1. ಸುದ್ದಿಗಳು

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನ!

2019-20ನೇ ಸಾಲಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನೀಡಲಾಗಿದ್ದ ಗಡುವನ್ನು ಡಿಸೆಂಬರ್ 31ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿದೆ.

2019-20 ನೇ ಸಾಲಿನ ವೈಯಕ್ತಿಕ ತೆರಿಗೆ ಪಾವತಿಗೆ ಡಿಸೆಂಬರ್ ಅಂತ್ಯದ ವರೆಗೆ ಅವಕಾಶ ಮಾಡಿಕೊಟ್ಟಿರುವುದು ಅನೇಕ ತೆರಿಗೆ ಪಾವತಿದಾರರಿಗೆ‌ ಅನುಕೂಲ ವಾಗಲಿದೆ.

2019-20ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕಡೇ ದಿನವನ್ನು ಜುಲೈ 31ರಿಂದ ನವೆಂಬರ್ 30ರವರೆಗೂ ವಿಸ್ತರಿಸಿ ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪ್ರಕಟಿಸಿತ್ತು. 

ಕೋವಿಡ್- 19 ಸಾಂಕ್ರಾಮಿಕ ರೋಗದಿಂದಾಗಿ ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು  ಗಮನದಲ್ಲಿಟ್ಟುಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಉನ್ನತ ನೀತಿ ನಿರೂಪಣಾ ಸಂಸ್ಥೆಯಾದ ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಡಿಟ್ ವರದಿ,ಅಂತರಾಷ್ಟ್ರೀಯ ಅಥಾವಾ ದೇಶಿಯ ವರ್ಗಾವಣೆ ಸೇರಿದಂತೆ ಇನ್ನಿತರೆ ವಿಷಯ ಗಳ ಕುರಿತು ಡಿಸೆಂಬರ್ 31 ರ ಒಳಗೆ ಆಡಿಟ್ ವರದಿ ಸಲ್ಲಿಸುವಂತೆ ಕೇಂದ್ರ ನೇರ ತೆರಿಗೆ ಮಂಡಳಿ ಸೂಚಿಸಿದೆ,  

ವಾರ್ಷಿಕ ರಿಟರ್ನ್ ಸಲ್ಲಿಕೆ ಜಿಎಸ್ ಡಿಆರ್ -9/ ಜಿಎಸ್ ಟಿಆರ್ -9ಎ‌ ಸಲ್ಲಿಕೆಗೆ ಇದ್ದ ಗಡುವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಿ‌‌ ಆದೇಶ ನೀಡಲಾಗಿದೆ.

Published On: 24 October 2020, 07:07 PM English Summary: income tax return filing deadline extended till dec 31

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.