ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಉತ್ತಮ ಮುಂಗಾರು ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ ಬೆನ್ನಲ್ಲೆ ಜೂನ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ಜುಲೈಯಲ್ಲಿ ಬಹುತೇಕ ಭಾಗದಲ್ಲಿ ಮಳೆ ಇರುವುದಿಲ್ಲ. ಆಗಸ್ಟ್ ಹಾಗೂ ಸೆಪ್ಟಂಬರ್ನಲ್ಲಿ ಕಳೆದ ವರ್ಷದಂತೆ ಅತಿವೃಷ್ಟಿ ಸಂಭವಿಸಲಿದೆ ಎಂದು ಕೇಂದ್ರ ಸರ್ಕಾರದ ವಿವಿದ ಇಲಾಖೆಗಳ ನಡುವೆ ವಿನಿಮಯವಾಗಿರುವ ಹವಾಮಾನ ತಜ್ಞರ ವರದಿಯಲ್ಲಿ ಹೇಳಲಾಗಿದೆ.
ಗುಜರಾತ್, ಪಶ್ಚಿಮದ ಮಧ್ಯಪ್ರದೇಶ, ಮಹಾರಾಷ್ಟ್ರದ ವಾಯವ್ಯ ಭಾಗದಲ್ಲಿ ಶೇ.50-60ರಷ್ಟು ಮಳೆ ಸುರಿಯಲಿದೆ. ಬಂಗಾಲ, ಒಡಿಶಾ, ಮಿಜೋರಾಂನಲ್ಲಿ ಕಡಿಮೆ ಮಳೆ ಇರಲಿದೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ವಾಡಿಕೆಗಿಂತ ಹೆಚ್ಚು ಮುಂಗಾರು ಸುರಿಯಲಿದೆ. ಕಳೆದ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಕರ್ನಾಟಕದಲ್ಲಿ ಹಿಂದೆಂದೂ ಕೇಳರಿಯದ ರೀತಿಯಲ್ಲಿ ಪ್ರವಾಹ ಬಂದಿತ್ತು. ಈ ವರ್ಷವೂ ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಹೆಚ್ಚು ಮಳೆಯಾಗಲಿದೆ ಎಂಬ ವರದಿ ಆತಂಕ ಉಂಟುಮಾಡಿದೆ.
ಉತ್ತರ ಭಾರತದ ಸಮುದ್ರ ತೀರದ ಕಡೆಯಿಂದ ಈ ಬಾರಿ ಹಲವಾರು ಚಂಡಮಾರುತಗಳು ಏಳಲಿದ್ದು, ಇದಕ್ಕಾಗಿ 13 ದೇಶಗಳ ಪ್ರಾದೇಶಿಕ ಹವಾಮಾನ ವಿಭಾಗಗಳು ಮುಂಚಿತವಾಗಿಯೇ ಪಿಂಕು, ಲುಲು, ಗಾಟಿ, ಶಾಹೀನ್, ಗುಲಾಬ್, ತೇಜ್, ಅಗ್ನಿ ಮತ್ತು ಆಗ್ ಹೀಗೆ ಒಟ್ಟು 169 ಹುಡುಕಿಟ್ಟಿರುವ ಹೆಸರುಗಳನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.
Share your comments