Beer ಕಳೆದ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಸಾಲ ಪಾವತಿಸದಿದ್ದರೂ ರೈತರ ಆಸ್ತಿ ಜಪ್ತಿ ಮಾಡದಂತೆ ಕಾನೂನು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Beer ಕಳೆದ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಹೌದು! ಈ ವರ್ಷ ಬಿಯರ್ (Beer) ಕುಡಿಯುವವರ ಸಂಖ್ಯೆ ಹೆಚ್ಚಾಗಿದ್ದು, ಉಳಿದೆಲ್ಲ ಮದ್ಯಕ್ಕಿಂತ ಬಿಯರ್ ಬಾಟಲಿಗಳೇ ಹೆಚ್ಚು ಖಾಲಿಯಾಗಿವೆ.
ಪಂಜಾಬ್‌ನಲ್ಲಿ ಕಳೆ ಸುಡುತ್ತಿರುವ ರೈತರು; ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳ!
ಸಾಮಾನ್ಯವಾಗಿ ಹೊಸದಾಗಿ ಕುಡಿತದ ಚಟವನ್ನು ಪ್ರಾರಂಭಿಸುವವರೆಲ್ಲ ಮೊದಲು ಕೈ ಹಾಕುವುದೇ ಬಿಯರ್ ಬಾಟಲಿಗೆ
ಹೀಗಾಗಿ, ಸದ್ಯ ಬಂದಿರುವ ಅಂಕಿ- ಅಂಶವೂ ಯುವಕರು ಹೆಚ್ಚು ಕುಡಿಯುವುದರ ಕಡೆವಾಲುತ್ತಿದ್ದಾರೆಯೇ ಎನ್ನುವ ಅನುಮಾನಕ್ಕೂ ಕಾರಣವಾಗಿದೆ.
ಕಳೆದ ಏಳು ತಿಂಗಳ ಅವಧಿಯಲ್ಲಿ ಹೆಚ್ಚು ಮದ್ಯದ ನಶೆಯಲ್ಲಿ ತೇಲಿದವರಲ್ಲಿ ಬಿಯರ್ ಪ್ರಿಯರೇ ಮೊದಲ ಸಾಲಿನಲ್ಲಿದ್ದಾರೆ.
ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ₹16,948 ಕೋಟಿ ವರಮಾನ ಸಂಗ್ರಹವಾಗಿದೆ.
ಗುಜರಾತ್ ಚುನಾವಣೆಗೆ ದಿನಾಂಕ ಫಿಕ್ಸ್: ತ್ರಿಕೋನ ಸ್ಪರ್ಧೆ, ಜಿದ್ದಾಜಿದ್ದಿ!
ಈ ರೀತಿ ಸಂಗ್ರಹವಾದ ಮೊತ್ತದಲ್ಲಿ ಬಿಯರ್ ಪ್ರಿಯರ ಕೊಡುಗೆಯೇ ಹೆಚ್ಚು. ಮದ್ಯ (ಐಎಂಎಲ್) ಮತ್ತು ಬಿಯರ್ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.
ಇದರಲ್ಲಿ ಬಿಯರ್ ಸೇವನೆ ಗಣನೀಯವಾಗಿ ಅಂದರೆ ಶೇ 59.66ರಷ್ಟು ಹೆಚ್ಚಾಗಿದೆ.
ಹಲವು ಅಚ್ಚರಿಗಳಿಗೆ ಸಾಕ್ಷಿಯಾದ GKVK ಕೃಷಿ ಮೇಳ: ವಿಶೇಷತೆಗಳೇನು ಗೊತ್ತೆ?
ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದ ವರೆಗೆ ಅಂದರೆ, ಕಳೆದ ಏಳು ತಿಂಗಳ ಅವಧಿಯಲ್ಲಿ ಕಳೆದ ಸಾಲಿಗಿಂತ 80.07 ಲಕ್ಷ ಬಾಕ್ಸ್ ಬಿಯರ್ ಬಾಟಲಿಗಳು ಹೆಚ್ಚುವರಿಯಾಗಿ ಮಾರಾಟವಾಗಿವೆ.
ಒಟ್ಟಾರೆ 214.28 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ ಎನ್ನುತ್ತವೆ ಅಂಕಿ ಅಂಶಗಳು.
Delhi Air Pollution: ಪಂಜಾಬ್ ಕಳೆ ಸುಡುವಿಕೆ ದೆಹಲಿ ವಾಯು ಮಾಲಿನ್ಯ ತೀವ್ರ ಏರಿಕೆ! ಶಾಲೆ ಬಂದ್, ಮನೆಯಿಂದ ಕೆಲಸ ಮಾಡಲು ಸೂಚನೆ..
ಪ್ರಸಕ್ತ ವರ್ಷ ಅಬಕಾರಿ ಇಲಾಖೆಯು 29 ಸಾವಿರ ಕೋಟಿ ರೂಪಾಯಿಯನ್ನು ಮದ್ಯ ಮಾರಾಟದಿಂದ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು.
ಸದ್ಯ 16,948 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಕಳೆದ ವರ್ಷದ ಏಳು ತಿಂಗಳ ಅವಧಿಯ ವರಮಾನಕ್ಕೆ ಹೋಲಿಸಿದರೆ 2,333 ಕೋಟಿ ರೂಪಾಯಿ ಹೆಚ್ಚುವರಿ ವರಮಾನ ಸಂಗ್ರಹವಾಗಿದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ತಳಿಯ ಕಬ್ಬು ಯಶಸ್ವಿ ಪ್ರಯೋಗ: ಕಡಿಮೆ ವೆಚ್ಚದಲ್ಲಿ 1 ಎಕರೆಗೆ 55 ಟನ್ ಇಳುವರಿ!
ಇನ್ನು ವಿಸ್ಕಿ, ಬ್ರಾಂದಿ ಹಾಗೂ ರಮ್ ಸೇವನೆಯಲ್ಲೂ ಶೇ 7.64 ರಷ್ಟು ಹೆಚ್ಚಾಗಿದೆ.
ಒಟ್ಟಾರೆ 397.43 ಲಕ್ಷ ಬಾಕ್ಸ್ ಮದ್ಯ(ಐಎಂಎಲ್) ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 28.22 ಲಕ್ಷ ಬಾಕ್ಸ್ ಹೆಚ್ಚುವರಿ ಮದ್ಯ ಮಾರಾಟವಾಗಿದೆ!
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ: 8 ಲಕ್ಷ ವಿದ್ಯಾರ್ಥಿಗಳು ದಾಖಲು!
ಆತಂಕದ ಬೆಳವಣಿಗೆ?
ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚು ಆದಾಯವೇನೋ ಸಂಗ್ರಹವಾಗಿದೆ. ಆದರೆ, ಇದರಲ್ಲಿ ಬಿಯರ್ ಪ್ರಮಾಣವೇ ಹೆಚ್ಚಾಗಿರುವುದು ಕೆಲವು ಅನುಮಾನಗಳಿಗೂ ಎಡೆ ಮಾಡಿ ಕೊಟ್ಟಿದೆ.
ಯುವಕರು ಅಥವಾ ಹೊಸದಾಗಿ ಯಾರಾದರೂ ಮದ್ಯ ಸೇವನೆಗೆ ಸೇರ್ಪಡೆ ಆಗಿದ್ದಾರೆಯೇ ಎನ್ನುವ ಅನುಮಾನವೂ ಪ್ರಾರಂಭವಾಗಿದೆ.
ಸಾಮಾನ್ಯವಾಗಿ ಅಬಕಾರಿ ಇಲಾಖೆಯ ಬಳಿ ಎಷ್ಟು ಪ್ರಮಾಣದಲ್ಲಿ ಯಾವ ಮದ್ಯ ಮಾರಾಟವಾಗಿದೆ ಎನ್ನುವುದರ ಬಗ್ಗೆ ಮಾತ್ರ ಮಾಹಿತಿ ಇರುತ್ತದೆ.
ಯಾರು ಖರೀದಿಸಿದರು ಎನ್ನುವ ಮಾಹಿತಿ ಇರುವುದಿಲ್ಲ.
ಕನಿಷ್ಠ ವಯೋಮಾನದವರಿಗಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಬಾರದು ಎನ್ನುವ ನಿಯಮವಿದೆಯಾದರೂ, ಕೆಲವು ನಿರ್ದಿಷ್ಟ ಕಡೆಗಳಲ್ಲಿ ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿಲ್ಲ.
ಇದೇ ಸಂದರ್ಭದಲ್ಲಿ ಕೆಲವರು ಬೇರೆ ಮದ್ಯ ಸೇವನೆ ಮಾಡುವುದನ್ನು ಬಿಟ್ಟು ಬಿಯರ್ ಮೊರೆ ಹೋಗಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
Share your comments