ಇಂದು ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾಗಿದ್ದ ಗೃಹ ಜ್ಯೋತಿ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಲು ಚಾಲನೆ ನೀಡಲಾಗಿದೆ. ಕಾಂಗ್ರೆಸ್‌ನ 5 ಪ್ರಮುಖ ಗ್ಯಾರಂಟಿಗಳಲ್ಲಿ ಗೃಹ ಜ್ಯೋತಿ ಪ್ರಮುಖವಾದದ್ದು. ಸದ್ಯ ಇಂದಿನಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭಿಸಿದ್ದು ಮೊದಲ ದಿನವೇ ಗೃಹ ಜ್ಯೋತಿಗೆ ವಿಘ್ನ ಎದುರಾಗಿದೆ.
ಹೌದು ಇಂದು ನೋಂದಣಿ ಆರಂಭವಾಗಿರುವುದರಿಂದ ಸಾರ್ವಜನಿಕರು ತಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮಾ ಒನ್, ಸೈಬರ್ ಸೆಂಟರ್‌ಗೆ ಆಗಮಿಸಿ ಸೇವಾಸಿಂಧು ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವಲ್ಲಿ ನಿರತರಾಗಿದ್ದಾರೆ.
ಆದರೆ ಈ ವೇಳೆ ಸೇವಾಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿದೆ ಎಂದು ವರದಿಗಳಾಗಿವೆ. ಸಾಕಷ್ಟು ಜನ ಒಂದೇ ಸಮಯದಲ್ಲಿ ಈ ಜಾಲತಾಣಕ್ಕೆ ಭೇಟಿ ನೀಡುತ್ತಿರುವುದರಿಂದ ಸರ್ವರ್ ಡೌನ್ ಆಗಿದೆ. ಇದರಿಂದ ಕೆಲವೆಡೆ ಜನರು ಕಾದು ಕಾದು ಸುಸ್ತಾಗಿ ಅಧಿಕಾರಿಗಳ ಮೇಲೆ ಗರಂ ಆಗಿದ್ದು, ಅಲ್ಲಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಾಗಿವೆ ಎಂದು ತಿಳಿದು ಬಂದಿದೆ.
ಪ್ರತಿ ಕುಟುಂಬಕ್ಕೆ ತಿಂಗಳಿಗೆ 200 Unit ಉಚಿತ ವಿದ್ಯುತ್ ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ಇಂದಿನಿಂದ ನೋಂದಣಿಗೆ ಅವಕಾಶ ನೀಡಲಾಗಿದೆ. ಸೇವಾಸಿಂಧು ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು. ಸದ್ಯ ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನ ನೀಡಲಾಗಿಲ್ಲ. ಒಂದು ಹಂತದ ನೋಂದಣಿ ಪ್ರಕ್ರಿಯೆ ಮುಗಿದ ನಂತರ ಅಧಿಕೃತವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಾಗುವು ಎಂದು ಮೂಲಗಳು ತಿಳಿಸಿವೆ.
ನಿಮ್ಮ ಅಕೌಂಟ್‌ಗೆ ಪಿಎಂ ಕಿಸಾನ್ 14 ನೆ ಕಂತು ಬರುತ್ತದೆಯೇ? ಈಗಲೇ ತಿಳಿದುಕೊಳ್ಳಿ
ಪ್ರಮುಖ ಅಂಶಗಳು
ಗೃಹ ಜ್ಯೋತಿ ಯೋಜನೆಯ ಮೂಲಕ ರಾಜ್ಯದ ನಾಗರಿಕರಿಗೆ ಉಚಿತ ವಿದ್ಯುತ್ ಸಿಗಲಿದೆ. ಕರ್ನಾಟಕ ರಾಜ್ಯದ ನಿವಾಸಿಗಳ ಜೀವನ ಪರಿಸ್ಥಿತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗೃಹ ಜ್ಯೋತಿ ಯೋಜನೆಯ ಆರಂಭಿಸಲಾಗಿದೆ.
ಆದಾಗ್ಯೂ, ಒಟ್ಟು ವಿದ್ಯುತ್ ಬಳಕೆ 200 ಯೂನಿಟ್‌ಗಿಂತ ಹೆಚ್ಚಿನ ಬಳಕೆದಾರರಿಗೆ ಈ ಯೋಜನೆ ಅನ್ವಯಿಸುವುದಿಲ್ಲ. ಆದ್ದರಿಂದ, ನಿಮ್ಮ ಒಟ್ಟು ವಿದ್ಯುತ್ ಬಳಕೆಯು ತಿಂಗಳಿಗೆ 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಮೊದಲ 200 ಯೂನಿಟ್‌ಗಳಿಗೆ ನಿಮಗೆ ಸಬ್ಸಿಡಿ ನೀಡಲಾಗುವುದಿಲ್ಲ - ಮತ್ತು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.
Free Smartphones : ಮಹಿಳೆಯರಿಗೆ ಸ್ಮಾರ್ಟ್ ಫೋನ್ ಖರೀದಿಗೆ ಹಣ
ಒಂದೇ ಹೆಸರಿನಲ್ಲಿ ಎರಡು ಮೀಟರ್‌ಗಳನ್ನು ಹೊಂದಿರುವ ಕುಟುಂಬಗಳಿಗೆ ಎರಡೂ ಮೀಟರ್‌ಗಳಿಗೆ ಸಬ್ಸಿಡಿ ನೀಡಲಾಗುವುದಿಲ್ಲ - ಕೇವಲ ಒಂದನ್ನು ಸಬ್ಸಿಡಿಗಾಗಿ ತೆರೆಯಲಾಗುತ್ತದೆ.
ಅಂಗಡಿ ಮಾಲೀಕರು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ರಾಜ್ಯದ ಹೊಸ ನಿವಾಸಿಗಳು ಅವರು ಯಾವ ಸಬ್ಸಿಡಿಯನ್ನು ಪಡೆಯಲು ಅನುಮತಿಸುತ್ತಾರೆ ಎಂಬ ವಿವರಗಳನ್ನು ಇನ್ನೂ ಸ್ವೀಕರಿಸಿಲ್ಲ
Share your comments