1. ಸುದ್ದಿಗಳು

ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ, ದ್ರಾಕ್ಷಿ ತೋಟಕ್ಕೆ ಹಾನಿ, ಪರಿಹಾರ ನೀಡುವಂತೆ ರೈತರ ಒತ್ತಾಯ

KJ Staff
KJ Staff

ದ್ರಾಕ್ಷಿ ಕೃಷಿ:

ಆಧುನಿಕತೆ ಹೆಚ್ಚಿದಂತೆಲ್ಲ ನಿತ್ಯವೂ ಕೃಷಿ ಕ್ಷೇತ್ರ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ಒಂದೆಡೆ ಕ್ರಷಿಯಿಂದ ದೂರ ಸರಿಯುತ್ತಿರುವ ಯುವಜನತೆ, ಮತ್ತೊಂದೆಡೆ ಸರಿಯಾದ ಅನುಕೂಲಗಳ ಕೊರತೆಯಿಂದ ಸಮಸ್ಯೆಗೆ ಗುರಿಯಾಗುತ್ತಿರುವ ರೈತ ಸಮುದಾಯ. ನಡುವೆ ಹವಾಮಾನ ವೈಪರಿತ್ಯ, ಮಣ್ಣಿನ ಫಲವತ್ತತೆಯ ಕೊರತೆ, ಕ್ರಿಮಿನಾಶಕಗಳ ಹಾವಳಿ ಇನ್ನೂ ಮುಂತಾದವು. ಲಾಭದಾಯಕವಾದ ಕೃಷಿ ಇದ್ದರೂ ಅದನ್ನು ಒಂದು ಸರಿಯಾದ ಚೌಕಟ್ಟಿನಲ್ಲಿ ನಿರ್ವಹಿಸುವ ಮಾಹಿತಿ ಮತ್ತು ಸಹಾಯ ಹಸ್ತದ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಇದನ್ನು ಓದಿರಿ:

Bamboo Farmingನಲ್ಲಿ Zero Investmentನಿಂದ ನೀವು ಒಂದು ಹೆಕ್ಟೇರ್ನಲ್ಲಿ 7 Lakh ರೂಪಾಯಿಗಳನ್ನು ಪಡೆಯುತ್ತೀರಿ!

ರಾಸಾಯನಿಕ ಕ್ರಿಮಿನಾಶಕ ಸಿಂಪಡಣೆ, ದ್ರಾಕ್ಷಿ ತೋಟಕ್ಕೆ ಹಾನಿ,

ಸೊಲ್ಲಾಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಕ್ರಿಮಿನಾಶಕ ಬಳಸಿ ತೊಂದರೆಗೆ ಒಳಗಾಗಿದ್ದಾರೆ. ರೈತರು ಕೀಟ ಬಾಧೆಯಿಂದ ದ್ರಾಕ್ಷಿ ಬೆಳೆಯನ್ನು ರಕ್ಷಿಸಲು ತೋಟಗಳಿಗೆ ರಾಸಾಯನಿಕಯುಕ್ತ ಕೀಟನಾಶಕಗಳನ್ನು ಸಿಂಪಡಿಸಿದ್ದಾರೆ. ಆದರೆ ಈ ಸಿಂಪರಣೆ ನಂತರ ತೋಟಗಳು ಸುಧಾರಣೆ ಹೊಂದುವ ಬದಲು ಹಾನಿಗೊಳಗಾಗಿವೆ. ಇತ್ತೀಚಿನ ದಿನಗಳಲ್ಲಿ ದೇಶದ ಎಲ್ಲೆಡೆಯಲ್ಲಿ ಅಕ್ರಮ ಕಲಬೆರಕೆ ಕ್ರಿಮಿನಾಶಕಗಳ ಹಾವಳಿ ಹೆಚ್ಚಿದೆ. ಅಗ್ಗದ ಬೆಲೆಗೆ ಕಲಬೆರಕೆ ಕೀಟನಾಶಕಗಳನ್ನು ಖರೀದಿಸಿ ರೈತರನ್ನು ಮೋಸ ಗೊಳಿಸಲಾಗುತ್ತಿದೆ. ಇಂಥವರ ವಿರುದ್ಧ ಸಂತ್ರಸ್ತ ರೈತರು ಕೃಷಿ ಇಲಾಖೆಗೆ ದೂರು ನೀಡಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ಭಾರತ ದೇಶದಲ್ಲೆ ಮಹಾರಾಷ್ಟ್ರವು ಅತಿ ಹೆಚ್ಚು ದ್ರಾಕ್ಷಿಯನ್ನು ಉತ್ಪಾದಿಸುವ ರಾಜ್ಯವಾಗಿದೆ. ಇಲ್ಲಿನ ದ್ರಾಕ್ಷಿ ಬೆಳೆಗಾರರು ಸಹ ಪ್ರಕೃತಿಯ ವೈಪರೀತ್ಯವನ್ನು ಎದುರಿಸಬೇಕಾಗಿದೆ. ಪಂಢರಪುರ ತಾಲೂಕಿನಲ್ಲಿ ದ್ರಾಕ್ಷಿತೋಟದಲ್ಲಿ ಕೀಟಬಾಧೆ ಕಾಣಿಸಿಕೊಂಡಿತ್ತು. ಅದಕ್ಕಾಗಿ ರೋಗ ಹತ್ತಿಕ್ಕುವ ನಿಟ್ಟಿನಲ್ಲಿ ರೈತರು ರಾಸಾಯನಿಕ ಕ್ರಿಮಿನಾಶಕಗಳ ಮೊರೆ ಹೋಗಿದ್ದರು. ರೈತರು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಿ ರೋಗದಿಂದ ಪರಿಹಾರ ನಿರೀಕ್ಷಿಸುತ್ತಿದ್ದರು. ಆದರೆ, ಕ್ರಿಮಿನಾಶಕ ಸಿಂಪಡಣೆ ನಂತರ ತೋಟಗಳು ಸುಧಾರಿಸುವ ಬದಲು ದ್ರಾಕ್ಷಿತೋಟಗಳೆಲ್ಲ ಒಣಗಿ ನಿಂತಿವೆ. ಇದರಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ಕಟಾವಿನ ಸಮಯದಲ್ಲಿ ಒಣಗಿ ನಿಂತಿರುವದರಿಂದ ಇಷ್ಟು ದಿನದ ಕಸರತ್ತು ಹಾಳಾಯಿತೆಂದು ರೈತರು ಬೇಸರದಲ್ಲಿದ್ದಾರೆ.

ತನಿಖೆ ನಡೆಸುವಂತೆ ರೈತರ ಒತ್ತಾಯ

ಬೆಳೆ ಸಂಪೂರ್ಣ ಹಾನಿಯಾದ ನಂತರ ರೈತರು ತಾವು ಬಳಸಿದ ರಾಸಾಯನಿಕ ಕೀಟನಾಶಕಗಳ ಪ್ರಯೋಗಾಲಯ ಪರೀಕ್ಷೆಗೆ ಒತ್ತಾಯಿಸಿದ್ದಾರೆ. ಅಲ್ಲದೇ ನೇರವಾಗಿ ಪ್ರಯೋಗಾಲಯದಲ್ಲಿ ಕೀಟನಾಶಕ ಪರೀಕ್ಷೆಗೆ ಮುಂದಾಗಿದ್ದಾರೆ, ಇದಕ್ಕಾಗಿ ದ್ರಾಕ್ಷಿ ದಂಟು, ಕಾಂಡಗಳ ಮಾದರಿಗಳನ್ನು ಕಳುಹಿಸಿದ್ದಾರೆ. ನಂತರ ರೈತರು ಕಳಿಸಿಕೊಟ್ಟ ದ್ರಾಕ್ಷಿ ಬೆಳೆಯ ಸ್ಯಾಂಪಲ್ಸ್‌ಗಳನ್ನು ಪುಣೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಪ್ರಯೋಗಾಲಯದ ವರದಿಯಲ್ಲಿ ಬಂದಿರುವ ಮಾಹಿತಿ ಪ್ರಕಾರ, ಆ ಕೀಟನಾಶಕದಲ್ಲಿ ಕಳೆನಾಶಕದ ಅವಶೇಷಗಳು ಹೊರಬಂದಿವೆ. ಈ ಕಳೆನಾಶಕದ ಕೆಮಿಕಲ್ಸ್‌ನಿಂದಲೇ ತೋಟಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿರಿ:

ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬಕ್ಕೆ ಗುಡ್‌ನ್ಯೂಸ್‌ ಕೊಡ್ತಾರಾ ಪಿಎಂ ಮೋದಿ..?

ದಿನೆ ದಿನೆ ಬೆಳೆಯುತ್ತಿರುವ ರೈತರ ಸಮಸ್ಯೆಗಳು

ಹವಾಮಾನ ಬದಲಾವಣೆಯಿಂದಾಗಿ ಬೆಳೆಗಳ ಮೇಲೆ ಹಲವು ಬಗೆಯ ಕೀಟಗಳು ದಾಳಿ ಮಾಡುತ್ತಿರುತ್ತವೆ. ದ್ರಾಕ್ಷಿ ತೋಟಗಳ ತುಂಬ ಕೀಟಗಳು ಮುತ್ತಿಕೊಂಡಿವೆ. ಕೀಟಗಳ ಹಾವಳಿ ತಪ್ಪಿಸಲು ಸೋಲಾಪುರದ ಕಾಸೆಗಾಂವ್ ಮತ್ತು ತಲಣಿ ಗ್ರಾಮಗಳಲ್ಲಿ ರೈತರು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಬೇಕಾಯಿತು. ಇದರಿಂದ ಕೊನೆಯ ಹಂತದಲ್ಲಿ ಯಾವುದೇ ಹಾನಿಯಾಗುವುದಿಲ್ಲವೆಂದು ಭಾವಿಸಿದ್ದ ರೈತರಿಗೆ ಶಾಕ್‌ ಉಂಟಾಗಿದೆ. ಕಾರಣ ಸಿಂಪರಣೆ ಮಾಡಿದ ನಂತರ ದ್ರಾಕ್ಷಿತೋಟ ಮತ್ತು ಬಳ್ಳಿಯನ್ನು ಸುಧಾರಿಸುವ ಬದಲು ಬಳ್ಳಿ ಸುಟ್ಟು ಕೊಳೆಯುತ್ತಿದೆ. ಇದೆಲ್ಲಾ ಏಕಾಏಕಿ ಸಂಭವಿಸಿದ್ದು, ಕಟಾವಿನ ಸಂದರ್ಭ ಈ ಕೀಟನಾಶಕ ಹೆಚ್ಚು ಹಾನಿ ಉಂಟು ಮಾಡಿರುವ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರ ಆಗ್ರಹ

ಪ್ರಕೃತಿಯ ವೈಪರೀತ್ಯದಿಂದಾಗಿ ಈಗಾಗಲೇ ದ್ರಾಕ್ಷಿ ಉತ್ಪಾದನೆಯಲ್ಲಿ ಭಾರಿ ಕುಸಿತವಾಗಿದೆ. ಅಷ್ಟೇ ಅಲ್ಲ ಈ ವರ್ಷ ವೆಚ್ಚವೂ ಹೆಚ್ಚಿದೆ. ಈಗ ಕಳಪೆ ಕೀಟನಾಶಕ ಬಳೆಕೆಯೂ ಹಾನಿ ಉಂಟು ಮಾಡಿದೆ. ಇದಕ್ಕೆ ಸಂಬಂಧಪಟ್ಟ ಮಾರಾಟಗಾರರು ರೈತರಿಗೆ ಸ್ಪಂದಿಸದ ಕಾರಣ ರೈತರು ತನಿಖೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಕೃಷಿ ಇಲಾಖೆಗೆ ಕಾಸೇಗಾಂವ, ತಾನಲಿಯ ರೈತರು ಒತ್ತಾಯಿಸಿದ್ದಾರೆ.

ಇದನ್ನು ಓದಿರಿ:

old pension scheme update! ನೌಕರರಿಗೆ ದೊಡ್ಡ ಉಡುಗೊರೆ! ಸರ್ಕಾರದ ಘೋಷಣೆ!

Published On: 16 March 2022, 04:04 PM English Summary: grapes cro̧̧p ḑamage from pesticide spra̧̧̧y ̧ farmers complaint to the agri dept

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.