ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದಕ್ಕೆ ಇಂದೇ ಕೊನೆಯ ದಿನವಾಗಿದೆ.
ಇಂದು ಅಂದರೆ ಜೂನ್ 30ರ ಒಳಗಾಗಿ ನೀವು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಮಾಡದೆ ಇದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗಲಿದೆ.
ಅಲ್ಲದೇ ಜುಲೈ 1ರಿಂದ ನೀವು ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಮಾಡಬೇಕಾದರೆ, ಬರೋಬ್ಬರಿ 10,000 ಸಾವಿರ ರೂಪಾಯಿ ದಂಡ ಪಾವತಿ ಮಾಡಬೇಕಾಗುತ್ತದೆ.
ಭಾರೀ ಮೊತ್ತದ ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ, ನೀವು ಇಂದೇ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಮಾಡಬೇಕು. ಇನ್ನು
ಪ್ಯಾನ್ನೊಂದಿಗೆ ಆಧಾರ್ ಜೋಡಣೆ ಮಾಡುವುದು ಅತ್ಯಂತ ಸುಲಭ. ಈಗಾಗಲೇ ನಿಮ್ಮ ಪ್ಯಾನ್ ಕಾರ್ಡ್ನೊಂದಿಗೆ ಆಧಾರ್ ಜೋಡಣೆ ಆಗಿರುವ ಸಾಧ್ಯತೆಯೂ ಇದೆ.
ಕೆಲವೊಮ್ಮೆ ಈಗಾಗಲೇ ಆಧಾರ್ ಕಾರ್ಡ್ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಆಗಿರುವ ಸಾಧ್ಯತೆಯೂ ಇದೆ. ಜೋಡಣೆ ಆಗಿದೆಯೇ ಇಲ್ಲವೇ ಎನ್ನುವುದನ್ನೂ
ನೀವು ಸರಳವಾಗಿ ಪರಿಶೀಲನೆ ಮಾಡಬಹುದಾಗಿದೆ.
ಪ್ಯಾನ್ನೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಅಥವಾ ಇನ್ನೂ ಆಗಿಲ್ಲವೇ ಎನ್ನುವುದನ್ನು ನೀವು ಸರಳವಾಗಿ ಪರಿಶೀಲನೆ ಮಾಡಬಹುದಾಗಿದೆ.
PAN-Aadhaar linkage ಆಧಾರ್- ಪ್ಯಾನ್ ಕಾರ್ಡ್ ಜೋಡಣೆಗೆ ಇಂದೇ ಕೊನೆ; ನಾಳೆಯಿಂದ ಬರೋಬ್ಬರಿ 10,000 ಸಾವಿರ ದಂಡ!
UIDAIಯ ಅಧಿಕೃತ ವೆಬ್ಸೈಟ್ https://uidai.gov.in ಗೆ ಹೋಗಿ
ಆಧಾರ್ ಸೇವೆಗಳ ಪಟ್ಟಿಯಿಂದ ಆಧಾರ್ ಲಿಂಕ್ ಮಾಡುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಎರಡನೇಯದಾಗಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಅಲ್ಲಿ ಹಾಕಿ ಮತ್ತು ಗೆಟ್ ಸ್ಟೇಟಸ್ ಬಟನ್ನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇದಾದ ನಂತರ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ (ಪರಿಶೀಲನಾ ಅಂಕಿ- ಅಂಶ)ವನ್ನು ನಮೂದಿಸಬೇಕು.
ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡುವ ಅಂಶವನ್ನು ಪರಿಶೀಲಿಸಲು, ಗೇಟ್ ಲಿಂಕ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಪರದೆಯ ಮೇಲೆ ಕಾಣಿಸಲಿದೆ.
ಇದೆಲ್ಲವನ್ನೂ ನೀವು ಸುಲಭವಾಗಿ ನಿಮ್ಮ ಮೊಬೈಲ್ನಲ್ಲಿಯೂ ಪರಿಶೀಲಿಸಬಹುದು.
Aadhaar-PAN linking ಆಧಾರ್- ಪ್ಯಾನ್ ಜೋಡಣೆಗೆ ಕೊನೆಯ ಗಡುವು; ಆದಾಯ ತೆರಿಗೆ ಇಲಾಖೆ ಕೊನೆಯ ಎಚ್ಚರಿಕೆ ಏನು ?
ಅಕ್ರಮ ತಪ್ಪಿಸಲು ಈ ಕ್ರಮ
ಒಬ್ಬರೇ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದಿರುವುದರಿಂದ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ವರದಿ ಆಗಿದೆ.
ಇದರಿಂದ ಕೇಂದ್ರ ಸರ್ಕಾರ ಅವ್ಯವಹಾರ ತಡೆಯಲು ಈ ಕ್ರಮ ಅನುಸರಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಜೂನ್ 30ರ ಒಳಗಾಗಿ ನೀವು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ, ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.
ಮುಂದೆ ಅದನ್ನು ಬಳಸಲು ಮುಂದಾದರೂ ದಂಡ ವಿಧಿಸಲಾಗುತ್ತದೆ.
ಈ ಹಂತದಲ್ಲಿ 1,000 ಸಾವಿರ ರೂಪಾಯಿಯಿಂದ 10,000 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.
Share your comments