ಕೊರೋನಾ ಲಾಕ್ಡೌ ನ್ ನಿಂದಾಗಿ ಕೃಷಿವಲಯ ಬಿಟ್ಟು ಎಲ್ಲಾ ವಲಯಗಳಿಗೆ ಆರ್ಥಿಕ ಹೊಡೆತ ಬಿದ್ದಿರುವುದು ನಿಜ. ಬೇರೆ ವಲಯಗಳಿಗೆ ಹೋಲಿಸಿದರೆ ಕೃಷಿ ವಲಯಕ್ಕೆ ಅಷ್ಟೋಂದು ಪರಿಣಾಮ ಬಿದ್ದಿಲ್ಲ ಎಂಬೂದು ಸತ್ಯ. ಈವರ್ಷ ಮುಂಗಾರು ಉತ್ತಮವಾಗಿದ್ದರಿಂದ ಉತ್ಪಾದನೆಯ ಮಟ್ಟ ಹೆಚ್ಚಾಗುವ ಅಂದಾಜನ್ನು ತಳ್ಳಿಹಾಕುವಂತಿಲ್ಲ. ಆದರೆ ಉತ್ಪಾದನೆಗೆ ತಕ್ಕಂತೆ ರೈತರ ಬೆಳೆಗಳಿಗೆ ಬೆಲೆ ಸಿಗುವ ಸಾಧ್ಯತೆ ಮಾತ್ರ ಕಡಿಮೆ ಎನ್ನಲಾಗುತ್ತಿದೆ. ಸರ್ಕಾರಗಳು ಮುಂದಾಗಿ ಕೃಷಿ ವಲಯಕ್ಕೆ ಹೆಚ್ಚು ಒತ್ತುಕೊಟ್ಟು ಸೂಕ್ತ ಬೆಲೆ ನೀಡಿದರೆ ಈ ವರ್ಷ ರೈತರ ಆದಾಯ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ.
ನಗರ ಪ್ರದೇಶಗಳಿಗೆ ಗುಳೆ ಹೋದವರು ಗ್ರಾಮಾಂತರ ಪ್ರದೇಶಗಳಿಗೆ ಲಕ್ಷಾಂತರ ಜನರು ಮರಳಿ ವ್ಯವಸಾಯದಲ್ಲಿ ತೊಡಗಿರುವುದು ಖುಷಿಯ ಸುದ್ದಿ. ಹಗಲು ರಾತ್ರಿ ಎನ್ನತೆ ದುಡಿದು ಉತ್ಪಾದನೆ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಆರಂಭದಲ್ಲಿಯೇ ರಾಶಿ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಹೆಸರು ಉದ್ದು ಬೆಳೆಗಳ ಕಟಾವು ಸಂದರ್ಭದಲ್ಲಿ ನಿರಂತರವಾಗಿ ಮಳೆ ಬಂದು ಹೊಲದಲ್ಲಿಯೇ ಕಾಳುಗಳು ಮೊಳಕೆ ಹೊಡೆದು ಹೆಚ್ಚು ಇಳುವರಿ ಹಾಗೂ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಯಿತು.
ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಹ ಬಂದು ನದಿತೀರದ ಬೆಳೆಗಳು ಕೊಚ್ಚಿಕೊಂಡು ಹೋದವು. ಇದ್ದ ಈರುಳ್ಳಿ ಬೆಳೆ ಹೊಲದಲ್ಲಿಯೇ ಕೊಳೆತು ಹಾನಿಯಾಯಿತು. ನಿರಂತರ ಮಳೆಗೆ ರೋಗಗಳು, ಕೀಟಗಳ ಹಾವಳಿ ಹೆಚ್ಚಾಗಿ ಬೆಳೆ ಇಳುವರಿಗೆ ಹೊಡೆತಬಿತ್ತು. ಆದರೂ ರೈತ ಎದೆಗುಂದದೆ ತನ್ನ ಆದಾಯಮಟ್ಟ ಹೆಚ್ಚಿಸಿಕೊಳ್ಳಲು ಕೃಷಿ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾನೆ. ಈ ವರ್ಷವಾದರೂ ಹೆಚ್ಚಿನ ಬೆಲೆ ಸಿಗುತ್ತದೆ ಎಂಬ ಆಶಾಭಾವನೆ ಹೊಂದಿದ್ದಾನೆ.
ಮಳೆಯ ಕಣ್ಣಾಮುಚ್ಚಾಲೆಯ ಆಟದ ನಡುವೆಯೂ ಈ ವರ್ಷ ಉತ್ಪಾದನೆಯ ಮಟ್ಟ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಕೃಷಿಕರು ಬೆಳೆದ ಬೆಳೆಗೆ ಕಡಿಮೆ ಬೆಲೆ ಸಿಗುವ ಸಾಧ್ಯತೆಯೂ ಇದೆ. ಇದರಿಂದಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಆದಾಯದ ಮೇಲೆ ಪರಿಣಾಮ ಉಂಟಾಗಬಹುದು ಎಂದು ಉಲ್ಲೇಖಿಸಲಾಗಿದೆ.
ಕೋವಿಡ್–19 ಕಾಯಿಲೆಯ ನಕಾರಾತ್ಮಕ ಪರಿಣಾಮಗಳಿಂದ ಹೊರಬರಲು ಕೈಗಾರಿಕೆ ಮತ್ತು ಸೇವಾ ವಲಯಗಳು ಇನ್ನೂ ಹೆಣಗಾಡುತ್ತಿವೆ. ಈ ಸಂದರ್ಭದಲ್ಲಿ, ಕೃಷಿ ವಲಯವು ಆರ್ಥಿಕ ಚೇತರಿಕೆಗೆ ಇಂಬು ಕೊಡಬಹುದು. ಸರ್ಕಾರಗಳು ಮುಂದಾಗಿ ಕೃಷಿ ವಲಯಕ್ಕೆ ಹೆಚ್ಚು ಒತ್ತುಕೊಟ್ಟು ಸೂಕ್ತ ಬೆಲೆ ನೀಡಿದರೆ ರೈತರ ಆದಾಯ ಹೆಚ್ಚಾಗುತ್ತದೆ. ಸರ್ಕಾರಗಳು ಬೆಂಬಲ ಬೆಲೆ ಘೋಷಿಸುತ್ತವೆ ಆದರೆ ಸರಿಯಾದ ಸಮಯಕ್ಕೆ ರೈತರಿಗೆ ಬೆಲೆಸಿಗುವದಿಲ್ಲ. ಸರ್ಕಾರದ ಖರೀದಿ ಕೇಂದ್ರಗಳನ್ನು ಆರಂಭಿಸುವಲ್ಲಿ ವಿಳಂಬ ಮಾಡುವುದರಿಂದ ಬಹುತೇಕ ರೈತರು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ವರ್ಷವಾದರೂ ಎಲ್ಲಾ ಬೆಳೆಗಳ ಖರೀದಿ ಕೇಂದ್ರಗಳನ್ನು ಬೇಗ ಆರಂಭಿಸಿ ಖರೀದಿ ಮಾಡಬೇಕೆಂಬುದು ರೈತರ ಒತ್ತಾಯವಾಗಿದೆ. ಕೃಷಿ ಈ ವಲಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ 2020–21ರಲ್ಲಿ ಶೇಕಡ 3.5ರಷ್ಟು ಬೆಳವಣಿಗೆ ಸಾಧಿಸಬಹುದು. ಆದರೆ ರೈತರಿಗೆ ಸೂಕ್ತ ಬೆಲೆ ನೀಡಿದರೆ ಅವರ ಆರ್ಥಿಕ ಬೆಳವಣಿಗೆಯೂ ಸುಧಾರಿಸುತ್ತದೆ ಎನ್ನಲಾಗುತ್ತಿದೆ.
Share your comments