ಸಾಮಾನ್ಯವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ಹೋರಿ ಹಬ್ಬ ಎಂಬುದು ಒಂದು ವಿಶೀಷ್ಟ ಆಚರಣೆಯಾಗಿದೆ. ಕಟ್ಟು ಮಸ್ತಿನ ಹೋರಿಗಳಿಗೆ ಕೊಬ್ಬರಿ ಕಟ್ಟಿ ಬಿಟ್ಟು ಹಿಡಿಯುವ ಈ ರೋಚಕ ಆಟ ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಸಾಕಷ್ಟು ಹೆಸರುವಾಸಿಯಾಗಿದೆ. ಇನ್ನು ಈ ಆಚರಣೆಯ ಕ್ರೇಜ್ ಕೂಡ ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಾ ಹೋಗುತ್ತಿದೆ. ಸದ್ಯ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾಗೂ ಏಲಕ್ಕಿ ಕಂಪಿನ ನಾಡು ಎಂದೇ ಹೆಸರಾಗಿರುವ ಹೋರಿಯೊಂದು ಸಾಕಷ್ಟು ಸುದ್ದಿಯಲ್ಲಿದೆ. ಹೌದು ಹೋರಿಯೊಂದು ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿ ಎಲ್ಲರ ಹುಬ್ಬೇರಿಸಿದೆ.
ಹಾವೇರಿಯ ಹಾನಗಲ್ ತಾಲೂಕಿನ ರೈತರೊಬ್ಬರಿಗೆ ಸೇರಿದ ಹೋರಿಯೊಂದು ಬರೋಬ್ಬರಿ 19 ಲಕ್ಷಕ್ಕೆ ಪಕ್ಕದ ತಮಿಳುನಾಡಿನ ಪಾಲಾಗಿದೆ. ಹೌದು ಏನಪ್ಪಾ ಇದು ಹೋರಿಯೊಂದು ಇಷ್ಟೊಂದು ಬೆಲೆಗೆ ಮಾರಾಟವಾಗಿದೆ ಎಂದು ನೀವು ಬಾಯಿ ಮೇಲೆ ಬೆರಳು ಇಟ್ಟುಕೊಂಡರೆ ತಪ್ಪಲ್ಲಾ ಬಿಡಿ. ಹಲವಾರಿ ಹೋರಿ ಹಬ್ಬಗಳಲ್ಲಿ ಸಾಕಷ್ಟು ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದ ಬ್ರಹ್ಮ ಎಂಬ ಹೆಸರಿನ ಈ ಹೋರಿಯನ್ನು ಅದರ ಮಾಲೀಕ ಪಕ್ಕದ ತಮಿಳುನಾಡಿಗೆ ಮಾರಿದ್ದಾರೆ. ಕಟ್ಟು ಮಸ್ತಿನ ಈ ಹೋರಿ ತಮಿಳುನಾಡಿನ ಪಾಲಾಗಿರುವುದು ಹೋರಿ ಹಬ್ಬದ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ತಂದಿದೆ..
ಸ್ಪೀಡ್ ಕಾ ಬಾಪ್ ಎಂದೇ ಖ್ಯಾತಿ
ಈ ಹೋರಿಯ ಸಾಕಷ್ಟು ಫೇಮಸ್ ಆಗಿದ್ದು ಸ್ಪೀಡ್ ಕಾ ಬಾಪ್ ಎಂಬ ಹೆಸರಿನಿಂದಲೇ ಫೇಮಸ್ ಆಗಿತ್ತು. ಈ ಹೋರಿಯನ್ನು ಅಕಾಡದಲ್ಲಿ ಕಂಡ್ರೇ ಮುಗೀತು ಕಥೆ ಅಭಿಮಾನಿಗಳು ಸಿಳ್ಳೆ - ಕೇಕೆ ಹಾಕಿ ಸಂಭ್ರಮಿಸುತ್ತಾರೆ. ಅಂತಹ ಹೋರಿಗಳ ಸಾಲಲ್ಲಿ ಬ್ರಹ್ಮ ಅನ್ನೋ ಹೋರಿ ಕೂಡಾ ಒಂದಾಗಿದೆ. ಕರ್ನಾಟಕದಲ್ಲಿ ನಡೆಯೋ ಪ್ರತಿ ಹೋರಿ ಹಬ್ಬದಲ್ಲಿ ವಾಸನ 'ಬ್ರಹ್ಮ' ಅಭಿಮಾನಿಗಳ ಮನಸ್ಸು ಗೆದ್ದಿದೆ. ಹೀಗಾಗಿ ಹೋರಿ ಈಗ ತಮಿಳುನಾಡು ಪಾಲಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ತರಿಸಿದೆ.
ಹವಾಮಾನ ವರದಿ: ರಾಜ್ಯದ 8 ಜಿಲ್ಲೆಗಳಲ್ಲಿ ಶನಿವಾರದವರೆಗೆ ಭಾರೀ ಮಳೆ ಮುನ್ಸೂಚನೆ
ಅಬ್ಬಬ್ಬಾ! ಬರೋಬ್ಬರಿ 15 ಲಕ್ಷಕ್ಕೆ ಮಾರಾಟವಾಯ್ತು ಈ ಮೇಕೆ..ಏನಿದರ ವಿಶೇಷತೆ.?
ದೇಶ-ವಿದೇಶಗಳಲ್ಲಿ ಪ್ರಾಣಿಗಳ ಹರಾಜು ಹೊಸದೇನಲ್ಲ ಈ ಪ್ರಕ್ರಿಯೇ ಯಾವಾಗಲು ನಡೆಯುತ್ತಲೆ ಇರುತ್ತದೆ. ಸದ್ಯ ಇದರಿಂದಾಗಿ ಆಸ್ಟ್ರೇಲಿಯಾದ ಮೇಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ. ಯಾಕೆ ಆ ಮೇಕೆ ಚರ್ಚೆಗೆ ಕಾರಣವಾಗಿದ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಯೆಸ್ ವಾಸ್ತವವಾಗಿ, ಮಾರಕೇಶ್ ಮೇಕೆ ಎಂದು ಕರೆಯಲ್ಪಡುವ ಮೇಕೆ ಆಸ್ಟ್ರೇಲಿಯಾದಲ್ಲಿ ಬರೋಬ್ಬರಿ 15.6 ಲಕ್ಷಕ್ಕೆ ಹರಾಜಾಯಿತು ಎಂದು ವರದಿಗಳಾಗಿವೆ. ವೆಸ್ಟ್ ನ್ಯೂ ಸೌತ್ ಆಸ್ಟ್ರೇಲಿಯಾದ ಕೋಬ್ರೆಯಲ್ಲಿ ಮೇಕೆಯನ್ನು ಹರಾಜು ಮಾಡಲಾಗಿದೆ. ಈ ಹಿಂದೆ ಭಾರತದಲ್ಲಿ ಬ್ರಾಕ್ ಎಂಬ ಮೇಕೆ 6.40 ಲಕ್ಷಕ್ಕೆ ಹರಾಜಾಗಿತ್ತು. ಸದ್ಯ ಈ ಮೇಕೆ ಈ ಎಲ್ಲಾ ಮೇಕೆಗಳಿಗಿಂತ ದುಬಾರಿ ಮೊತ್ತಕ್ಕೆ ಬಿಕರಿಯಾಗಿ ಸಾಕಷ್ಟು ಸುದ್ದಿಯಲ್ಲಿದೆ.
ಮಾಧ್ಯಮ ವರದಿಗಳ ಪ್ರಕಾರ, ಖರೀದಿದಾರನನ್ನು ಆಂಡ್ರ್ಯೂ ಮೊಸ್ಲಿ ಎಂದು ಗುರುತಿಸಲಾಗಿದೆ. ಅವರು ಹಸು ಸಾಕಾಣಿಕೆ ಮಾಡುತ್ತಿದ್ದು ಅವರೇ ಈ ಮೇಕೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಅವರು ಕುರಿ, ಮೇಕೆ ಮತ್ತು ಕೆಲವು ಜಾನುವಾರುಗಳನ್ನು ಸಹ ಸಾಕುತ್ತಾರೆ. ಇವರಿಗೆ ಮೇಕೆ ಸಾಕಾಣಿಕೆಯಲ್ಲಿಯೂ ಅಪಾರ ಆಸಕ್ತಿ. "ಮೊರೊಕನ್ ಆಡುಗಳು ದುಬಾರಿಯಾಗಿದೆ ಏಕೆಂದರೆ ಅವು ಈ ಸಮಯದಲ್ಲಿ ತುಂಬಾ ಚಿಕ್ಕದಾಗಿರುತ್ತವೆ" ಎಂದು ಅವರು ಹೇಳಿದರು. ಈ ಮೇಕೆ ನೋಡಲು ತುಂಬಾ ಸುಂದರ ಮತ್ತು ಆರೋಗ್ಯಕರವಾಗಿರುತ್ತದೆ.
Share your comments