1. ಸುದ್ದಿಗಳು

ದೀಪಾವಳಿ ಹಬ್ಬದ ಪ್ರಯುಕ್ತ ಮತ್ತೆ 400 ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ದೀಪಾವಳಿ ಹಬ್ಬದ ಹೊತ್ತಲ್ಲೇ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. ಹಬ್ಬದ ಋತುವಿಲ್ಲಿ ಸುಮಾರು 400 ಹೊಸ ವಿಶೇಷ ರೈಲುಗಳನ್ನು ಓಡಿಸಲಾಗುವುದು ಎಂದು ತಿಳಿಸಿದೆ.

ಹಬ್ಬದ ಋತುವಿನಲ್ಲಿ ವೇಳಾಪಟ್ಟಿ, ಟಿಕೆಟ್ ಲಭ್ಯತೆ ಮತ್ತು ಪ್ರಯಾಣ ಮಾರ್ಗದರ್ಶಿ ಸೂತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯು ನೋಟಿಸ್ ನೀಡಿದೆ. ಪ್ರಯಾಣಕ್ಕಾಗಿ ಪ್ರಯಾಣಿಕರು ಮುಂಗಡವಾಗಿ ಸೀಟು ಕಾಯ್ದಿರಿಸಬೇಕೆಂದು ಉತ್ತರ ರೈಲ್ವೆ ಮನವಿ ಮಾಡಿದೆ. ಈ ವಿಶೇಷ ರೈಲುಗಳಲ್ಲಿ ಮೀಸಲು ದರ್ಜೆಯ ಬೋಗಿಗಳಿಗೆ ಮಾತ್ರ ಅವಕಾಶ ನೀಡಲಾಗುವದು. ರೈಲ್ವೆ ಇಲಾಖೆ ಹೊರಡಿಸಿರುವ ನೋಟೀಸ್ ನಲ್ಲಿ ಕಾಯ್ದಿದಿರಿಸಿ ಟಿಕೆಟ್ ಇಲ್ಲದೆ ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕನಿಗೆ ಅವಕಾಶ ನಿಡುವದಿಲ್ಲ ಎಂದು ಹೇಳಲಾಗಿದೆ.

ವಿಶೇಷ ರೈಲುಗಳು:

ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಪೂಜಾ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ ಸರಣಿಯಲ್ಲಿ ಪೂರ್ವ ಮಧ್ಯ ರೈಲ್ವೆಯು ನವೆಂಬರ್ 10 ರಿಂದ ಡಿಸೆಂಬರ್ 2 ರ ವರೆಗೆ ಆರು ಪೂಜಾ ವಿಶೇಷ ರೈಲುಗಳನ್ನು ಓಡಿಸಲಿದೆ. ಇವುಗಳಲ್ಲಿ ಪಾಟ್ನಾದಿಂದ ರಾಂಚಿ, ಧನಾಬಾದ್, ಬರ್ಕಾಕಾನಾ, ಸಿಂಗ್ರೌಲಿ ಮತ್ತು ದುರ್ಗ್‍ಗೆ ತಲಾ ಒಂದು ರೈಲು, ಒಂದು ಪೂಜಾ ವಿಶೇಷ ರೈಲುಗಳು ಜಯನಗರದಿಂದ ಮಣಿಹರಿಗೆ ಸಂಚರಿಸಲಿವೆ.

ಧನಬಾದ್-ಪಾಟ್ನಾ ಪೂಜಾ ವಿಶೇಷ, ಪಾಟ್ನಾ-ಧನಾಬಾದ್ ವಿಶೇಷ, ಬರ್ಕಾನಾ-ಪಟ್ನಾ ಪೂಜಾ ವಿಶೇಷ, ಸಿಂಗ್ರೌಲಿ-ಪಟ್ನಾ ಪೂಜಾ ವಿಶೇಷ, ಜಯನಗರ-ಮಣಿಹರಿ ಪೂಜಾ ವಿಶೇಷ, ಮಣಿಹರಿ-ಜಯನಗರ ಪೂಜಾ ವಿಶೇಷರಾಜೇಂದ್ರನಗರ ಟರ್ಮಿನಲ್-ದುರ್ಗ್ ಪೂಜಾ ವಿಶೇಷ, ರಾಜೇಂದ್ರನಗರ ಟರ್ಮಿನಲ್ ಪೂಜಾ ವಿಶೇಷ, ಪಾಟ್ನಾ-ರಾಂಚಿ ಪೂಜಾ ವಿಶೇಷ, ರಾಂಚಿ-ಪಾಟ್ನಾ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.

Published On: 07 November 2020, 06:52 PM English Summary: Indian Railways to operate around 400 special trains as India gears up for the festive season

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.