸಭಾ, ಲೋಕಸಭಾ ಸದಸ್ಯರ ಕಚೇರಿಗಳಿಗೆ ಜಾಥಾ ನಡೆಸಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ.

ದೆಹಲಿಯ ಗುರುದ್ವಾರ ರಾಕಬ್‌ಗಂಜ್‌ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

  1. ಕೋಲಾರದ ಸರ್ಕಾರಿ ಗೋಶಾಲೆಯಲ್ಲಿ 10ಕ್ಕೂ ಹೆಚ್ಚು ಹಸುಗಳ ಸಾವು

ಕೋಲಾರ ಜಿಲ್ಲೆ ಬೇತಮಂಗಲದ ಸರ್ಕಾರಿ ಗೋಶಾಲೆಯಲ್ಲಿ

10ಕ್ಕೂ ಹೆಚ್ಚು ಹಸು ಮತ್ತು ಕರುಗಳು ಸಾವನ್ನಪ್ಪಿರುವ ಸುದ್ದಿ ತಿಳಿದು ಬಂದಿದೆ.

ಬೇತಮಂಗಲ ಸಮೀಪದ ಗುಟ್ಟಹಳ್ಳಿಯಲ್ಲಿ ಆರಂಭಿಸಿದ್ದ ಗೋಶಾಲೆಯಲ್ಲಿ ಈ ಘಟನೆ ನಡೆದಿದೆ.

“27 ಜಾನುವಾರುಗಳೊಂದಿಗೆ ಇಲ್ಲಿ ಗೋಶಾಲೆ ಆರಂಭಿಸಲಾಗಿತ್ತು.

ಆದರೆ, ಆರಂಭವಾಗಿ ಕೇವಲ ಒಂದೇ ವರ್ಷದಲ್ಲಿ ಇಷ್ಟೊಂದು ಹಸುಗಳು ಸಾವನ್ನಪ್ಪಿವೆ.

ಸರ್ಕಾರದ ನೆರವು ಮತ್ತೆ ದಾನಿಗಳ ನೆರವು ಇದ್ದರೂ ಸೂಕ್ತ ನಿರ್ವಹಣೆ ಮಾಡುತ್ತಿಲ್ಲ.

ಇದರಿಂದ ಹಸು-ಕರುಗಳು ಸಾವನ್ನಪ್ಪುತ್ತಿವೆ” ಎಂದು ಸ್ಥಳಿಯರು ಆರೋಪಿಸಿದ್ದಾರೆ.

Gold Rate: ಇಳಿಕೆ ಆಗಲಿದೆ ಚಿನ್ನದ ದರ, ಇಂದಿನ ದರವೆಷ್ಟು ?!

  1. ರೈತರಿಗೆ ಪರಿಹಾರ ನೀಡಲು ವಿಳಂಬ: ಅಧಿಕಾರಿಯ ವಾಹನ ಜಪ್ತಿ ಮಾಡುವಂತೆ ಕೋರ್ಟ್‌ ಆದೇಶ!

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ ಗ್ರಾಮದ ರೈತ

ಬುದ್ದಿರಾಜ ಶಾಂತಿನಾಥ ಪಾಟೀಲ ಅವರ ಜಮೀನನ್ನು ರಸ್ತೆ ಅಭಿವೃದ್ದಿಗೆ ಇಲಾಖೆ ವಶಪಡಿಸಿಕೊಂಡಿತ್ತು.

ಭೂಮಿ ವಶಪಡಿಸಿಕೊಂಡದ್ದಕ್ಕೆ ಬದಲಾಗಿ ರೈತನಿಗೆ 11 ಲಕ್ಷ ಪರಿಹಾರ ನೀಡುವುದಾಗಿ ಇಲಾಖೆ ಆದೇಶ ನೀಡಿತ್ತು.

ಆದರೆ, ಸರ್ಕಾರ ಆದೇಶ ನೀಡಿದ್ದರೂ ಅಧಿಕಾರಿಗಳು ರೈತರಿಗೆ ಪರಿಹಾರ ನೀಡಲು ವಿಳಂಬ ಮಾಡಿದ್ದರು.

ಇದನ್ನು ಪ್ರಶ್ನಿಸಿ ರೈತ ಬುದ್ದಿರಾಜ ಕೋರ್ಟ್‌ ಮೊರೆ ಹೋಗಿ ಕೇಸ್‌ ಕೂಡ ದಾಖಲಿಸಿದ್ದರು.

ಇದೀಗ ರೈತಪರ ಧ್ವನಿ ಎತ್ತಿದ ನ್ಯಾಯಾಲಯ ಸರ್ಕಾರಿ ಅಧಿಕಾರಿಯ ವಾಹನ  ಜಪ್ತಿ ಮಾಡುವಂತೆ ಆದೇಶ ನೀಡಿದೆ.

ಮತ್ತು ಶೀಘ್ರವೇ ರೈತರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

********

  1. ಜಲಜೀವನ್ ಮಿಷನ್ ಯೋಜನೆಯಡಿ 11 ಕೋಟಿ ವೆಚ್ಚದ ಅನುಷ್ಠಾನಕ್ಕೆ ಅನುಮೋದನೆ.

ಜಲಜೀವನ್ ಮಿಷನ್ ಯೋಜನೆಯಡಿ ಬಳ್ಳಾರಿ ಜಿಲ್ಲೆ ನೆಲ್ಲುಡಿ ಹಾಗೂ ಇತರ 6 ಜನವಸತಿ ಪ್ರದೇಶಗಳ

ಕುಡಿಯುವ ನೀರು ಸರಬರಾಜು ಪುನಶ್ಚೇತನಗೊಳಿಸುವ ಕಾಮಗಾರಿಯನ್ನು

11 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನ ನೀಡಲಾಗಿದೆ.

********

  1. ರಾಜ್ಯದಲ್ಲಿ 3 ಹೊಸ ವನ್ಯಜೀವಿ ಧಾಮ ಮತ್ತು 4 ಮೀಸಲು ಅರಣ್ಯ ಪ್ರದೇಶಗಳ ಘೋಷಣೆ!

ಉಚ್ಚಾರೆಗುಡ್ಡ ವನ್ಯ ಜೀವಿ ಧಾಮ, ಬಂಕಾಪುರ ವನ್ಯಜೀವಿ ಧಾಮ, ಅರಸೀಕೆರೆ ಕರಡಿ ಧಾಮ ಸೇರಿದಂತೆ

ಮೂರು ವನ್ಯಜೀವಿ ಧಾಮಗಳ ಘೋಷಣೆ ಮಾಡಲಾಗಿದೆ.

ಅಲ್ಲದೇ 4 ಮೀಸಲು ಅರಣ್ಯ ಪ್ರದೇಶಗಳನ್ನು ಕೂಡ ಘೋಷಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಈ ಮೂಲಕ “ರಾಜ್ಯದ ಮೊದಲ ತೋಳ ವನ್ಯಜೀವಿ ಧಾಮವಾಗಿ” ಬಂಕಾಪುರ ವನ್ಯಜೀವಿ ಧಾಮ ಅಸ್ತಿತ್ಪಕ್ಕೆ ಬರಲಿದೆ.

ಕೊಪ್ಪಳದ ಹಿರೆಸೂಲಿಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಆಲಮಟ್ಟಿ ಬಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ,

ಉತ್ತರ ಕನ್ನಡದ ಮುಂಡಿಗೆ ಕೆರೆ ಮತ್ತು ಪಕ್ಷಿಸಂರಕ್ಷಣಾ ಮಿಸಲು ಪ್ರದೇಶ, ಬೋನಾಳ ಪಕ್ಷಿಸಂರಕ್ಷಣಾ ಮೀಸಲು ಪ್ರದೇಶಗಳನ್ನ

ಹೊಸದಾಗಿ ಸಂರಕ್ಷಣಾ ಮೀಸಲು ಪ್ರದೇಶಗಳಾಗಿ ಘೋಷಿಸಲು ತೀರ್ಮಾನಿಸಲಾಗಿದೆ.

2021ರಲ್ಲಿ ನಡೆದಿದ್ದ ವನ್ಯಜೀವಿ ಮಂಡಳಿ ಸಭೆಯ ನಿರ್ಣಯಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

********

  1. ಅಮಿಟಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕೃಷಿ ಜಾಗರಣ ಭಾಗಿ

ಅಮಿಟಿ ವಿಶ್ವವಿದ್ಯಾಲಯದ ಕೃಷಿ ವಿಭಾಗ, ಅಮಿಟಿ ಇನ್‌ಸ್ಟಿಟ್ಯೂಟ್ ಆಫ್ ಆರ್ಗಾನಿಕ್ ಅಗ್ರಿಕಲ್ಚರ್

ಇತ್ತೀಚೆಗೆ ನೋಯ್ಡಾ ಕ್ಯಾಂಪಸ್‌ನಲ್ಲಿ ಉದ್ಯಮ-ಅಕಾಡೆಮಿ ಕಾರ್ಯಾಗಾರ ಆಯೋಜಿಸಿತ್ತು. 

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಲಾಗಿದ್ದ ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ

ಎಂ.ಸಿ ಡೊಮಿನಿಕ್ ಅವರು  ಕೃಷಿ ಕ್ಷೇತ್ರದಲ್ಲಿ ಕೈಗೊಳ್ಳುತ್ತಿರುವ ಸೇವೆಗಳ ಕುರಿತಾಗಿ ಮಾತನಾಡಿದರು.

"ರೈತರಿಗೆ ನೆರವಾಗುವ ಉದ್ದೇಶದಿಂದ ಕೃಷಿ ಜಾಗರಣವೂ

FTB Organic, Farmer the Journalist ಇನ್ನೂ ಮುಂತಾದ ಕೆಲಸ ಮಾಡುತ್ತಿದೆ ಎಂದರು.

ಧನುಕಾದ ಕಮಲ್ ಕುಮಾರ್‌, ಇಫ್ಕೋದ ಅಗ್ರಿಟೆಕ್ ಮುಖ್ಯಸ್ಥ ಮೊರುಪ್ ನ್ಯಾಮ್‌ಗಲ್‌,

ರಿಲಯನ್ಸ್ ರೀಟೇಲ್‌ನಿಂದ ಶಿಶಿರ್ ಕುಮಾರ್, ಕೃಷಿ ವಿಮಾನ್‌ನ ಶಂಕರ್ ಗೋಯೆಂಕಾ ಸೇರಿದಂತೆ ಹಲವಾರು ಕೃಷಿ ಉದ್ಯಮದ ತಜ್ಞರು ಸೆಷನ್‌ನಲ್ಲಿ ಭಾಗವಹಿಸಿದ್ದರು.

********

  1. ಕೋರೊಮಂಡಲ್‌ ರಸಗೊಬ್ಬರ ಕಂಪನಿಗೆ ನೂತನ ಡೆಪ್ಯೂಟಿ ಜನರಲ್‌ ಮ್ಯಾನೇಜರ್‌ ಆಗಿ ದೀಪಕ್‌ ಥೋರಾಟ್‌ ನೇಮಕವಾಗಿದ್ದಾರೆ.

ಇವಿಷ್ಟು ಈ ಹೊತ್ತಿನ ಟಾಪ್‌ ಅಗ್ರಿ ನ್ಯೂಸ್‌ಗಳು. ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.

Published On: 18 November 2022, 05:47 PM English Summary: Jaljeevan Mission Scheme: Administrative approval for implementation at a cost of 11 crores

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.