1. ಸುದ್ದಿಗಳು

ಕೆಲಸ ಕಳೆದುಕೊಂಡವರಿಗೆ ಗುಡ್‌ ನ್ಯೂಸ್‌: ಸರಕಾರವೇ ಭರಿಸಲಿದೆ ಪಿಎಫ್‌ ಹಣ!

ಕೊರೊನಾ ಲಾಕ್‌ಡೌನ್ ನಂತರ ಕೆಲಸ ಕಳೆದುಕೊಂಡ ದೇಶದ ಲಕ್ಷಾಂತರ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ದೀಪಾವಳಿ ಗಿಫ್ಟ್‌ ನೀಡಿದ್ದಾರೆ. ಕಳೆದ ಮಾರ್ಚ್ ನಿಂದ ಸೆಪ್ಟೆಂಬರ್‌ ವರೆಗೆ ಉದ್ಯೋಗ ಕಳೆದುಕೊಂಡ ನೌಕರರಿಗೆ, ಪಿಎಫ್ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸಲಿದೆ.

ಹೊಸ ನೇಮಕಾತಿ ಮಾಡುವ ಸಂಸ್ಥೆಗಳಿಗೆ ಸಬ್ಸಿಡಿ ನೀಡುವ ಹೊಸ ಉದ್ಯೋಗ ಸೃಷ್ಟಿ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ 3.0 ಯೋಜನೆಯಡಿ ಘೋಷಿಸಿದ್ದಾರೆ.

ಕಳೆದ ಮಾರ್ಚ್ ನಿಂದ ಸೆಪ್ಟೆಂಬರ್‌ ವರೆಗೆ ಉದ್ಯೋಗ ಕಳೆದುಕೊಂಡ ನೌಕರರಿಗೆ, ಪಿಎಫ್ ಮೊತ್ತವನ್ನು ಕೇಂದ್ರ ಸರಕಾರವೇ ಭರಿಸುವುದಾಗಿ ಘೋಷಿಸಿದೆ.  ಉದ್ಯೋಗ ಕಡಿತದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ನೌಕರರ ನೆರವು ನೀಡಲಾಗುವುದು. ನೌಕರರ ಕೊಡುಗೆ (ಶೇ. 12 ರಷ್ಟು ವೇತನ) ಮತ್ತು ಉದ್ಯೋಗದಾತರ ಕೊಡಗೆ (ಶೇ. 12 ರಷ್ಟು ವೇತನ) ಒಟ್ಟು ಶೇ. 24 ರಷ್ಟು ವೇತನವನ್ನು ಸಂಸ್ಥೆಗಳಿಗೆ ಎರಡು ವರ್ಷಗಳವರೆಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಉದ್ಯೋಗ ಕಳೆದುಕೊಂಡವರಿಗೆ ಪಿಎಫ್‌ ಹಣ, ಹಾಗೂ ತಿಂಗಳಿಗೆ 15 ಸಾವಿರ ರೂಪಾಯಿಗೂ ಕಡಿಮೆ ವೇತನ ಪಡೆಯುತ್ತಿದ್ದಂತ ಉದ್ಯೋಗಿಗಳಿಗೂ ಇಪಿಎಫ್ ಸೌಲಭ್ಯ ಸಿಗಲಿದೆ. 2020 ರ ಅಕ್ಟೋಬರ್ 1 ರಂದು ಅಥವಾ ನಂತರ ಉಗ್ಯೋಗದಲ್ಲಿರುವವರಿಗೆ ಈ ಸೌಲಭ್ಯ ಸಿಗಲಿದೆ. ಉದ್ಯೋಗದಾತ ಸಂಸ್ಥೆಯು ಇಪಿಎಫ್ಒ ನೋಂದಣಿಯಾಗಿದ್ದು, 2020 ಸೆಪ್ಟೆಂಬರ್ ವರಿಗಿರುವ ನೌಕರರ ಸಂಖ್ಯೆಯನ್ನು ಆಧರಿಸಿ ಹೊಸ ನೌಕರರನ್ನು ಸೇರಿಸಿದ್ದರೆ ಅವರಿಗೂ ಈ ಯೋಜನೆ ಅನ್ವಯಿಸುತ್ತದೆ ಎಂದರು.

ಇಪಿಎಫ್‌ಓನಲ್ಲಿ ರಿಜಿಸ್ಟರ್ ಆಗಿರುವ ಕಂಪನಿಯ ಹೊಸ ಉದ್ಯೋಗಿಗಳಿಗೆ ಪಿಎಫ್ ಸಬ್ಸಿಡಿಯನ್ನು ಘೋಷಿಸಿದ ಅವರು, ಒಂದು ಸಾವಿರ ಅಥವಾ ಅದಕ್ಕಿಂತ ಕಡಿಮೆ ನೌಕರರಿರುವ ಕಂಪನಿಗಳಿಗೆ ಮುಂದಿನ 2 ವರ್ಷಗಳ ಕಾಲ ಪಿಎಫ್ ಸಬ್ಸಿಡಿ ಸಿಗಲಿದೆ. ವೇತನದ ಶೇ.12ರಷ್ಟು ಪಿಎಫ್‌ ಹಣವನ್ನು ಕಂಪನಿ ಭರಿಸಿದರೆ, ಶೇ.12ರಷ್ಟು ಹಣವನ್ನು ಕೇಂದ್ರ ಸರಕಾರವೇ ಭರಿಸಲಿದೆ ಎಂದು ಘೋಷಿಸಿದ್ದಾರೆ.

50 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಇಗೆ ಕನಿಷ್ಟ ಎರಡು ಹೊಸ ಉದ್ಯೋಗಿಗಳನ್ನು ಸೇರಿಸಬೇಕು. 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಆ ಸಂಸ್ಥೆಗಳು ಕನಿಷ್ಟ ಐದು ಹೊಸ ಉದ್ಯೋಗಗಳನ್ನು ನಿಡಬೇಕಾಗುತ್ತದೆ. ಈ ಯೋಜನೆ ಜೂನ್ 30 2021 ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

Published On: 12 November 2020, 05:48 PM English Summary: govt to make pf contribution for these employees

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.