1. ಸುದ್ದಿಗಳು

ಕೃಷಿಕರಲ್ಲದವರೂ ಭೂಮಿ ಖರೀದಿಸಲು ಅವಕಾಶ

ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರಿವಾಜ್ಞೆ ಹೊರಡಿಸಿದ ಬಗ್ಗೆ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಪರವಿರೋಧ ಚರ್ಚೆ ನಡುವೆಯ ಅಂತಿಮವಾಗಿ ಕಾನೂನು ಜಾರಿಗೆ ಬಂದಿದೆ.

 ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸುವವರಿಗೆ ತಕ್ಷಣವೇ ನೋಂದಣಿ ಪ್ರಕ್ರಿಯೆ ಮಾಡಿಕೊಡಬೇಕು ಎಂದು ಸಬ್‌ ರಿಜಿಸ್ಟ್ರಾರ್‌ಗಳಿಗೆ ಕಂದಾಯ ಇಲಾಖೆ ಸೂಚಿಸಿದೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯ ಸುಗ್ರೀವಾಜ್ಞೆಗೆ ಅಂಕಿತ ಬಿದ್ದ ದಿನದಿಂದಲೇ ಕಾನೂನು ಜಾರಿ ಆಗಿದೆ. ಆದರೆಇದಕ್ಕೊಂದು ಆದೇಶ ಹೊರಡಿಸುವಂತೆ ಸಬ್ ‌ರಿಜಿಸ್ಟ್ರಾರ್‌ಗಳು ಕೋರಿಕೆ ಸಲ್ಲಿಸಿದ್ದರು. ಆದ್ದ
ರಿಂದ ಈ ಕುರಿತು ಆದೇಶ ಹೊರ ಡಿಸಲಾಗಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಇನ್ನೂ ಮುಂದೆ ರಾಜ್ಯದಲ್ಲಿ ಯಾರೂ ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ತಿದ್ದುಪಡಿ ಕಾಯ್ದೆ ಅನ್ವಯ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರದವರೂ ಸಹ ಕೃಷಿ ಭೂಮಿ ಖರೀದಿಸಬಹುದು. ಈ ಮೂಲಕ ಕುಟುಂಬವೊಂದು ಗರಿಷ್ಠ 216 ಎಕರೆ ಜಮೀನು ಹೊಂದಬಹುದು.

Published On: 19 August 2020, 05:56 PM English Summary: govt opens up for agricultural land purchase

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.