1. ಸುದ್ದಿಗಳು

ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಮೋದಿ ಸಂಕಲ್ಪ

PM Narendra Modi

21ನೇ ಶತಮಾನದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಅತ್ಯಂತ ಜರೂರು ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ದೇಶದ 75ನೇ ಸ್ವಾತಂತ್ರ ದಿನೋತ್ಸವ ಸಂದರ್ಭದಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯದಲ್ಲಿ 75 ವಂದೇ ಭಾರತ್ ರೈಲುಗಳು 75ವಾರಗಳಲ್ಲಿ ದೇಶದ ಮೂಲೆ ಮೂಲೆಯನ್ನು ಸಂಪರ್ಕಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿ ಗತಿ ಶಕ್ತಿಯೋಜನೆ ಪ್ರಾರಂಭಿಸುತ್ತೇವೆ. ಇದು 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದ್ದು, ಈ ಯೋಜನೆ ಸಮಗ್ರ ಮೂಲ ಸೌಕರ್ಯಕ್ಕೆ ಅಡಿಪಾಯವನ್ನು ನೀಡುತ್ತದೆ ಎಂದು ತಿಳಿಸಿದರು.

ದೇಶದ ಪ್ರತಿ ಸೈನಿಕ ಶಾಲೆಯೂ ಮಹಿಳೆಯರಿಗಾಗಿ ತೆರೆಯಲಿವೆ. 'ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯಡಿ ನಮ್ಮ ಹೆಣ್ಣುಮಕ್ಕಳು ಸೈನಿಕ ಶಾಲೆಗಳಲ್ಲಿಯೂ ಅಧ್ಯಯನ ಮಾಡಲು ಸಾಧ್ಯವಾಗಲಿದೆ. ಶಿಕ್ಷಣ ಇರಲಿ, ಒಲಿಂಪಿಕ್ಸ್ ಇರಲಿ, ನಮ್ಮ ಹೆಣ್ಣುಮಕ್ಕಳು ಅಮೋಘ ಸಾಧನೆ ಪ್ರದರ್ಶಿಸುತ್ತಿದ್ದಾರೆ. ಅವರಿಗೆ ಸಮಾನ ಅವಕಾಶಗಳು ಸಿಗುವಂತೆ ಮಾಡುವುದು, ಅವರಲ್ಲಿ ಸುರಕ್ಷತೆ ಹಾಗೂ ಗೌರವದ ಭಾವ ಮೂಡಿಸುವುದು ನಮ್ಮ ಜವಾಬ್ದಾರಿ ಎಂದರು.

ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಪ್ರಕಟಿಸುತ್ತಿದ್ದೇನೆ. ಭಾರತವನ್ನು ಗ್ರೀನ್ ಹೈಡ್ರೋಜನ್‌ನ ಉತ್ಪಾದನೆ ಹಾಗೂ ರಫ್ತಿನ ಕೇಂದ್ರವನ್ನಾಗಿ ಮಾಡಬೇಕಿದೆ. ಇಂಧನ ಉತ್ಪಾದನೆಯಲ್ಲಿ ನಾವು ನಮ್ಮ ದೇಶವನ್ನು ಸ್ವಾವಲಂಬಿಯಾಗುವಂತೆ ಮಾಡಬೇಕಿದೆ. 
ಬಡವರಿಗೆ ಪೌಷ್ಟಿಕಾಂಶಯುಕ್ತ ಅಕ್ಕಿಯನ್ನು ಸರ್ಕಾರ ನೀಡಲಿದೆ. ಪಡಿತರ ಅಂಗಡಿಯಲ್ಲಿ ಸಿಗುವ ಅಕ್ಕಿ ಇರಲಿ, ಮಧ್ಯಾಹ್ನ ಊಟಕ್ಕೆ ಲಭ್ಯವಾಗುವ ಅಕ್ಕಿ ಇರಲಿ, ಪ್ರತಿ ಯೋಜನೆಯಿಂದ ಲಭ್ಯವಾಗುವ ಅಕ್ಕಿಯ ಗುಣಮಟ್ಟವನ್ನೂ 2024ರ ವೇಳೆಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ದುರ್ಬಲ ಸಮುದಾಯಗಳನ್ನು ಕೈಹಿಡಿದು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವುದು. 'ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಮತ್ತು ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ. 'ದೇಶವು ಅಭಿವೃದ್ಧಿ ಪಥದಲ್ಲಿ ಸಾಗುವಾಗ ಯಾರೂ ಹಿಂದುಳಿಯಬಾರದರು. ಸೌಲಭ್ಯಗಳಿಂದ ವಂಚಿತರಾದವರಿಗೆ ವಿಶೇಷ ಆದ್ಯತೆ ನೀಡಬೇಕು. 'ಅಖಿಲ ಭಾರತ ಕೋಟಾ ಅಡಿಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ದೇಶದಲ್ಲಿನ ವೈದ್ಯಕೀಯ ಕೋರ್ಸ್‌ಗಳಲ್ಲಿ ಮೀಸಲಾತಿ ದೊರೆಯಲಿದೆ. ತಮ್ಮದೇ ಆದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸಲು ರಾಜ್ಯಗಳಿಗೆ ಅಧಿಕಾರ ನೀಡುವ ಮಸೂದೆಗೆ ಸಂಸತ್‌ ಅನುಮೋದನೆ ನೀಡಿದ್ದು, ಕಾಯ್ದೆಯಾಗಿ ಜಾರಿಗೆ ಬಂದಿದೆ ಎಂದರು.
 ಕಳೆದ ಎರಡು ವರ್ಷಗಳಿಂದ ಭಾರತ ಕೊರೊನಾ ಮಹಾಮಾರಿಯಿಂದ ನರಳುತ್ತಿದೆ. ಆದರೆ ಈ ವೈರಸ್ ನಮ್ಮ ವಿಕಾಸದ ಹಾದಿಯನ್ನು ತಡೆಯಲು ಸಾಧ್ಯವಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಘಳಿಗೆಯಲ್ಲಿ ನಾವು ಭಾರತವನ್ನು ಮತ್ತೆ ಕಟ್ಟುವ ಪಣ ತೊಡಬೇಕಿದೆ. ಭಾರತ ತನ್ನ ಸ್ವಾತಂತ್ರ್ಯದ ಶತಮಾನೋತ್ಸವ ಆಚರಣೆ ವೇಳೆಗೆ, ಆರೋಗ್ಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗುವ ಗುರಿಯೊಂದಿಗೆ ನವು ಹೆಜ್ಜೆ ಇಡೋಣ ಎಂದು ಪ್ರಧಾನಿ ಮೋದಿ ಕರೆ ನೀಡಿದರು

ಪ್ರತಿಯೊಂದು ಮನೆಯಲ್ಲಿ ಬ್ಯಾಂಕ್ ಖಾತೆ ಹೊಂದಿರಬೇಕು, ಆಯುಷ್ಮಾನ್ ಭಾರತ್ ಕಾರ್ಡ್ ಶೇಕಡ ನೂರರಷ್ಟು ಎಲ್ಲರಿಗೂ ಸಿಗಬೇಕು, ಆರ್ಹ ಎಲ್ಲರಿಗೂ ಶೇಕಡ 100 ರಷ್ಟು ಉಜ್ವಲ ಯೋಜನೆ ಉಚಿತ ಅನಿಲ ಯೋಜನೆ ಸಿಗಬೇಕು ಎನ್ನುವುದು ಸೇರಿದಂತೆ ದೇಶದ ಎಲ್ಲ ಜನರಿಗೆ ಕ್ಷೇತ್ರ ನೂರರಷ್ಟು ಸೌಲಭ್ಯಗಳು ಸಿಗುವಂತಾಗಬೇಕು ಎಂದು ಅವರು ಹೇಳಿದ್ದಾರೆ
ಆಯುಷ್ಮಾನ್ ಯೋಜನೆಯ ಜೊತೆಜೊತೆಗೆ ವಿಮಾ ಯೋಜನೆ, ಪಿಂಚಣಿ ಯೋಜನೆ, ವಸತಿ ಯೋಜನೆ ಜನರಿಗೆ ತಲುಪಬೇಕು. ಫುಟ್ ಪಾತ್ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆ ಜಾರಿ, ಎಲ್ಲ ಮನೆಗಳಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಎಲ್ಲರಿಗೂ ಶೇಕಡ ನೂರರಷ್ಟು ಸೌಲಭ್ಯ ಸಿಗುವಂತಾಗಬೇಕು ಆಗಮಾತ್ರ ನವಭಾರತ ನಿರ್ಮಾಣ ಸುಲಭವಾಗಲಿದೆ ಎಂದು ಅವರು ಹೇಳಿದ್ದಾರೆ.

Published On: 15 August 2021, 01:42 PM English Summary: Hand Holding of Deprived communities necessary- PM Modi

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.