2020-21ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ (ಆರ್.ಡಬ್ಲೂ.ಸಿ.ಐಎಸ್) ಹಿಂಗಾರು ಹಂಗಾಮಿನ ಮಾವು ಬೆಳೆಗೆ ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ. ಹಾವೇರಿ ಜಿಲ್ಲೆಯ ರೈತರು ನವೆಂಬರ್ 15 ರವರೆಗೆ ವಿಮೆ ಕಟ್ಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಮಾವು ಬೆಳೆಗೆ ವಿಮೆ ಮಾಡಿಸದ ರೈತರಿಗೆ ಇನ್ನೂ ಕಾಲಾವಕಾಶವಿದೆ. ಯಾರು ವಿಮೆ ಮಾಡಿಸಿಲ್ಲವೋ ಅಂತಹ ರೈತರು ವಿಮೆ ಮಾಡಿಸಿ ಸೌಲಭ್ಯ ಪಡೆಯಬಹುದು.
ಬ್ಯಾಡಗಿ, ಹಾವೇರಿ, ಹಾನಗಲ್, ಹಿರೇಕೆರೂರ, ರಾಣೇಬೆನ್ನೂರ, ಶಿಗ್ಗಾವಿ ಹಾಗೂ ಸವಣೂರ ತಾಲೂಕಿನ ಹಿಂಗಾರು ಹಂಗಾಮಿನ ಮಾವು(ಎನ್.ಎಸ್) ಬೆಳೆಯ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ 80 ಸಾವಿರ ರೂಪಾಯಿ ಮತ್ತು ಸಾಮಾನ್ಯ ವಿಮಾ ಕಂತು 4 ಸಾವಿರ ರೂಪಾಯಿ ಇರುತ್ತದೆ. ನವೆಂಬರ್ 15 ರೊಳಗೆ ನೋಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಆಸಕ್ತ ರೈತರು ವಿಮಾ ಮೊತ್ತವನ್ನು ಪಾವತಿಸಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ಮತ್ತು ಸಂಘಗಳನ್ನು ಸಂಪರ್ಕಿಸಬಹುದು.
ರೈತರು ತಮ್ಮ ಜಮೀನಿನ ಪಹಣಿ ಪತ್ರ, ಖಾತೆ ಪುಸ್ತಕ, ಪಾಸ್ ಬುಕ್, ಕಂದಾಯ ರಶೀದಿ ಮತ್ತು ಆಧಾರ್ ದಾಖಲೆಗಳನ್ನು ನಿಡಬೇಕು. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ವಿಮೆ ಪಾವತಿಸಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯಲ್ಲಿಮತ್ತು ಸಹಕಾರಿ ಸಂಘಗಳನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ವಿಮೆಗೆ ನೊಂದಾಯಿಸಿಕೊಳ್ಳಬೇಕೆಂದು ಮಾವು ಬೆಳೆಗಾರರಿಗೆ ಜಿಲ್ಲಾ ತೋಟಗಾರಿಕೆ ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತೋಟಗಾರಿಕೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು.
Share your comments