1. ಸುದ್ದಿಗಳು

ಐದು ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ ಸಂಪನ್ನ

Horticulture fair

ಬೆಂಗಳೂರು ನಗರದ  ಹೊರವಲಯದ ಹೆಸರಘಟ್ಟದ ಸಸ್ಯಕಾಶಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ- ಐಐಎಚ್‌ಆರ್  ನಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ  ರಾಷ್ಟ್ರೀಯ ತೋಟಗಾರಿಕಾ ಮೇಳ  ಶುಕ್ರವಾರ ಸಂಪನ್ನಗೊಂಡಿತು.

‘ಕೋವಿಡ್ ಕಾರಣದಿಂದ ಆನ್‌ಲೈನ್ ಹಾಗೂ ಭೌತಿಕವಾಗಿ ಮೇಳ ಆಯೋಜಿಸಲಾಗಿತ್ತು. ಐದು ದಿನಗಳ ಕಾಲ ನಡೆದ ಮೇಳಕ್ಕೆ  ರಾಜ್ಯ  ಮತ್ತು  ಹೊರರಾಜ್ಯಗಳೊಂದಿಗೆ  ಲಕ್ಷಕ್ಕೂ  ಅಧಿಕ  ರೈತರು  ಪಾಲ್ಗೊಂಡು  ಮಾಹಿತಿ ಪಡೆದರು. ಈ ಮೇಳದಲ್ಲಿ ಕೇವಲ ರೈತರಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಸಹ ಭೇಟಿ ಕೊಟ್ಟು ತೋಟಗಾರಿಕೆಗಳ ಬೆಳೆಗಳ

 ಬಗ್ಗೆ ಮಾಹಿತಿ ಪಡೆದುಕೊಂಡರು.

ಮೇಳಕ್ಕೆ ಬಂದವರ ಪೈಕಿ, ಕೃಷಿಯಲ್ಲಿ ಆಸಕ್ತಿ ಉಳ್ಳವರು  ತಮ್ಮ ಮಕ್ಕಳನ್ನು ಕೂಡ ಮೇಳದಲ್ಲಿ 

ಪಾಲ್ಗೊಳಿಸಿ ಬೆಳೆಗಳ ಬಗ್ಗೆ ತಿಳುವಳಿಕೆ ಮೂಡಿಸಲು ಮುಂದಾಗಿದ್ದರು.

ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ,ಗುಜರಾತ್, ಮಹಾರಾಷ್ಟ್ರ,

ಮಧ್ಯಪ್ರದೇಶ ಮತ್ತಿತರ ರಾಜ್ಯಗಳಿಂದಲೂ ಜನರು ಬಂದಿದ್ದರು.

ವೆಬ್‌ಸೈಟ್‌, ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ನೇರಪ್ರಸಾರವೂ ಇತ್ತು. ಬೇರೆ ರಾಜ್ಯಗಳ ರೈತರು ಸ್ಥಳೀಯ ರೈತ ಸಂಸ್ಥೆಗಳ ಸಹಾಯದಿಂದ ಅಲ್ಲಿಂದಲೇ ಮೇಳ ವೀಕ್ಷಿಸಿದರು. ಅವರ ಸಮಸ್ಯೆಗಳನ್ನು ತಮ್ಮದೇ ಭಾಷೆಯಲ್ಲಿ ಪರಿಹರಿಸಲು ವಿಜ್ಞಾನಿಗಳಿಂದ ಸಂವಾದ, ಕಾರ್ಯಾಗಾರ ಹಾಗೂ ಗೋಷ್ಠಿಗಳನ್ನು ಮೇಳದ ಐದೂ ದಿನ ನಡೆಸಿದೆವು.

ಇದೇ ಸಂದರ್ಭದಲ್ಲಿ ಸಂಸ್ಥೆಯ ತಂತ್ರಜ್ಞಾನಗಳನ್ನು ಬಳಸಿರುವ ಪ್ರಗತಿಪರ ರೈತರು ಹಾಗೂ ಉದ್ಯಮಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

Published On: 13 February 2021, 02:11 PM English Summary: horticulture fair conclude

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.