ಭಾರತದಲ್ಲಿನ ಗೋಧಿ ಮತ್ತು ಅದರ ಉಪನ್ನಗಳ ಬೆಲೆಗಳ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತವು ತಕ್ಷಣವೇ ಗೋಧಿ ರಫ್ತುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಸರ್ಕಾರವು ಗೋಧಿ ರಫ್ತನ್ನು ಈ ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ. ದೇಶದಲ್ಲಿ ಆಹಾರ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರವು "ನಿಷೇಧಿತ" ವರ್ಗದ ಅಡಿಯಲ್ಲಿ ಗೋಧಿ ರಫ್ತನ್ನು ತಂದಿದೆ.
ಇದನ್ನೂ ಓದಿರಿ: ರೈತರಿಗೆ ಸಿಹಿ ಸುದ್ದಿ: ಮಾರುಕಟ್ಟೆಯಲ್ಲಿ ಗೋಧಿಗೆ ಬಂಪರ್ ಬೆಲೆ: ರೈತರ ಮುಖದಲ್ಲಿ ನಗೆ!
Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (Directorate General Of Foreign Trade) ಶುಕ್ರವಾರ ಸಂಜೆ ಈ ಬಗ್ಗೆ ಆದೇಶ ಹೊರಡಿಸಿದೆ.
ಮೇ ಅಥವಾ ಅದಕ್ಕೂ ಮೊದಲು ILOC ಅಥವಾ ರಫ್ತಿನ ಒಪ್ಪಂದ ನಡೆದಿದ್ದರೆ ಮಾತ್ರ ಮೇ 13ರ ಒಳಗೆ ರಫ್ತಿಗೆ ಅವಕಾಶ ನೀಡಲಾಗುವುದು. ಇಲ್ಲವಾದರೆ ಗೋಧಿ ರಫ್ತಿಗೆ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಿದೆ.
ಇತರ ದೇಶಗಳಿಗೆ ತಮ್ಮ ಆಹಾರ ಭದ್ರತೆ ಅಗತ್ಯಗಳನ್ನು ಪೂರೈಸಲು ಮತ್ತು ಅವರ ಸರ್ಕಾರಗಳ ಕೋರಿಕೆಯ ಆಧಾರದ ಮೇಲೆ ಕೇಂದ್ರ ಸರ್ಕಾರವು ನೀಡುವ ಅನುಮತಿಯ ಆಧಾರದ ಮೇಲೆ ರಫ್ತು ಮಾಡಲು ಸಹ ಅನುಮತಿಸಲಾಗುವುದು ಎಂದು ಕೂಡಾ ಉಲ್ಲೇಖಿಸಲಾಗಿದೆ.
ಕಪ್ಪು ಗೋಧಿಯ ಬಗ್ಗೆ ನಿಮಗೆ ಗೊತ್ತೆ? ಇಲ್ಲಿದೆ ರೈತರಿಗೆ ಲಾಭದಾಯಕ ಕೃಷಿಯ ಐಡಿಯಾ!
ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ
ಒಂಬತ್ತು ದೇಶಗಳಿಗೆ ವ್ಯಾಪಾರ ನಿಯೋಗ ಈ ನಡುವೆ 2022-23ರಲ್ಲಿ 10 ಮಿಲಿಯನ್ ಟನ್ ಧಾನ್ಯವನ್ನು ರಫ್ತು ಮಾಡುವ ಗುರಿಯನ್ನು ಹೊಂದಿರುವುದರಿಂದ ಗೋಧಿ ಸಾಗಣೆಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಪರಿಶೀಲನೆ ಮಾಡಲು ಭಾರತವು ಮೊರಾಕೊ, ಟುನೀಶಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಒಂಬತ್ತು ದೇಶಗಳಿಗೆ ವ್ಯಾಪಾರ ನಿಯೋಗಗಳನ್ನು ಕಳುಹಿಸಿದೆ.
ವಾಣಿಜ್ಯ ಸಚಿವಾಲಯವು ವಾಣಿಜ್ಯ, ಹಡಗು ಮತ್ತು ರೈಲ್ವೆ ಸೇರಿದಂತೆ ವಿವಿಧ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಗೋಧಿ ರಫ್ತಿನ ಕಾರ್ಯಪಡೆಯನ್ನು ಸ್ಥಾಪಿಸಿದೆ.
Bitter Gourd :ಹೈಬ್ರೀಡ್ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್ ಟಿಪ್ಸ್
Bottle Gourd Home Gardening! ಮನೆಯಲ್ಲಿಯೇ ಬೆಳೆಯಿರಿ!
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (Directorate General Of Foreign Trade) ಅಂದಾಜಿನ ಪ್ರಕಾರ, ಭಾರತವು 2021-22ರಲ್ಲಿ 7 ಮಿಲಿಯನ್ ಟನ್ ಗೋಧಿಯನ್ನು ರಫ್ತು ಮಾಡಿದೆ, ಇದರ ಮೌಲ್ಯ ಯುಎಸ್ಡಿ 2.05 ಶತಕೋಟಿ ಆಗಿದೆ.
ಒಟ್ಟು ಸಾಗಣೆಯಲ್ಲಿ, ಕಳೆದ ಹಣಕಾಸು ವರ್ಷದಲ್ಲಿ ಸುಮಾರು 50 ಪ್ರತಿಶತ ಗೋಧಿಯನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗಿದೆ.
ರೈತರಿಗೆ ಆದಾಯದ ಮೂಲವಾದ ಪೈನಾಪಲ್ ಹಣ್ಣು
Watermelon Farming! new trick ಕಂಟೇನರ್ಗಳಲ್ಲಿ Watermelon ಬೆಳೆಯುವುದು! ಹೇಗೆ?
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಈ ಕಾರ್ಯಪಡೆ ಬರಲಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಗೋಧಿಯ ಬೇಡಿಕೆಯಲ್ಲಿ ಏರಿಕೆ ಕಂಡುಬಂದಿದೆ.
ಆದರೆ ಗೋಧಿ ಉತ್ಪಾದನೆ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಈಗಾಗಲೇ ಭಾರತದಲ್ಲಿ ಗೋಧಿಗೆ ಅಧಿಕ ಬೇಡಿಕೆ ಇದೆ.
Share your comments