ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ 2019-20ನೇ ಸಾಲಿನಲ್ಲಿ ಪ್ರಥಮ ಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಪ್ರೋತ್ಸಾಹಧನ ಸೌಲಭ್ಯಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ದ್ವಿತೀಯ ಪಿಯುಸಿ, ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ, ಕೃಷಿ, ಪಶುಸಂಗೋಪನೆ, ಇಂಜನೀಯರಿಂಗ್, ಮೆಡಿಕಲ್ ಕೋರ್ಸುಗಳಲ್ಲಿ ಪ್ರತಿ ವರ್ಷವು ಮತ್ತು ಅಂತಿಮವಾಗಿ ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಹಾಗೂ ಸೆಮಿಸ್ಟರ್ ಪದ್ಧತಿ ಇದ್ದಲ್ಲಿ ಎಲ್ಲ ಸೆಮಿಸ್ಟರ್ಗಳಲ್ಲಿ ಮತ್ತು ಪ್ರಥಮ ಯತ್ನದಲ್ಲಿ ಮತ್ತು ಅಂತಿಮವಾಗಿ ಪ್ರಥಮ ದರ್ಜೆಯಲ್ಲಿ ಪಾಸಾದ ಅಂಗೀಕೃತ ಕಾಲೇಜುಗಳಲ್ಲಿ ವ್ಯಾಸಾಂಗಮಾಡಿದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ದ್ವಿತೀಯ ಪಿಯುಸಿ, ಮೂರು ವರ್ಷದ ಪಾಲಿಟೆಕ್ನಿಕ್ ಡಿಪ್ಲೊಮಾ ವಿದ್ಯಾರ್ಥಿಗಳಿಗೆ 20 ಸಾವಿರ, ಪದವಿ ಉತ್ತೀರ್ಣರಾದವರಿಗೆ 25 ಸಾವಿರ, ಎಂ.ಎ., ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಸಿ.ಎ. ವಿದ್ಯಾರ್ಥಿಗಳಿಗೆ 30 ಸಾವಿರ ಹಾಗೂ ಕೃಷಿ, ಎಂಜಿನಿಯರಿಂಗ್, ಮೆಡಿಕಲ್, ಪಶುಸಂಗೋಪನೆ, ಎಂ.ಟೆಕ್ ವಿದ್ಯಾರ್ಥಿಗಳಿಗೆ 35 ಸಾವಿರ ಪ್ರೋತ್ಸಾಹಧನ ನೀಡಲಾಗುವುದು.
ಅರ್ಹರು ಇಲಾಖಾ ವೆಬ್ಸೈಟ್ www.sw.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದು.
ಭರ್ತಿಮಾಡಿದ ಅರ್ಜಿಯನ್ನು ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರ ದೃಢೀಕರಣದೊಂದಿಗೆ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿ, ಸಂಬಂಧಿಸಿದ ಕೋರ್ಸುಗಳ ಎಲ್ಲ ದೃಢೀಕೃತ ಅಂಕಪಟ್ಟಿಗಳು, ಜಾತಿ ಮತ್ತು ಆದಾಯ ಪ್ರಮಾಣಪತ್ರ ದೃಢೀಕೃತ ಪ್ರತಿ, ಆಧಾರ್ ಕಾರ್ಡ್ ದೃಢೀಕೃತ ಪ್ರತಿ ಹಾಗೂ ಬ್ಯಾಂಕ್ ಉಳಿತಾಯ ಖಾತೆ ಪಾಸ್ಪುಸ್ತಕ ದೃಢೀಕೃತ ಪ್ರತಿಯೊಂದಿಗೆ ಉಪನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಸಲ್ಲಿಸಬೇಕು. ಪ್ರೋತ್ಸಾಹಧನ ಪಡೆಯಲು ವೆಬ್ಸೈಟ್ www.sw.kar.nic.in ಗೆ ಭೇಟಿ ನೀಡುವ ಮೂಲಕ ನವೆಂಬರ್ 30 ರೊಳಗಾಗಿ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ವಿಶ್ವವಿದ್ಯಾಲಯದ ಮಟ್ಟದಲ್ಲಿ ಸ್ನಾತಕೋತ್ತರ ಪದವಿಯಲ್ಲಿ 1 ರಿಂದ 5ನೇ ರ್ಯಾಂಕ್ ಪಡೆದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ಗಳ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇಲಾಖೆಯ ವೆಬ್ಸೈಟ್ www.sw.kar.nic.in ನಲ್ಲಿ ಅರ್ಜಿ ಅಪಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ಇಲಾಖೆಯ ವೆಬ್ ಸೈಟ್ ಗೆ ಸಂಪರ್ಕಿಸಬಹುದು.
Share your comments