ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ಗಳಲ್ಲಿ ಇನ್ಮುಂದೆಡ ಬಗೆ ಬಗೆಯ ಊಟ, ಉಪಹಾರ ದೊರೆಯಲಿದೆ. ಹೌದು ಇಂದಿರಾ ಕ್ಯಾಂಟೀನ್ಗಳಲ್ಲಿ ದರ್ಶಿನಿ ಹೋಟೆಲ್ಗಳ ರೀತಿಯಲ್ಲಿ ಹೊಸ ಮೆನು ಸಿದ್ದವಾಗಿದ್ದು, ಆದಷ್ಟು ಬೇಗ ಈ ವೈರಟಿ ಔತಣವನ್ನು ಕ್ಯಾಂಟೀನ್ಗಳಲ್ಲಿ ಆರಂಭಿಸಲಾಗುವುದು.
ಹೊಸ ಮೆನೂ ಪ್ರಕಾರ ಇನ್ಮುಂದೆ ಇಂದಿರಾ ಕ್ಯಾಂಟಿನ್ಗಳಲ್ಲಿ ಇಡ್ಲಿ ಚಟ್ನಿ/ ಸಾಂಬಾರ್, ಬ್ರೆಡ್ ಜಾಮ್, ಅನ್ನ ಸಾಂಬಾರ್, ಬೇಕರಿ ಬನ್, ಪಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್, ರಾಗಿ ಮುದ್ದೆ ಸೊಪ್ಪುಸಾರು ಚಪಾತಿ ಪಲ್ಯದ ಜೊತೆಗೆ ಟೀ ಕಾಫಿ ವ್ಯವಸ್ಥೆಯೂ ಇರಲಿದೆ.
ಸೋಮವಾರ ; ಬೆಳಗ್ಗೆ : ಇಡ್ಲಿ ಸಾಂಬಾರ್, ಪುಲಾವ್ ರೈತ, ಬ್ರೆಡ್ ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು ಜೊತೆಗೆ ಕೀರಿನ ವ್ಯವಸ್ಥೆ ಇರಲಿದೆ.
ರಾತ್ರಿ: ಅನ್ನ ಸಾಂಬಾರ್ ಮತ್ತು ರಾಗಿಮುದ್ದೆ ಸೊಪ್ಪು ಸಾರು
ಮಂಗಳವಾರ : ಬೆಳಗ್ಗೆ ಇಡ್ಲಿ ಚಟ್ನಿ, ಬಿಸಿ ಬೇಳೆ ಬಾತ್, ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ ಜತೆಗೆ ಮೊಸರು ಹಾಗೂ ಚಪಾತಿ ಸಾಗು ಮತ್ತು ಕೀರು
ರಾತ್ರಿ: ಅನ್ನ ಸಾಂಬಾರ್ + ರೈತ , ಚಪಾತಿ + ವೆಜ್ ಕರಿ
ಬುಧವಾರ : ಬೆಳಗ್ಗೆ: ಇಡ್ಲಿ ಸಾಂಬಾರ್ / ಖಾರಾ ಬಾತ್ / ಬೇಕರಿ ಬನ್
ಮಧ್ಯಾಹ್ನ : ಅನ್ನ ಸಾಂಬಾರ್ + ಕೀರ್ / ರಾಗಿಮುದ್ದೆ + ಸೊಪ್ಪು ಸಾರು
ರಾತ್ರಿ ಅನ್ನ : ಸಾಂಬಾರ್ / ರಾಗಿಮುದ್ದೆ + ಸೊಪ್ಪು ಸಾರು
ಗುರುವಾರ : ಬೆಳಗ್ಗೆ ಇಡ್ಲಿ ಸಾಂಬಾರ್ / ಪಲಾವ್ / ಬ್ರೆಡ್ ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ + ಮೊಸರು / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಶುಕ್ರವಾರ : ಬೆಳಗ್ಗೆ : ಇಡ್ಲಿ ಸಾಂಬಾರ್ / ಬಿಸಿಬೇಳೆ ಬಾತ್ / ಮಂಗಳೂರು ಬನ್ಸ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರಾನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರು
ಶನಿವಾರ : ಬೆಳಗ್ಗೆ ಇಡ್ಲಿ ಸಾಂಬಾರ್ / ಪೊಂಗಲ್ / ಬೇಕರಿ ಬನ್
ಮಧ್ಯಾಹ್ನ :ಅನ್ನ ಸಾಂಬಾರ್ + ಕೀರ್ / ಚಪಾತಿ ಸಾಗು + ಕೀರ್
ರಾತ್ರಿ : ಅನ್ನ ಸಾಂಬಾರ್ + ಮೊಸರು / ಚಪಾತಿ + ವೆಜ್ ಕರಿ
ಭಾನುವಾರ : ಬೆಳಗ್ಗೆ ಇಡ್ಲಿ ಚಟ್ನಿ / ಖಾರಾ ಬಾತ್ / ಬ್ರೆಡ್ ಜಾಮ್
ಮಧ್ಯಾಹ್ನ : ಅನ್ನ ಸಾಂಬಾರ್ / ಮೊಸರನ್ನ / ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ : ಅನ್ನ ಸಾಂಬಾರ್ / ರಾಗಿಮುದ್ದೆ ಸೊಪ್ಪು ಸಾರಿನ ಮೆನೂ ಇರಲಿದೆಯಂತೆ.
ಇನ್ನು ಕಳೆದ ವಾರ ನಡೆದ ಪರಿಶೀಲನಾ ಸಭೆಯಯಲ್ಲಿ ಬೆಂಗಳೂರಿನಲ್ಲಿ ಕನಿಷ್ಠ 250 ಇಂದಿರಾ ಕ್ಯಾಂಟೀನ್ಗಳನ್ನು ತೆರೆಯಲಾಗುವುದು ಎಂದು ಸಿದ್ದರಾಮಯ್ಯ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಮುಂದೆ ಕ್ಯಾಂಟೀನ್ಗಳ ವೆಚ್ಚವನ್ನು ಬಿಬಿಎಂಪಿ ಮತ್ತು ಸರ್ಕಾರವು 50:50 ಅನುಪಾತದಲ್ಲಿ ಭರಿಸಲಿವೆ. ಈ ಮೊದಲು ಅದು 70:30 ಆಗಿತ್ತು, ಇದರಲ್ಲಿ ಶೇ 70 ಅನ್ನು ಬಿಬಿಎಂಪಿ ಭರಿಸುತ್ತಿತ್ತು.
Share your comments