ಭಾರತ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಕೇವಲ ಎರಡೇ ದಿನಗಳಲ್ಲಿ ಭಾರತವು 10 ವಿಕೇಟ್ ಗಳ ಅಂತರದಿಂದ ಜಯಗಳಿಸಿತು. ಎರಡೂ ದಿನಗಳಲ್ಲಿ ಸ್ಪಿನ್ನರ್ ಗಳದ್ದೇ ಚಾಕಚಕ್ಯತೆಯಿಂದಾಗಿ ಭಾರತವು ಜಯಗಳಿಸಿತು. ಈ ಸಾಧನೆಯೊಂದಿಗೆ ಭಾರತ ಕ್ರಿಕೇಟ್ ತಂಡ 4 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ಜೊತೆಗೆ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ತನ್ನ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.
ಇಂಗ್ಲೆಂಡ್ ವಿರುದ್ಧ ಆರಂಭವಾಗಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಕೇವಲ 112 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟ್ ಮಾಡಿದ ಇಂಡಿಯಾ 145 ರನ್ ಗಳಿಗೆ ಆಲೌಟ್ ಆಗಿ ಕೇವಲ 33 ರನ್ ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ಕೇವಲ 81 ರನ್ಘಲಿ ಆಲೌಟ್ ಆಗಿ ಕೇವಲ 49 ರನ್ ಗಳ ಸುಲಭ ಗುರಿ ನೀಡಿತ್ತು. ಟೆಸ್ಟ್ ಆಗ ಮುಗಿಯಲು ಇನ್ನೂ ಮೂರು ದಿನ ಬಾಕಿ ಇರುವಾಗಲೇ ಅಲ್ಪ ಮೊತ್ತದ ಸವಾಲನ್ನು ಯಾವುದೇ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿ ಭಾರತ ಗೆಲುವಿನ ನಗೆ ಬೀರಿತು.
ಇದಕ್ಕೂ ಮುನ್ನ ಅಂದರೆ 2018ರಲ್ಲಿ ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನಕ್ಕೆ ಗೆಲುವು ಸಾಧಿಸಿತ್ತು. ಆದರೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎರಡೇ ದಿನದಲ್ಲಿ ಮಣಿಸಿರುವುದು ಭಾರತದ ಮಟ್ಟಿಗೆ ದೊಡ್ಡ ಸಾಧನೆ ಆಗಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮಾರಕ ಬೌಲಿಂಗ್ ಪ್ರದರ್ಶಿಸಿದ ಅಕ್ಷರ್ ಪಟೇಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು. ವಿಶ್ವದ ಅತೀ ದೊಡ್ಡ ಕ್ರೀಡಾಂಗಣದಲ್ಲಿ ಸ್ಪಿನ್ ಹೊರತುಪಡಿಸಿ ಬೇರೆ ಯಾವುದೇ ರೀತಿಯ ಆಟ ನಡೆಯಲಿಲ್ಲ. ಉರುಳಿದ 30 ವಿಕೇಟ್ಗಳಲ್ಲಿ 28 ವಿಕೇಟ್ ಗಳು ಸ್ಪಿನ್ನರ್ ಗಳ ಪಾಲಾದವು.
ಭಾರತದ ಅಭೂತಪೂರ್ವ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಸ್ಕೋರ್ ವಿವರ:
ಇಂಗ್ಲೆಂಡ್ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ 112 ರನ್ ಗಳಿಸಿ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್ ನಲ್ಲೂ ಕೇವಲ 81 ರನ್ ಗಳಿಸಿ ಎಲ್ಲಾ ವಿಕೇಟ್ ಕಳೆದುಕೊಂಡಿತು.
ಭಾರತ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 145 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿ ಜಯಗಳಿಸಿತು
Share your comments