1. ಸುದ್ದಿಗಳು

ಹೆಚ್ಚು ಇಳುವರಿ ಕೊಡುವ ತಳಿಗಳ ಮಾಹಿತಿ ಇಲ್ಲಿದೆ

Onion

ತರಕಾರಿ, ಹಣ್ಣುಗಳು ಸೇರಿದಂತೆ ಇತರ ಬೆಳೆಗಳಲ್ಲಿ ಇಳುವರಿ ಹೆಚ್ಚು ನೀಡುವ ತಳಿಗಳನ್ನು ಸರ್ಕಾರಿ ಸ್ವಾಮ್ಯದ ಸಂಶೋಧನಾ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ತಳಿ ಅಭಿವೃದ್ಧಿಯಲ್ಲಿ ತೊಡಗಿವೆ.ರೈತರಿಗೆ ಅನುಕೂಲವಾಗಲೆಂದು ಕೆಲವು ತಳಿಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ. ಹೆಚ್ಚು ಇಳುವರಿ ಕೊಡುವ ಈರುಳ್ಳಿ ತಳಿಗಳ ಮಾಹಿತಿ ಇಲ್ಲಿದೆ.

ಹೆಚ್ಚು ಇಳುವರಿ ಕೊಡುವ ತಳಿಗಳು:

ಅರ್ಕಾ ಕಲ್ಯಾಣ, ಅರ್ಕಾ ನಿಕೇತನ್, ಅರ್ಕಾ ಪ್ರಗತಿ, ಅರ್ಕಾ ಪಿತಾಂಬರ್, ನಾಸಿಕ್ ರೆಡ್, ಅಗ್ರಿ ಫೌಂಡ್ ರೆಡ್ ರೋಸ್, ಅಗ್ರಿಪೌಂಡ್ ಲೈಟ್‍ರೆಡ್, ಅರ್ಕಾ ಸ್ವಾದಿಷ್ಟ, ಅರ್ಕಾ ಭೀಮಾ, ಬೆಂಗಳೂರು ಗುಲಾಬಿ, ಬಳ್ಳಾರಿ ರೆಡ್, ತೆಲಗಿ ಕೆಂಪು, ತೆಲಗಿ ಬಳಿ, ರಾಂಪುರ, ಕುಮಟಾ, ಸತಾರಾ ಲೋಕಲ್

ಸಂಕರಣ ತಳಿಗಳು

ಅರ್ಕಾ ಕೀರ್ತಿಮಾನ್,  ಅರ್ಕಾ ಲಾಲಿಮ, ಅರ್ಕಾ ಬಿಂದು, ಅರ್ಕಾ ವಿಶ್ವಾಸ್, ಅಗ್ರಿ ಪೌಂಡ್ ರೋಸ್

ಬಿತ್ತನೆ ಕಾಲ : 1) ಮೇ-ಜೂನ್ (ನೇರ ಬಿತ್ತನೆಗೆ)  2) ಜುಲೈ-ಆಗಸ್ಟ್ (ನಾಟಿ ಮಾಡಲು)

ಈರುಳ್ಳಿಯನ್ನು ಎಲ್ಲ ಕಾಲದಲ್ಲಿಯೂ ಬೆಳೆಯಬಹುದು, ಉತ್ತಮ ಗುಣಮಟ್ಟದ ಅಧಿಕ ಇಳುವರಿ ಪಡೆಯಲು ತಂಪಾದ ಹವಾಗುಣ ಮತ್ತು ಚಳಿಗಾಲ ಉತ್ತಮ, ಜೂನ್-ಜುಲೈ, ಸೆಪ್ಟೆಂಬರ್-ಅಕ್ಟೋಬರ, ಜನೆವರಿ-ಫೆಬ್ರವರಿ ಬೆಳೆ ಪ್ರಾರಂಭ ಮಾಡಲು ಸರಿಯಾದ ಕಾಲಾದರೂ ಸೆಪ್ಟೆಂಬರ್-ಅಕ್ಟೋಬರ್ ಬೆಳೆಯಿಂದ ಉತ್ಕೃಷ್ಟ ಗಡ್ಡೆಗಳನ್ನು ಪಡೆಯಬಹುದು.

NHRDF-RED-2 ತಳಿ

ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನವು, ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಬೆಳೆಯಲು ಸೂಕ್ತವಾದ NHRDF-RED-2 ಎಂಬ ಹೊಸ ಈರುಳ್ಳಿ ತಳಿಯನ್ನು ಅಭಿವೃದ್ಧಿಪಡಿಸಿದೆ. ಹೆಚ್ಚಿನ ಇಳುವರಿ, ಉತ್ತಮ ಹೊಂದಾಣಿಕೆ ಮತ್ತು ಸಂಗ್ರಹ ಸಾಮರ್ಥ್ಯದಿಂದಾಗಿ ಈ ತಳಿಯನ್ನು ಹೆಚ್ಚು ರೈತರು ಬೆಳೆಸುತ್ತಿದ್ದಾರೆ. ಇದರಲ್ಲಿ NHRDF-RED-3, NHRDF-RED-4 ಸಹ ಬಂದಿದೆ.

ಹೆಚ್ಚು ಇಳುವರಿ ಕೊಡುವ ಇನ್ನೆರಡು ತಳಿಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಅರ್ಕಾ ಕೀರ್ತಿಮಾನ್ ಹಾಗೂ ಅರ್ಕಾ ಲಾಲಿಮ.

ಅರ್ಕಾ ಕೀರ್ತಿಮಾನ್ ತಳಿ ಮಹತ್ವ

ಇದು ಮಧ್ಯಮ ಗಾತ್ರದ ಗಡ್ಡೆಗಳು (120 ರಿಂದ 150 ಗ್ರಾಂನಷ್ಟು ತೂಕವಿರುತ್ತದೆ). ಇವು ಗುಂಡಾಗಿರುತ್ತವೆ. ಕೆಂಪು ಬಣ್ಣವನ್ನು ಹೊಂದಿರುತ್ತವೆ. ಗಡ್ಡೆಗಳನ್ನು ಬಹಳ ದಿನಗಳವರೆಗೆ ಶೇಖರಿಸಿಡಲು ಸಾಧ್ಯ (4 ರಿಂದ 5 ತಿಂಗಳವರೆಗೆ ಶೇಖರಿಸಿಡಬಹುದು)  ಈ ತಳಿಯು ಮಳೆಗಾಲ ಮತ್ತು ಚಳಿಗಾಲಗಳೆರಡರಲ್ಲಿಯೂ ಬೆಳೆಯಲು ಸೂಕ್ತ. ಒಂದು ಹೆಕ್ಟೇರಿಗೆ ಸುಮಾರು 47 ಟನ್ ವರೆಗೆ ಇಳುವರಿ ಪಡೆಯಬಹುದು.

ಅರ್ಕಾ ಲಾಲಿಮ ಮಹತ್ವ

ಇದು ಮಧ್ಯಮ ಗಾತ್ರದ ತಳಿಯಾಗಿದೆ (150-180 ಗ್ರಾಂ) ಗುಂಡಾಗಿರುತ್ತದೆ.  ಬಹಳ ದಿನಗಳವರೆಗೆ ಶೇಖರಿಸಿಡಲು ಸಾಧ್ಯ (4 ರಿಂದ 5 ತಿಂಗಳು)  ಈ ತಳಿಯು ಮಳೆಗಾಲ ಮತ್ತು ಚಳಿಗಾಲಗಳೆರಡರಲ್ಲೂ ಬೆಳೆಯಲು ಸೂಕ್ತ. ಬೆಳೆಯ ಅವಧಿ 130-140 ದಿನಗಳು. ಒಂದು ಹೆಕ್ಟೇರಿಗೆ ಸುಮಾರು 50 ಟನ್ ಇಳುವರಿ ಪಡೆಯಬಹುದು.

Published On: 16 April 2021, 08:40 PM English Summary: High yielding varieties of onion

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.