1. ಸುದ್ದಿಗಳು

ಶುಂಠಿಗೆ ಉತ್ತರ ಭಾರತದಿಂದ ಭಾರೀ ಬೇಡಿಕೆ; ಬೆಲೆಯಲ್ಲೂ ಹೆಚ್ಚಳ!

Kalmesh T
Kalmesh T
Heavy demand from North India for ginger

ಶುಂಠಿಗೆ ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುತ್ತಿದೆ. ಈಗ ಬಿತ್ತನೆ ಸಮಯವಾಗಿದ್ದರಿಂದ ಬಿತ್ತನೆಗೂ ಇದು ಬಳಕೆಯಾಗುತ್ತಿದೆ. ಹೀಗಾಗಿ ಸಹಜವಾಗಿ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿರಿ: ಕರ್ನಾಟಕ ಸೇರಿದಂತೆ ದೇಶಾದ್ಯಂತ ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಎಚ್ಚರಿಕೆ!

ಶುಂಠಿಗೆ (Ginger) ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುತ್ತಿದೆ. ಇನ್ನೊಂದು ಕಡೆ ಈಗ ಬಿತ್ತನೆ ಸಮಯವಾಗಿದ್ದರಿಂದ ಬಿತ್ತನೆಗೂ ಇದು ಬಳಕೆಯಾಗುತ್ತಿದೆ. ಹೀಗಾಗಿ ಸಹಜವಾಗಿ ಬೇಡಿಕೆ ಹೆಚ್ಚಿದೆ.

ಧಾರಣೆ ಹೆಚ್ಚುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಶೇ. 50ಕ್ಕಿಂತ ಹೆಚ್ಚು ಬೆಳೆಗಾರರು ಶುಂಠಿ (Ginger) ಕಿತ್ತು ಮಾರಾಟ ಮಾಡಿದ್ದರು. ಆಧರೆ, ಈಗ ದಿಢೀರ ಬೇಡಿಕೆ ಕಂಡು ದಿಗಿಲಾಗಿದ್ದಾರೆ. ಶುಂಠಿ ಬೆಲೆ ಒಮ್ಮಿಂದೊಮ್ಮೆಲೆ ಹೆಚ್ಚಳವಾಗಿದೆ. ಕಡಿಮೆ ಬೆಲೆಗೆ ಫಸಲು ಮಾರಿರುವ ಬೆಳೆಗಾರರು ಮರುಗುತ್ತಿದ್ದಾರೆ.

ಕಳೆದ 2-3 ದಿನಗಳಿಂದ ಶುಂಠಿ (Ginger) ಬೆಲೆ ಏರಿಳಿತ ಕಾಣುತ್ತಿದೆ. ಕೇವಲ 8-10 ದಿನಗಳ ಹಿಂದೆಯಷ್ಟೇ ಬಹಳಷ್ಟು ಬೆಳೆಗಾರರು ಪ್ರತಿ ಕ್ವಿಂಟಲ್‌ಗೆ 1600-2200 ರೂ.ಗಳವರೆಗೆ ಮಾರಾಟ ಮಾಡಿ ಕೈಸುಟ್ಟುಕೊಂಡಿದ್ದಾರೆ. ಇದೀಗ ಬೆಲೆ ಒಮ್ಮೆಲೇ ಮೂರು ಪಟ್ಟು ಹೆಚ್ಚಿದೆ.

ನಿಷೇಧದ ನಡುವೆಯೂ ಭಾರತದಿಂದ 18 ಲಕ್ಷ ಟನ್‌ ಗೋಧಿ ರಫ್ತು..!

ಶುಂಠಿಗೆ ಉತ್ತರ ಭಾರತದ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ಬರುತ್ತಿದೆ. ಇನ್ನೊಂದು ಕಡೆ ಈಗ ಬಿತ್ತನೆ ಸಮಯವಾಗಿದ್ದರಿಂದ ಬಿತ್ತನೆಗೂ ಇದು ಬಳಕೆಯಾಗುತ್ತಿದೆ.

ಹೀಗಾಗಿ ಸಹಜವಾಗಿ ಬೇಡಿಕೆ ಹೆಚ್ಚಿದೆ. ಧಾರಣೆ ಹೆಚ್ಚುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ಶೇ. 50ಕ್ಕಿಂತ ಹೆಚ್ಚು ಬೆಳೆಗಾರರು ಶುಂಠಿ (Ginger) ಕಿತ್ತು ಮಾರಾಟ ಮಾಡಿ ಇದೀಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಧಾರಣೆ ಹೆಚ್ಚಲಿದೆ ಎನ್ನುವ ವಿಶ್ವಾಸದಲ್ಲಿದ್ದ ಇನ್ನುಳಿದ ಬೆಳೆಗಾರರಿಗೆ ಲಾಟರಿ ಹೊಡೆದಂತಾಗಿದೆ.

ಬೆಲೆ ಹೆಚ್ಚಿದ್ದರೂ ಕೂಡ ಅದು ಸ್ಥಿರವಾಗಿರದಿರುವುದು ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದೆ. ಶುಕ್ರವಾರವರೆಗೆ 4200 ರೂ.ಗಳಷ್ಟಿದ್ದ ಬೆಲೆ ಶನಿವಾರದ ಹೊತ್ತಿಗೆ 3500 ರೂ.ಗಳಿಗೆ ಕುಸಿತ ಕಂಡಿದೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ ಶುಂಠಿ ಬೆಲೆ ಕುಸಿದಿತ್ತು. ಪ್ರತಿ ಕ್ವಿಂಟಾಲ್‌ಗೆ 2200-3300 ರೂ.ವರೆಗೆ ಮಾರಾಟವಾಗಿತ್ತು.

40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ತಿಂಗಳು ದೊರೆಯಲಿದೆ ₹1000 ..! ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೆ?

ಶುಂಠಿ (Ginger) ವ್ಯವಸಾಯ ಯಾವ ಜೂಜಾಟಕ್ಕೂ ಕಡಿಮೆ ಇಲ್ಲ ಎನ್ನುವಂತಾಗಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಹಾನಗಲ್‌ ತಾಲೂಕಿನಲ್ಲಿ ಹೆಚ್ಚು ಕೃಷಿಕರು ಶುಂಠಿ ಬೆಳೆಗೆ ಮೊರೆ ಹೋಗಿದ್ದಾರೆ. ಇಲ್ಲಿ ಕೋಟಿ ಗಳಿಸಿದವರೂ ಇದ್ದಾರೆ, ಕಳೆದುಕೊಂಡವರೂ ಇದ್ದಾರೆ.

Published On: 27 June 2022, 02:08 PM English Summary: Heavy demand from North India for ginger

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.