ರೈತರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸದಂತೆ ಸಚಿವ ಆರ್. ಅಶೋಕ್ (R. Ashok) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೆ, ಯಾವ ವಿಷಯಕ್ಕೆ ಹೀಗೆ ಹೇಳಿದರು, ಇಲ್ಲಿದೆ ವಿವರ…
ಸರ್ಕಾರಿ ನೌಕರರಿಗೆ ಸಿಹಿಸುದ್ದಿ: 7ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಆರು ತಿಂಗಳಲ್ಲಿ ಶಿಫಾರಸ್ಸು ಸಾಧ್ಯತೆ!
ರೈತರ ಮೇಲೆ ಕ್ರಿಮಿನಲ್ (Criminal) ಪ್ರಕರಣಗಳನ್ನು ದಾಖಲಿಸದಂತೆ (Revenue Minister R. Ashok) ಕಂದಾಯ ಸಚಿವ ಆರ್. ಅಶೋಕ್ ನಿರ್ದೇಶನ ನೀಡಿದ್ದಾರೆ.
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೂ ಒತ್ತುವರಿ ಕಾಯ್ದೆ, ಭೂ ಪರಿವರ್ತನಾ ಕಾಯ್ದೆಯ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ರಾಸುಗಳಲ್ಲಿ ಕೆಚ್ಚಲು ಬಾವು ಕಾಯಿಲೆ: ಪರೀಕ್ಷೆಗೆ ನಾಲ್ಕು ಹನಿ ಹಾಲು ಸಾಕು!
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಆಯೋಜಿಸಿದ್ದ ಹಳ್ಳಿ ಕಡೆ ಜಿಲ್ಲಾಧಿಕಾರಿ ನಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕೆಲವು ಕಡೆ ಒತ್ತುವರಿ ಆಗಿರುವ ಸಾಧ್ಯತೆ ಇದೆ.
ಹೀಗಾಗಿ, ನಗರ ಪ್ರದೇಶ ಹೊರತುಪಡಿಸಿ ಉಳಿದ ಕಡೆ, ರೈತರ ಮೇಲೆ ಯಾವುದೇ ಭೂ ಒತ್ತುವರಿ ಪ್ರಕರಣ ದಾಖಲಿಸದಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ!
ರೈತರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದರಿಂದ ಅವರು, ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ. ಹೀಗಾಗಿ, ಈ ರೀತಿ ಆಗದಂತೆ ಎಚ್ಚರಿಕೆ ನೀಡಲಾಗಿದೆ.
ಕೋಳಿ ಫಾರಂ (Poultry farm) ನಡೆಸಲು ಈ ಹಿಂದೆ ಭೂ ಪರಿವರ್ತನೆ ಮಾಡಿಕೊಳ್ಳಬೇಕಿತ್ತು. ಆದರೆ, ಈಗ ಭೂ ಪರಿವರ್ತನೆ ಬೇಡ.
ಕೋಳಿ ಸಾಕಾಣಿಕೆಯನ್ನೂ ಈಗ ಕೃಷಿ ಎಂದೇ ಪರಿಗಣಿಸಲಾಗಿದೆ ಎಂದರು.
ಜಮೀನಿನ ಖಾತೆ ಮಾಡಿಸಿಕೊಳ್ಳಲು ನೋಂದಣಿಯಾದ ಏಳು ದಿನದೊಳಗೆ ಖಾತೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ದೇಶಿಸಲಾಗಿದೆ.
ಈ ಹಿಂದೆ ಇದಕ್ಕಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಾಯಬೇಕಿತ್ತು ಎಂದು ಅವರು ಹೇಳಿದರು.
ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮನೆ ಕಟ್ಟಲು ಮತ್ತು ಸರ್ಕಾರದಿಂದ ನೀಡಿದ ಜಮೀನು ಮಾರಲು ಈ ಹಿಂದೆ ಸರ್ಕಾರದಿಂದ ಅನುಮತಿ ಪಡೆದುಕೊಳ್ಳಲು ಅನುಮತಿ ಪಡೆಯಬೇಕಿತ್ತು.
ಇದೀಗ ಆ ನಿಯಮ ತೆಗೆದು ಹಾಕಲಾಗಿದೆ. ಮಾರಾಟ ಮಾಡಲು ಅವಕಾಶ ನೀಡದೆ, ಜಮೀನು ಭೂ ಪರಿವರ್ತನೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ.
ಹೀಗಾಗಿ, ಇನ್ನು ಮುಂದೆ ಜಮೀನನ್ನು ಭೂ ಪರಿವರ್ತಿಸಿಕೊಂಡು ಮನೆ ನಿರ್ಮಿಸಿಕೊಳ್ಳಬಹುದು ಎಂದು ಹೇಳಿದರು.
ಅಲ್ಲದೇ ಸಾರ್ವಜನಿಕರಿಗೆ ಮಾಸಾಶನ ಬೇಕಿದ್ದರೆ 7 ದಿನದಲ್ಲಿಯೇ ಸಿಗುತ್ತದೆ. ಅದಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಇಲ್ಲ.
ಇದೇ ಕಾರಣಕ್ಕಾಗಿ ‘ಹಲೋ ಕಂದಾಯ ಸಚಿವರೆ’ (Hello Revenue Minister) ಎಂಬ ವಿನೂತನ ಯೋಜನೆಯನ್ನು ಪರಿಚಯಿಸಲಾಗಿದೆ.
ಸಾರ್ವಜನಿಕರು ಕರೆ ಮಾಡಿದರೆ, ಮೂರು ದಿನಗಳಲ್ಲಿ ಅಂದರೆ (72) ಗಂಟೆಯಲ್ಲಿ ಹಿರಿಯ ನಾಗರಿಕರ ಮಾಸಾಶನ ಸಿಗಲಿದೆ ಎಂದು ತಿಳಿಸಿದರು.
Share your comments