1. ಸುದ್ದಿಗಳು

ಸಾಕು ನಾಯಿ ಕಚ್ಚಿದರೆ ಮಾಲೀಕರು ಕಟ್ಟಬೇಕು 10 ಸಾವಿರ ದಂಡ!

Hitesh
Hitesh
If a Pet Dog Bites, the Owner must pay a fine of 10,000!

ಸಾಕು ನಾಯಿ ಕಚ್ಚಿದರೆ ಮಾಲೀಕರು ಪಾವತಿಸಬೇಕು ದಂಡ. ಹೌದು ಈ ರೀತಿ ಒಂದು ನಿಯಮವನ್ನು ಜಾರಿ ಮಾಡಲು ನೋಯ್ಡಾ ಪ್ರಾಧಿಕಾರ ಮುಂದಾಗಿದೆ.  

BMTC: ವಿದ್ಯಾರ್ಥಿ ಪಾಸ್‌ ಇದ್ದರೆ ಟಿಕೆಟ್‌ ಕೊಡುವಂತಿಲ್ಲ!

ನೋಯ್ಡಾದ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ರೀತಿ ನಿಯಮ ಜಾರಿ ಮಾಡಲು ನಿರ್ಧರಿಸಿದೆ.  

ಇತ್ತೀಚಿನ ದಿನಗಳಲ್ಲಿ ನಾಯಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರಿಂದ ಆರೋಪ ಕೇಳಿಬಂದಿತ್ತು.

ಇದನ್ನು ತಡೆಯುವಂತೆ ಒತ್ತಾಯವೂ ಕೇಳಿಬಂದಿತ್ತು. ಹೀಗಾಗಿ, ನೋಯ್ಡಾ ಪ್ರಾಧಿಕಾರ ಈ ನಿರ್ಧಾರಕ್ಕೆ ಮುಂದಾಗಿದೆ.

ಈ ರಾಜ್ಯದ ಮಕ್ಕಳಿಗೆ ಮನೆ ಬಾಗಿಲಿಗೆ ಬಂದು ಕೊಡ್ತಾರೆ “ಆಧಾರ್‌ ಕಾರ್ಡ್‌”!

ಸಾಕು ನಾಯಿ ಅಥವಾ ಬೆಕ್ಕು ಯಾರಿಗಾದರೂ ಕಡಿದರೆ ಅದರ ಮಾಲೀಕರಿಗೆ ಬರೋಬ್ಬರಿ 10 ರೂಪಾಯಿ ದಂಡ ವಿಧಿಸಲು ನೋಯ್ಡಾ ಪ್ರಾಧಿಕಾರ ನಿರ್ಧರಿಸಿದೆ.

ಅಲ್ಲದೇ ದಾಳಿಗೆ ಒಳಗಾದವರ ಚಿಕಿತ್ಸಾ ವೆಚ್ಚವನ್ನು ಸಹ ಪ್ರಾಣಿ ಮಾಲೀಕರು ನೀಡಬೇಕು ಎಂದು ಹೇಳಲಾಗಿದೆ. 

“ಟೊಮೆಟೊ”ಗೆ ಅಂಗಮಾರಿ ರೋಗ, ತಡೆಯುವುದು ಹೇಗೆ ?

ನೋಯ್ಡಾ ಪ್ರಾಧಿಕಾರದ ಈ ಹೊಸ ನಿಯಮವು 2023ರ ಮಾರ್ಚ್ 1ರಿಂದ ಜಾರಿಗೆ ಬರಲಿದೆ.

ಪ್ರಾಣಿ ಅಭಿವೃದ್ಧಿ ಮಂಡಳಿ ನಿಯಮಗಳ ಅಡಿಯಲ್ಲಿ ನೋಯ್ಡಾ ಪ್ರಾಧಿಕಾರವು ನೀತಿಗಳನ್ನು ನಿರ್ಧರಿಸುವ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸಾಕು ನಾಯಿ ಸಾರ್ವಜನಿಕ ಸ್ಥಳದಲ್ಲಿ ಗಲೀಜು ಮಾಡಿದರೆ ಅದನ್ನು ಸ್ವಚ್ಛಗೊಳಿಸುವ ಜವಾಬ್ದಾರಿಯನ್ನೂ ಅದರ ಮಾಲೀಕರದ್ದೇ ಆಗಿರುತ್ತದೆ ಎಂದು ನೋಯ್ಡಾ ಪ್ರಾಧಿಕಾರ ಹೇಳಿದೆ. 

ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!

Dog

ನೋಂದಣಿ ಕಡ್ಡಾಯ

ಈ ರೀತಿ ಸಾಕು ನಾಯಿಗಳಿಗೆ ನಿಯಮವನ್ನು ರೂಪಿಸಿರುವುದು ಮೊದಲೇನೂ ಅಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೂ ಈ ರೀತಿ ನಿಯಮವನ್ನು ಈ ಹಿಂದೆ ಜಾರಿ ಮಾಡಿತ್ತು.

ಆದರೆ, ಪಾಲಿಕೆಯು ಈ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿಲ್ಲ. ಬೆಂಗಳೂರು ಮಹಾನಗರ ಪಾಲಿಕೆಯೂ ಬೆಂಗಳೂರು ವ್ಯಾಪ್ತಿಯಲ್ಲಿನ ನಾಯಿಗಳಿಗೆ ಚಿಪ್‌ ಅಳವಡಿಸಬೇಕು ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎನ್ನುವ ಹಲವು ನಿಯಮಗಳ ಬೈಲಾ ರೂಪಿಸಿತ್ತು.

ಇನ್ನು ನೋಯ್ಡಾ ಪ್ರಾಧಿಕಾರವು ಸಾಕುಪ್ರಾಣಿ ನೋಂದಣಿ ಆಪ್ ಮೂಲಕ 2023ರ ಮಾರ್ಚ್ ವೇಳೆಗೆ ಜನ  ಅವರು ಸಾಕಿರುವ ನಾಯಿ ಮತ್ತು ಬೆಕ್ಕುಗಳ ವಿವರಗಳನ್ನು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದೆ.  

dog

ಈ ಸಂಬಂಧ ನೋಯ್ಡಾ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ಸಾಕುಪ್ರಾಣಿ ನೋಂದಣಿ ಮಾಡಿಸಿಕೊಳ್ಳದೆ ಇದ್ದವರೂ ದಂಡ ಪಾವತಿ ಮಾಡಬೇಕಾಗುತ್ತದೆ.  

ಅಲ್ಲದೇ ಸಾಕು ನಾಯಿಗಳಿಗೆ ಸಂತಾನಶಕ್ತಿಹರಣ ಮತ್ತು ರೇಬೀಸ್ ನಿಯಂತ್ರಣ ಲಸಿಕೆ ಕೊಡಿಸುವುದು ಕಡ್ಡಾಯ.

ಇದನ್ನು ಉಲ್ಲಂಘಿಸಿದರೆ ಪ್ರತಿ ತಿಂಗಳಿಗೆ 2 ಸಾವಿರ ರೂಪಾಯಿ ದಂಡ ವಿಧಸಲಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

MCD ಚುನಾವಣೆ: ಟಿಕೆಟ್ ಕೊಡಲಿಲ್ಲ ಎಂದು ವಿದ್ಯುತ್‌ ಕಂಬ ಏರಿದ ಪಾಲಿಕೆಯ ಮಾಜಿ ಸದಸ್ಯ!

ಲಸಿಕೆ ತೆಗೆದುಕೊಳ್ಳದಿದ್ದರೂ ದಂಡ!

ನೋಯ್ಡಾ ಪ್ರಾಧಿಕಾರವು ಎಲ್ಲಾ ಸಾಕು ನಾಯಿಗಳಿಗೆ ಕ್ರಿಮಿನಾಶಕ ಮತ್ತು ಆಂಟಿ ರೇಬಿಸ್ ಲಸಿಕೆ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.  

ಈ ನಿಯಮವನ್ನು ಉಲ್ಲಂಘಿಸುವವರಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿಯಂತೆ ದಂಡ ತೆರಬೇಕಾಗುತ್ತದೆ.

ಅನಾರೋಗ್ಯ ಅಥವಾ ಆಕ್ರಮಣಕಾರಿ ಬೀದಿ ನಾಯಿಗಳಿಗಾಗಿ ಶ್ವಾನ ಶೆಲ್ಟರ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

Published On: 14 November 2022, 02:56 PM English Summary: If a Pet Dog Bites, the Owner must pay a fine of 10,000!

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.