1. ಸುದ್ದಿಗಳು

ಕಲಬುರಗಿ ಜಿಲ್ಲೆಯಾದ್ಯಂತ ಆ. 3ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ

ಹವಾಮಾನ ಇಲಾಖೆಯ ವಿಶೇಷ ಸೂಚನೆಯಂತೆ ಜಿಲ್ಲೆಯಲ್ಲಿ ಆಗಸ್ಟ್ 3ರವರೆಗೆ ಭಾರಿ ಮಳೆಯಾಗುವ (Heavy rain) ಸಾಧ್ಯತೆಯಿರುವುದರಿಂದ ಕಲಬುರಗಿ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ.  

ಚಿಂಚೋಳಿ ತಾಲೂಕಿನ ಲೋವರ್ ಮುಲ್ಲಾಮಾರಿ (mullamari) ಹಾಗೂ ಚಂದ್ರಂಪಳ್ಳಿ(Chandrampalli) ಜಲಾಶಯಗಳಲ್ಲಿ ನೀರಿನ ಒಳ ಹರಿವು ಹೆಚ್ಚಾದಲ್ಲಿ ಜಲಾಶಯದ ಕ್ರಿಸ್  ಗೇಟಿನ ಮೂಲಕ ನದಿಗಳಿಗೆ ನೀರು ಬೀಡುವ ಸಂಭವ ಇರುತ್ತದೆ ಎಂದು ಚಿಂಚೋಳಿ ತಹಶೀಲ್ದಾರರು ತಿಳಿಸಿದ್ದಾರೆ.

         ಗ್ರಾಮಸ್ಥರು ನದಿ, ಹಳ್ಳ, ಕಾಲುವೆ ದಂಡೆಯಲ್ಲಿ ಹೋಗದಂತೆ ಎಚ್ಚರಿಕೆ ವಹಿಸಬೇಕು.   ಸಾರ್ವಜನಿಕರು  ನದಿಯಲ್ಲಿ ಮೀನು ಹಿಡಿಯಲು, ದಂಡೆಯಲ್ಲಿ ಬಟ್ಟೆ ಒಗೆಯಲು ಹೋಗಬಾರದು. ವಾಹನ ತೊಳೆಯುವುದಾಗಲಿ ಮಾಡಬಾರದು. ಮಕ್ಕಳನ್ನು ದಡದಲ್ಲಿ/ ಹಳ್ಳ ಕೊಳ್ಳಗಳಲ್ಲಿ ಈಜಾಡಲು ಬಿಡಬಾರದು ಹಾಗೂ ಜಾನುವಾರುಗಳನ್ನು ನದಿ ದಂಡೆಯಲ್ಲಿ ತೆಗೆದುಕೊಂಡು ಹೋಗಬಾರದು ಎಂದು ಚಿಂಚೋಳಿ ತಹಸೀಲ್ದಾರರು ಎಚ್ಚರಿಕೆ ನೀಡಿದ್ದಾರೆ.

Published On: 01 August 2020, 09:10 AM English Summary: Heavy rain in kalaburgi yellow alert until 3rd august

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.