1. ಸುದ್ದಿಗಳು

Shocking news: ಮತ್ತೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳ!

Kalmesh T
Kalmesh T
Increase in cylinder price again! 50 increased by Rs

ಜನ ಸಾಮಾನ್ಯರಿಗೆ ದಿನದಿಂದ ದಿನಕ್ಕೆ ಸರ್ಕಾರಗಳು ಶಾಕ್‌ ಮೇಲೆ ಶಾಕ್‌ ನೀಡುತ್ತಲೆ ಇವೆ. ಈಗ ಮತ್ತೊಂದು ಶಾಕ್‌ ಜನ ಸಾಮಾನ್ಯರಿಗೆ ಎದುರಾಗಿದೆ. ಹೌದು! ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಮತ್ತೆ 50 ರೂ ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿರಿ:

ಎಚ್ಚರಿಕೆ! “ವಾಹನ ಚಾಲಕರಿಗೆ ಎಚ್ಚರಿಕೆ” ಡ್ರೈವಿಂಗ್ ವೇಳೆ ಗುಟ್ಕಾ ಜಗಿದರೆ ಬೀಳತ್ತೆ ದಂಡ!

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

ಜನ ಸಾಮಾನ್ಯರಿಗೆ ಮತ್ತೆ ಬೆಲೆ ಏರಿಕೆ ಶಾಕ್ ಸಿಕ್ಕಿದೆ.  ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂಪಾಯಿ ಏರಿಕೆಯಾಗಿದೆ. ಬೆಲೆಯು  ಇಂದಿನಿಂದಲೇ ದೇಶಾದ್ಯಂತ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಮಾರ್ಚ್ 22 ರಂದು ಅಡುಗೆ ಅನಿಲದ ಬೆಲೆಯನ್ನು  ಪ್ರತಿ ಸಿಲಿಂಡರ್‌ಗೆ 50 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂ.ಗಳ ಹೆಚ್ಚಳ ಮಾಡಲಾಗಿದ್ದು, ಜನ ಸಾಮಾನ್ಯರು ಒದ್ದಾಡುವಂತೆ ಮಾಡುತ್ತಿದೆ.

ಈ ಬೆಲೆ ಇಂದಿನಿಂದಲೇ ಜಾರಿಗೆ ಬಂದಿದ್ದು,  ಸಿಲಿಂಡರ್ ಖರೀದಿ ವೇಳೆ 50 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. 

ಪೈಲ್ವಾನ್ ಕಿಚ್ಚ ಸುದೀಪ್ ಕೊಟ್ಟ ಗುನ್ನಾಕೆ ಮಕಾಡೆ ಮಲಗಿದ ಅಜಯ್ ದೇವಗನ್!

ಗುಡ್‌ ನ್ಯೂಸ್‌: ಸಾವಯವ ಕೃಷಿಕರಿಗೆ ಇಲ್ಲಿದೆ ಬರೋಬ್ಬರಿ ರೂ.50,000 ಸಬ್ಸಿಡಿ!

ಪೆಟ್ರೋಲಿಯಂ ಉದ್ಯಮದ ಪ್ರಾಥಮಿಕ ಮಾಹಿತಿಯ ಪ್ರಕಾರ, ಏಪ್ರಿಲ್‌ನಲ್ಲಿ LPG ಬಳಕೆಯು ಮಾಸಿಕ ಆಧಾರದ ಮೇಲೆ 9.1 ಶೇಕಡಾದಿಂದ 2.2 ಮಿಲಿಯನ್ ಟನ್‌ಗಳಿಗೆ ಇಳಿದಿದೆ. ಇದು ಏಪ್ರಿಲ್ 2021 ಕ್ಕೆ ಹೋಲಿಸಿದರೆ 5.1 ಶೇಕಡಾ  ಹೆಚ್ಚಳವಾಗಿದೆ. ಮಾರ್ಚ್‌ಗೂ ಮೊದಲು ಕಳೆದ ವರ್ಷ ಅಕ್ಟೋಬರ್ 6 ರಂದು  ಅಡುಗೆ ಅನಿಲದ ಬೆಲೆಯನ್ನು ಬದಲಾಯಿಸಲಾಯಿತು.

ಇತ್ತೀಚೆಗೆ ಸರ್ಕಾರಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.  

ವಾಣಿಜ್ಯ LPG ಸಿಲಿಂಡರ್ ಬೆಲೆ 102.50 ರೂ. ಹೆಚ್ಚಳ ಮಾಡಲಾಗಿತ್ತು. ಹೊಸ ಬೆಲೆ ಜಾರಿಯಾದ ನಂತರ  19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಮೇ 1 ರಿಂದ 2253 ರಿಂದ 2355.50 ಕ್ಕೆ ಏರಿಕೆಯಾಗಿದೆ.

ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!

ರೈತರಿಗೆ ರೂ.1,25,000 ಭರ್ಜರಿ ಸಹಾಯಧನ: ವಿವಿಧ ಕೃಷಿ ಚಟುವಟಿಕೆಗೆ ಈ ಸಬ್ಸಿಡಿ!

ಮೇ 1 ರಂದು, ಜೆಟ್ ಇಂಧನವೂ ದುಬಾರಿಯಾಗಿದೆ. ದೆಹಲಿಯಲ್ಲಿ ಏರ್ ಟರ್ಬೈನ್ ಇಂಧನ ಬೆಲೆಯನ್ನು ಪ್ರತಿ ಕಿಲೋ ಲೀಟರ್‌ಗೆ 116851.46 ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ ಎಟಿಎಫ್ ಬೆಲೆಯನ್ನು ಏಪ್ರಿಲ್ 16 ರಂದು ಹೆಚ್ಚಿಸಲಾಗಿತ್ತು. ಒಟ್ಟಾರೆಯಾಗಿ ಜನ ಸಾಮಾನ್ಯರು ಬದುಕು ಬಲು ತುಟ್ಟಿಯಾಗುತ್ತಿದೆ.

#ಮಹತ್ವದ ಸೂಚನೆ; MAY ತಿಂಗಳಲ್ಲಿ 13 ದಿನ ಬಂದ್ ಇರಲಿವೆ ಬ್ಯಾಂಕ್!

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

Published On: 07 May 2022, 10:52 AM English Summary: Increase in cylinder price again! 50 increased by Rs

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.